ಮಂಗಳೂರು:ಗಂಡನಿಂದ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸುವ ನೆಪದಲ್ಲಿ ಮತಾಂತರಗೊಂಡ ಮಹಿಳೆಯ ಸ್ನೇಹ ಸಂಪಾದಿಸಿ ಆಕೆ ಮತ್ತು ಆಕೆಯ ಅಪ್ರಾಪ್ತ ವಯಸ್ಸಿನ ಪುತ್ರಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸಿದ್ದೀಕ್‌ನನ್ನು ಉಳ್ಳಾಲ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಈತ ಎಸ್‌ಡಿಪಿಐ ಮುಖಂಡ ಎಂದು ಹೇಳಲಾಗಿದೆ. 15 ವರ್ಷಗಳ ಹಿಂದೆ ಇಸ್ಲಾಂಗೆ ಮತಾಂತರಗೊಂಡಿದ್ದ ಮಹಿಳೆಯನ್ನು ಗಂಡ ತೊರೆದಿದ್ದ. ಆಕೆ ಅಪ್ರಾಪ್ತ ವಯಸ್ಸಿನ ಮಕ್ಕಳ ಜತೆ ಉಳ್ಳಾಲದ ಒಂಬತ್ತುಕೆರೆ ಎಂಬಲ್ಲಿ ವಾಸವಿದ್ದರು.
ಗಂಡನಿಂದ ನ್ಯಾಯ ದೊರಕಿಸಿ ಕೊಡುವ ನೆಪದಲ್ಲಿ ಮಹಿಳೆ ಜತೆ ಆರೋಪಿ ಸಲುಗೆ ಬೆಳೆಸಿಕೊಂಡು, ಅತ್ಯಾಚಾರ ಎಸಗಿ, ಪುತ್ರಿಯರಿಗೂ ಕಿರುಕುಳ ನೀಡಿದ್ದ. ಈ ಬಗ್ಗೆ ಮಹಿಳೆ ಜ.16ರಂದು ಉಳ್ಳಾಲ ಠಾಣೆಗೆ ದೂರು ನೀಡಿದ್ದರು. ಆರೋಪಿ ವಿರುದ್ಧ ಅತ್ಯಾಚಾರ ಹಾಗೂ ಪೋಕ್ಸೋ ಪ್ರಕರಣ ದಾಖಲಿಸಲಾಗಿತ್ತು.
ಎಫ್​ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ: ನಾಳೆ ನಡೆಯಬೇಕಿದ್ದ ಪರೀಕ್ಷೆ ಮುಂದೂಡಿಕೆ

ಗಂಡ ಮನೇಲಿಲ್ಲ ಎಂಬ ಬೇಸರದಿಂದಾಗಿ ಐವರು ಮಕ್ಕಳಿಗೆ ಗುಂಡಿಟ್ಟು ಕೊಂದಳು, ಮನೆಗೂ ಬೆಂಕಿ ಇಟ್ಟು ಸುಟ್ಟಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 15 =
Remember me
