ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ವಿಚ್ಛೇದಿತ ಹಾಗೂ ಒಂಟಿ ಮಹಿಳೆಯರನ್ನೇ ಗುರಿಯಾಗಿಸಿಕೊಂಡು, ಉದ್ಯಮಿಯ ಸೋಗಿನಲ್ಲಿ ಸ್ನೇಹ ಬೆಳೆಸಿ ಲಕ್ಷಾಂತರ ರೂ. ಪಡೆದು ವಂಚಿಸುತ್ತಿದ್ದ ಟೆಕ್ಕಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಕೋರಮಂಗಲ ನಿವಾಸಿ ಜೋ ಅಬ್ರಹಾಂ ಮ್ಯಾಥ್ಯೂಸ್ ಅಲಿಯಾಸ್ ತಜಾಂತ್ ಪ್ರಸಾದ್ (38) ಬಂಧಿತ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆಯಲಾಗಿದೆ. ಇದೇ ರೀತಿ ಹಲವು ಮಹಿಳೆಯರಿಗೆ ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವುದು ವಿಚಾರಣೆಯಿಂದ ಗೊತ್ತಾಗಿದೆ ಎಂದು ವಿವೇಕನಗರ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿಈ ಸಿನಿಮಾ ಟೆಕ್ಕಿಗಳಿಂದ ಟೆಕ್ಕಿಗಳಿಗಾಗಿ…
ಕೇರಳ ಮೂಲದವನಾದ ಜೋ ಅಬ್ರಹಾಂ, ಈ ಹಿಂದೆ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದಲ್ಲಿ ಸ್‌ಟಾವೇರ್ ಇಂಜಿನಿಯರ್ ಆಗಿದ್ದ. 4-5 ವರ್ಷಗಳ ಹಿಂದೆ ನಗರಕ್ಕೆ ಬಂದು ಕೋರಮಂಗಲದಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದ. ಖಾಸಗಿ ಕಂಪನಿಯೊಂದರಲ್ಲಿ ಸ್‌ಟಾವೇರ್ ಇಂಜಿನಿಯರ್ ಆಗಿದ್ದ.
ಪತಿಯಿಂದ ಪ್ರತ್ಯೇಕವಾಗಿರುವ, ವಿಚ್ಛೇದಿತ ಹಾಗೂ ಶ್ರೀಮಂತ ಒಂಟಿ ಮಹಿಳೆಯರನ್ನೇ ಸಾಮಾಜಿಕ ಜಾಲತಾಣದಲ್ಲಿ ಟಾರ್ಗೆಟ್ ಮಾಡಿಕೊಂಡು ಸ್ನೇಹ ಬೆಳೆಸುತ್ತಿದ್ದ. ತಾನು ದೊಡ್ಡ ಉದ್ಯಮಿ. ಪೋರ್ಷ್ ಕಾರು ಬಳಸುತ್ತಿರುವುದಾಗಿ ನಂಬಿಸುತ್ತಿದ್ದ. ಬಳಿಕ ೆನ್ ನಂಬರ್ ಪಡೆದು ಚಾಟಿಂಗ್ ಮೂಲಕ ಸಲುಗೆ ಬೆಳೆಸಿಕೊಳ್ಳುತ್ತಿದ್ದ. ಮದುವೆಯಾಗುವುದಾಗಿ ಪಬ್, ಬಾರ್ ಸೇರಿ ನಾನಾ ಕಡೆ ಸುತ್ತಾಡಿಸಿ ಲಕ್ಷಾಂತರ ರೂ. ಪಡೆದು ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗುತ್ತಿದ್ದ.
ಇದನ್ನೂ ಓದಿನಿರಾಶ್ರಿತರ ಹೊಟ್ಟೆ ತುಂಬಿಸಲು ಮೂಟೆ ಹೊರುತ್ತಿದ್ದಾರೆ ಟೆಕ್ಕಿಗಳು!
2018ರಲ್ಲಿ ಟಿಂಡರ್ ಆ್ಯಪ್‌ನಲ್ಲಿ ಖಾಸಗಿ ಶಾಲೆಯೊಂದರ ಶಿಕ್ಷಕಿಯನ್ನು ಪರಿಚಯಿಸಿಕೊಂಡಿದ್ದ. ಆ್ಯಪ್‌ನಲ್ಲಿ ಪ್ರತಿನಿತ್ಯ ಚ್ಯಾಟಿಂಗ್ ಮಾಡುತ್ತಾ, ಆಕೆಯೊಂದಿಗೆ ಸ್ನೇಹ ಬೆಳೆಸಿ ೆನ್ ಪಡೆದಿದ್ದ. ಕಾರು ಮಾರಾಟದ ಉದ್ಯಮಿ ಎಂದು ಶಿಕ್ಷಕಿಗೆ ನಂಬಿಸಿದ್ದ. ‘ನನಗೆ ನೀವು ಇಷ್ಟವಾಗಿದ್ದು, ಒಪ್ಪುವುದಾದರೆ ಮದುವೆಯಾಗುತ್ತೇನೆ’ ಎಂದಿದ್ದ. ಬಳಿಕ ಕೋರಮಂಗಲದ ಪಬ್‌ನಲ್ಲಿ ಭೇಟಿಯಾಗಿ ಸಲುಗೆ ಬೆಳೆಸಿಕೊಂಡಿದ್ದ.
ಉದ್ಯಮದಲ್ಲಿ ನಷ್ಟವಾಗಿದೆ. ಆರ್ಥಿಕ ಸಮಸ್ಯೆಯಾಗುತ್ತಿದ್ದು, ತಂಗಿಯ ಕಾಲೇಜಿನ ಫೀಜ್ ಕಟ್ಟಲು ಹಣ ಇಲ್ಲ ಎಂದು ಸುಳ್ಳು ಹೇಳಿದ್ದ. ಆತನ ಮಾತಿಗೆ ಮರುಳಾದ ಶಿಕ್ಷಕಿ ಮೊದಲಿಗೆ 10 ಲಕ್ಷ ರೂ. ಕೊಟ್ಟಿದ್ದಾಳೆ. ಇದಾದ ಬಳಿಕವೂ ಸುಳ್ಳು ಹೇಳಿ ಹಂತಹಂತವಾಗಿ 21 ಲಕ್ಷ ರೂ. ತೆಗೆದುಕೊಂಡಿದ್ದ. ಇದೇ ವೇಳೆ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, 6 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪಡೆದು ಮದುವೆಯಾಗದೆ ಯಾಮಾರಿಸಿದ್ದ. ಶಿಕ್ಷಕಿ ಕೊಟ್ಟ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ, ಇದೇ ರೀತಿ 2-3 ಮಹಿಳೆಯರಿಗೆ ವಂಚಿಸಿರುವುದು ಗೊತ್ತಾಗಿದೆ. ಈ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿವೈರಸ್ ಹರಡಲು ಕರೆ ನೀಡಿದ್ದ ಟೆಕ್ಕಿಗಿಲ್ಲ ಜಾಮೀನು
ಈ ಹಿಂದೆ ಎಸ್‌ಬಿಐ ಬ್ಯಾಂಕ್ ಲಾಲ್‌ಬಾಗ್ ಶಾಖೆಗೆ ನಕಲಿ ದಾಖಲೆಗಳನ್ನು ಕೊಟ್ಟು 9.39 ಕೋಟಿ ರೂ. ನಿವೇಶನ ಸಾಲ ಪಡೆದು ವಂಚಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಈತನ ವಿರುದ್ಧ 2019ರಲ್ಲಿ ಚೆನ್ನೈ ಸಿಬಿಐನಲ್ಲಿ ಎ್ಐಆರ್ ದಾಖಲಾಗಿದೆ. ಅಬ್ರಹಾಂ 75 ಲಕ್ಷ ರೂ. ಸಾಲ ಪಡೆದು ವಂಚಿಸಿದ್ದು, ಪ್ರಕರಣದ 2ನೇ ಆರೋಪಿ ಎಂದು ಎ್ಐಆರ್‌ನಲ್ಲಿ ಉಲ್ಲೇಖವಾಗಿದೆ. ಅಲ್ಲದೇ, 2015ರಲ್ಲಿ ಹೊಸಹಳ್ಳಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ನೆಲೆಸಿದ್ದಾಗ ನಿವೃತ್ತ ಅಧಿಕಾರಿಯ ಸ್ನೇಹ ಬೆಳೆಸಿ 17 ಲಕ್ಷ ರೂ. ನಗದು ಹಾಗೂ ಆಡಿ ಕಾರು ಪಡೆದು ಯಾಮಾರಿಸಿರುವ ಪ್ರಕರಣವೂ ಬಯಲಾಗಿದೆ.
ಯುವತಿ ಹೆಸರಿನಲ್ಲಿ ಟೆಕ್ಕಿಗೆ ವಂಚಿಸಲು ಕತೆ ಕಟ್ಟಿದ ತಾಯಿಗೆ ಮಗನೇ ಡೈರೆಕ್ಟರ್​…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 16 =
Remember me
