ಬೆಂಗಳೂರು:ಅಪಹರಣ ಪ್ರಕರಣದಲ್ಲಿ ಬೆನ್ನಟ್ಟಿ ಹೋದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ’ಟೀಂ ಗರುಡ 900’ ದರೋಡೆ ಗ್ಯಾಂಗ್‌ನ ಇಬ್ಬರು ಸದಸ್ಯರ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಉಡುಪಿ ಕಾಪು ಮೂಲದ ಮೊಹಮ್ಮದ್ ಆಶಿಕ್ (22), ಇಸಾಕ್ (21) ಬಂಧಿತರು. ತಲೆಮರೆಸಿಕೊಂಡಿರುವ ಇಬ್ಬರಿಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಆರೋಪಿಗಳಿಂದ ಹಲ್ಲೆಗೊಳಗಾದ ಕೊತ್ತನೂರು ಪಿಎಸ್‌ಐ ಉಮೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳ ಬಂಧನದಿಂದ ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 15 ಕೇಸ್​ಗಳು ಬೆಳಕಿಗೆ ಬಂದಿದೆ.
ಬಂಧಿತರು ತಮ್ಮ ಇಬ್ಬರು ಸಹಚರರ ಜತೆಗೆ ಸೇರಿ ಮಾ.26ರಂದು ಬೆಳಗ್ಗೆ ನಂಬರ್ ಪ್ಲೇಟ್ ಇಲ್ಲದ ರಿಟ್ಸ್ ಕಾರಿನಲ್ಲಿ ಕೊತ್ತನೂರಿನ ಬಳಿ ಬಂದು ದರೋಡೆಗೆ ಹೊಂಚು ಹಾಕುತ್ತಿದ್ದರು. ಅದೇ ದಾರಿಯಲ್ಲಿ ಬಂದ ಯುವಕನ ಕಾರನ್ನು ಅಡ್ಡಗಟ್ಟಿ ಆತನಿಗೆ ಚೂರಿ ತೋರಿಸಿ ತಾವು ತೋರಿಸಿದ ಕಡೆಗೆ ಹೋಗುವಂತೆ ಬೆದರಿಸಿದ್ದರು. ಆತನ ಕಾರಿನಲ್ಲೇ ನಗರದಾದ್ಯಂತ ಸುತ್ತಾಡಿಸಿ ಚಿನ್ನದ ಉಂಗುರ ಕಸಿದುಕೊಂಡಿದ್ದರು. ಸಾಲದ್ದಕ್ಕೆ ಎಟಿಎಂ ಕಾರ್ಡ್ ಕಸಿದುಕೊಂಡು ಎಟಿಎಂ ಕೇಂದ್ರದಿಂದ ಸಾವಿರಾರು ರೂ. ಹಣ ಡ್ರಾ ಮಾಡಿಸಿಕೊಂಡಿದ್ದರು.
ಬಳಿಕ ಯುವಕನನ್ನು ಬೆಳ್ಳಂದೂರು, ವೈಟ್‌ಫೀಲ್ಡ್ ಕಡೆ ಕರೆದುಕೊಂಡು ಹೋಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಹೆಚ್ಚುವರಿಯಾಗಿ 50 ಸಾವಿರ ರೂ. ಕೊಡದಿದ್ದರೆ ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯಿಸಿದ್ದರು. ನಂತರ ಲೈಂಗಿಕವಾಗಿ ಬಳಸಿಕೊಂಡು ರಸ್ತೆ ಮಧ್ಯೆ ಬಿಟ್ಟು ಹೋಗಿದ್ದರು. ಸುಲಿಗೆಗೆ ಒಳಗಾದ ಯುವಕ ಕೊತ್ತನೂರು ಪೊಲೀಸ್ ಠಾಣೆಗೆ ಈ ಕುರಿತು ದೂರು ಕೊಟ್ಟಿದ್ದ.
ಮಂಗಳವಾರ (ಏ.5) ಸಂಜೆ ಜಕ್ಕೂರು ಸಮೀಪ ರಿಟ್ಸ್ ಕಾರಿನಲ್ಲಿ ಆರೋಪಿಗಳು ಸಂಚರಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ಕೊತ್ತನೂರು ಠಾಣೆಯ ಇನ್‌ಸ್ಪೆಕ್ಟರ್ ಚನ್ನೇಶ್ ನೇತೃತ್ವದ ತಂಡ ಆರೋಪಿಗಳ ಕಾರನ್ನು ಪತ್ತೆ ಹಚ್ಚಿ, ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿದ್ದರು. ಶಿವರಾಮ ಕಾರಂತ ಕ್ಲಬ್ ಬಳಿ ಆರೋಪಿಗಳ ಕಾರನ್ನು ಪೊಲೀಸರು ಅಡ್ಡಹಾಕಿದ್ದರು. ಆಶಿಕ್ ಹಾಗೂ ಐಸಾಕ್‌ನನ್ನು ಬಂಧಿಸಲು ಹೋದ ಪಿಎಸ್‌ಐ ಉಮೇಶ್ ಮೇಲೆ ಡ್ಯಾಗರ್​ನಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ್ದರು. ಇನ್‌ಸ್ಪೆಕ್ಟರ್ ಚೆನ್ನೇಶ್ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದರೂ ಆರೋಪಿಗಳು ಪೊಲೀಸರ ಮೇಲೆ ಮತ್ತೆ ಹಲ್ಲೆ ನಡೆಸಲು ಮುಂದಾದಾಗ ಆತ್ಮರಕ್ಷಣೆಗಾಗಿ ಇಬ್ಬರು ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ಆರೋಪಿಗಳು ಚಿಕ್ಕ ವಯಸ್ಸಿನಲ್ಲೇ ದರೋಡೆ, ಸುಲಿಗೆ, ಕಳ್ಳತನ, ಹಸುಗಳ್ಳತನ ಕೃತ್ಯದಲ್ಲಿ ತೊಡಗುತ್ತಿದ್ದರು. ಉಡುಪಿ, ಮಂಗಳೂರು, ಕುಂದಾಪುರ ಕಡೆ ‘ಟೀಂ ಗರುಡ 900’ ಹೆಸರಿನ ತಂಡ ರಚಿಸಿ ರಾತ್ರಿ ಹೊತ್ತು ಓಡಾಡುವವರನ್ನು ದರೋಡೆ ಮಾಡುತ್ತಿದ್ದರು. ಬಂದ ಹಣದಲ್ಲಿ ಐಶಾರಾಮಿ ಜೀವನ ನಡೆಸುತ್ತಿದ್ದರು. ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಬಂಧನಕ್ಕೊಳಗಾಗಿ ಜಾಮೀನು ಪಡೆದು, ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದರು. ನ್ಯಾಯಾಲಯದಿಂದ ಹೊರಡಿಸಿರುವ ವಿವಿಧ ಪೊಲೀಸ್ ಠಾಣೆಗಳಲ್ಲಿ 10 ವಾರೆಂಟ್ ಬಾಕಿ ಇತ್ತು.
ಆರೋಪಿಗಳ ಪತ್ತೆಗಾಗಿ ಕೊತ್ತನೂರು ಪೊಲೀಸರು ವಿಶೇಷ ತಂಡ ರಚಿಸಿ, ಕೃತ್ಯ ನಡೆದ ಸ್ಥಳಗಳಲ್ಲಿ ಸಿಸಿಕ್ಯಾಮರಾ ಪರಿಶೀಲಿಸಿದಾಗ ಆರೋಪಿಗಳು ದರೋಡೆ ಮಾಡಿರುವ ದೃಶ್ಯ ಸೆರೆಯಾತ್ತು. ಉಡುಪಿ, ಮಂಗಳೂರು ಮತ್ತಿತರ ಕಡೆಗಳಿಗೆ ಹೋಗಿದ್ದ ಪೊಲೀಸರ ತಂಡ, ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿತ್ತು.
ಹಿಂದು ರುದ್ರಭೂಮಿಯಲ್ಲಿನ ಸಮಾಧಿಗಳನ್ನು ವಿರೂಪಗೊಳಿಸಿದ ಎಸ್​ಡಿಪಿಐ?!

ಕಾರುಗಳ ಮಧ್ಯೆ ಭೀಕರ ಅಪಘಾತ; ಸ್ಥಳದಲ್ಲೇ ಇಬ್ಬರ ಸಾವು, ಮೂವರಿಗೆ ಗಾಯ, ಒಬ್ಬರ ಕಾಲು ಮುರಿತ…

ಬೆಂಗಳೂರು ಬಿಟ್ಟು ಹೈದರಾಬಾದ್​ಗೆ ಬನ್ನಿ ಎಂದ ತೆಲಂಗಾಣ ಸಚಿವ; ದಿಟ್ಟ ಉತ್ತರ ಕೊಟ್ಟ ಡಾ.ಕೆ.ಸುಧಾಕರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
