ಮೈಸೂರು:ತಪ್ಪು ಮಾಡಿ ಸರ್ಕಾರಿ ಅಧಿಕಾರಿಗಳ ವಿರುದ್ಧ ದರ್ಪ ತೋರಿದ್ದಲ್ಲದೆ ಪೊಲೀಸರ ಎದುರೇ ಮಚ್ಚು ತೋರಿಸಿದ್ದ ಕಾಂಗ್ರೆಸ್ ಮುಖಂಡ ಶಫೀಕ್ ಅಹಮದ್​ ಮತ್ತು ಆತನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಂದು ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಸುದ್ದಿಗೋಷ್ಠಿ ನಡೆಸಿ ಬಂಧನದ ವಿಷಯವನ್ನು ತಿಳಿಸಿದ್ದಾರೆ.
ಸಾತಗಳ್ಳೀ ಬಸ್ ಡಿಪೋಗೆ ಸೇರಿದ್ದ ಕಟ್ಟಡವನ್ನು 2017ರಲ್ಲಿ 12 ವರ್ಷಗಳ ಅವಧಿಗೆ ಬಾಡಿಗೆ ಪಡೆದಿದ್ದ ಶಫೀಕ್ ಅಹಮದ್, ಪ್ರತಿ ತಿಂಗಳು 48 ಲಕ್ಷ ರೂ. ಬಾಡಿಗೆ ಕೊಡುತ್ತಿದ್ದು, ಎರಡು ವರ್ಷದಿಂದ ಬಾಡಿಗೆ ಹಣ ಪಾವತಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಶನಿವಾರ ಸಾತಗಳ್ಳಿ ಬಸ್ ಡಿಪೋ ಅಧಿಕಾರಿಗಳು ಕ್ರಮ ಜರುಗಿಸಲು ನೋಟಿಸ್ ನೀಡಲು ಹೋಗಿದ್ದಾಗ ಗಂಡ-ಹೆಂಡತಿ ದರ್ಪ ತೋರಿದ್ದಲ್ಲದೆ, ಪೊಲೀಸರ ಎದುರೇ ಮಚ್ಚು ತೋರಿಸಿದ್ದರು.
ಬಾಡಿಗೆ ಕಟ್ಟದ್ದಕ್ಕೆ ಕೋವಿಡ್ ಕಾರಣ ನೀಡಿ ಕೋರ್ಟ್ ಮೂಲಕ ಸ್ಟೇ ತಂದಿದ್ದ ಶಫಿ, ನಂತರ ಸ್ಟೇ ತೆರವುಗೊಂ ಆದ ನಂತರ ಅಧಿಕಾರಿಗಳು ಕಟ್ಟಡ ಖಾಲಿ ಮಾಡಿಸಲು ಹೋಗಿದ್ದರು. ಸಾರಿಗೆ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡದೆ ಹೋಗಿದ್ದರಿಂದ ತಕ್ಷಣಕ್ಕೆ ಪೊಲೀಸರು ಸ್ಥಳದಲ್ಲಿ ಇರಲಿಲ್ಲ. ಘಟನೆ ಬಳಿಕ ದಂಪತಿ ಪರಾರಿಯಾಗಿದ್ದರು. ನಿನ್ನೆ ವಿರಾಜಪೇಟೆ ಬಳಿ ಅವರನ್ನು ಬಂಧಿಸಿ, ಇಬ್ಬರ ವಿರುದ್ಧವೂ ರೌಡಿಶೀಟರ್ ತೆರೆಯಲಾಗಿದೆ.
ರಸ್ತೆ ಸಂಪರ್ಕ ಇಲ್ಲದ್ದರಿಂದ ರೋಗಿಯನ್ನು 5 ಕಿ.ಮೀ. ದೂರ ಹೊತ್ತುಕೊಂಡು ಆಸ್ಪತ್ರೆಗೆ ಹೋದ ಕುಟುಂಬಸ್ಥರು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 5 =
Remember me
