ಕೊಪ್ಪಳ:ಆಸ್ಪತ್ರೆಯಲ್ಲಿ ಎಲ್ಲರೂ ಅವರವರ ಚಿಂತೆಯಲ್ಲಿರುತ್ತಾರೆ, ಅಲ್ಯಾರು ಕಳ್ಳರು ಇರುತ್ತಾರೆ ಎಂಬ ಅತಿಯಾದ ಆಶಾವಾದವಂತೂ ಒಳ್ಳೆಯದಲ್ಲ ಎಂಬುದಕ್ಕೆ ಈ ಪ್ರಕರಣವೇ ನಿದರ್ಶನ. ಏಕೆಂದರೆ ಇಲ್ಲೊಬ್ಬಳು ಆಶಾ ಕಾರ್ಯಕರ್ತೆ ಎಂದು ಸುಳ್ಳು ಹೇಳಿ ಮಾಂಗಲ್ಯವನ್ನೇ ಎಗರಿಸಿ ಪರಾರಿ ಆಗಿದ್ದಾಳೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಈ ಪ್ರಕರಣ ನಡೆದಿತ್ತು. ರಾಯಚೂರು ಜಿಲ್ಲೆಯ ಹಂಚಿನಾಳ ನಿವಾಸಿ ಗಂಗಮ್ಮ ಎಂಬಾಕೆಯೇ ಆಶಾ ಕಾರ್ಯಕರ್ತೆ ಎಂದು ಸುಳ್ಳು ಹೇಳಿದ್ದ ಮಹಿಳೆ. ಗರ್ಭಿಣಿ ರೇಣುಕಾ ಎಂಬವರು ಮೋಸಕ್ಕೆ ಒಳಗಾದವರು.
ಕೆಲವು ದಿನಗಳ ಹಿಂದೆ ರೇಣುಕಾ ಎಂಬವರು ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ತಾನು ಆಶಾ ಕಾರ್ಯಕರ್ತೆ ಎಂದು ಪರಿಚಯಿಸಿಕೊಂಡಿದ್ದ ಗಂಗಮ್ಮ ಸ್ಕ್ಯಾನಿಂಗ್ ಮಾಡಿಸುವುದಾಗಿ ಕರೆದುಕೊಂಡು ಹೋಗಿ, ಒಂದೂವರೆ ತೊಲೆಯ ಮಾಂಗಲ್ಯ ಸರ ಬಿಚ್ಚಿಸಿದ್ದು, ಬಳಿಕ ಅದರೊಂದಿಗೆ ಪರಾರಿಯಾಗಿದ್ದಳು. ಕೆಲವು ಹೊತ್ತಿನ ಬಳಿಕ ಆಕೆ ಕಾಣದೇ ಇದ್ದಾಗಲೇ ಅವಳು ನಕಲಿ ಆಶಾ ಕಾರ್ಯಕರ್ತೆ ಎಂಬ ವಿಷಯ ಗೊತ್ತಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಗಂಗಾವತಿ ಪೊಲೀಸರು ಸಿಸಿಟಿವಿ ಕ್ಲಿಪ್ಪಿಂಗ್ ಆಧರಿಸಿ ತನಿಖೆ ನಡೆಸಿದ್ದು, ಗಂಗಮ್ಮನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.
ವಿದ್ಯುತ್ ಸ್ಪರ್ಶದಿಂದಾಗಿ ‘ಜೂನಿಯರ್ ರವಿಚಂದ್ರನ್​’ ಸಾವು…

ಹೆಂಡತಿ ತವರಿಗೆ ಹೋದ್ಲು ಅಂತ ಮಗಳ ಜತೆ ಆತ್ಮಹತ್ಯೆಗೆ ಯತ್ನಿಸಿದ ಗಂಡ; ಆಮೇಲಾಗಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರು ಡಿಜಿಪಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
