ಬೇಗೂರು:ಇದೀಗ ಬೇಗೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಮನೆಗೆಳಿಗೆ ಕನ್ನ ಹಾಕುತ್ತಲೇ ಕುಖ್ಯಾತನಾದ ಕಳ್ಳ ನವಾಜ್​ ಶರೀಫ್​ನನ್ನು ಬಂಧಿಸಿದ್ದಾರೆ.
ಈ ಕಿರಾತಕ, ಮನೆಯ ಹೊರಗಡೆ ಇರುವ ಚಪ್ಪಲಿ ಸ್ಟಾಂಡ್ ಹಾಗೂ ಹೂ ಕುಂಡಗಳಲ್ಲಿ ಬೀಗ ಇಟ್ಟು ಹೋಗುತ್ತಿದ್ದ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ. ಚಪ್ಪಲಿ ಸ್ಟ್ಯಾಂಡ್​ ಅಥವಾ ಹೂಕುಂಡದ ಬಳಿ ಬೀಗ ಇಟ್ಟು ಕೆಲಸಕ್ಕೆ ಹೋಗುತ್ತಿದ್ದಂತೆಯೇ ಈತ ನವಾಜ್​ ಶರೀಫ್​ ಎಂಟ್ರಿ ನೀಡುತ್ತಿದ್ದ. ಅದಾದ ಮೇಲೆ ನಷ್ಟದ್ದೇ ಕಥೆ.
ಈವರೆಗೆ ಈ ಭೂಪ 9 ಮನೆಗಳನ್ನು ದರೋಡೆಗೈದಿರುವುದು ಬೆಳಕಿಗೆ ಬಂದಿದೆ. ಈತನ ವಿರುದ್ಧ ಒಟ್ಟು 27 ಪ್ರಕರಣಗಳು ದಾಖಲಾಗಿದ್ದು ಇಷ್ಟು ದಿನಗಳ ಕಾಲ ಪೊಲೀಸರಿಂದ ಕಣ್ತಪ್ಪಿಸಿ ಓಡಾಡುತ್ತಿದ್ದ.
ಇದೀಗ ಬಂಧಿತನಿಂದ 16 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದ್ದು ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ತನಿಖೆ ಆರಂಭಿಸಿರುವ ಪೊಲೀಸರು, ಈತ ಇನ್ನೆಷ್ಟು ಕಡೆಗಳಲ್ಲಿ ಕಳ್ಳತನ ಮಾಡಿದ್ದಾನೆ ಎಂದು ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − seven =
Remember me
