ಕಲ್ಪೆಟ್ಟ:ಮದುವೆ ಬಳಿಕ ಮಹಿಳೆಯರ ಚಿನ್ನಾಭರಣ ದೋಚುತ್ತಿದ್ದ ಆರೋಪಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ರಶೀದ್ (41) ಎಂದು ಗುರುತಿಸಲಾಗಿದೆ. ಈತ ಚಿನ್ನಾಭರಣ ದೋಚಲೆಂದೇ ಮದುವೆ ಆಗುತ್ತಿದ್ದ.
ಇತ್ತೀಚೆಗಷ್ಟೇ ವಿವಾಹವಾದ ಬಳಿಕ ಮಾನಂತವಾಡಿಯ ಪಿಲಕಾವುನಲ್ಲಿರುವ ವಧುವಿನ ಮನೆಯಲ್ಲಿ ವಾಸವಿದ್ದ ವೇಳೆ ವೈತಿರಿ ಪೊಲೀಸರು ಆರೋಪಿ ರಶೀದ್​ನನ್ನು ಬಂಧಿಸಿದ್ದಾರೆ. ಸುಮಾರು 10 ಮಹಿಳೆಯರನ್ನು ಮದುವೆಯಾಗಿ ಈತ ವಂಚನೆ ಮಾಡಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ಬೇರೊಬ್ಬಳ ಜತೆ ನಿಶ್ಚಿತಾರ್ಥ ಮಾಡಿಕೊಂಡ ಪ್ರಿಯಕರ; ಕುದಿಯುವ ಎಣ್ಣೆ ಸುರಿದ ಯುವತಿ !
ಆರ್ಥಿಕವಾಗಿ ದುರ್ಬಲವಾಗಿರುವ ಮಹಿಳೆಯರಿಗೆ ಈತ ವಂಚಿಸುತ್ತಿದ್ದ ಎನ್ನಲಾಗಿದೆ. ಮದುವೆಯಾದ ಕೆಲವು ತಿಂಗಳ ನಂತರ ಚಿನ್ನಾಭರಣಗಳನ್ನು ಕದಿಯುವುದು ಮತ್ತು ಬಿಟ್ಟು ಹೋಗುವುದು ಈತನ ಕಾರ್ಯ ವಿಧಾನವಾಗಿತ್ತು. ಇದಾದ ನಂತರ ರಶೀದ್ ಮುಂದಿನ ಬಲಿಪಶುವನ್ನು ಹುಡುಕಿ ಆಕೆಯನ್ನು ಮದುವೆಯಾಗಿ ವಂಚನೆ ಮುಂದುವರಿಸುತ್ತಿದ್ದ. ಅದೇ ರೀತಿ 2011ರಲ್ಲಿ ವೈತಿರಿಯಲ್ಲಿ ಮತ್ತೊಬ್ಬ ಮಹಿಳೆಗೆ ವಂಚಿಸಿದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು.
ಆರೋಪಿಯ ಬಗ್ಗೆ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸಲಾಗಿದ್ದು, ಆತನ ವಿರುದ್ಧ ಇದೇ ರೀತಿಯ ಇತರ ಪ್ರಕರಣಗಳಿವೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವರದಿಗಳ ಪ್ರಕಾರ, ರಶೀದ್ ಕಳ್ಳತನ ಪ್ರಕರಣಗಳಲ್ಲಿಯೂ ಆರೋಪಿಯಾಗಿದ್ದಾನೆ.(ಏಜೆನ್ಸೀಸ್​)
ಚಾರ್ಜ್​ ಹಾಕಿದ್ದ ವೇಳೆ ಎಲೆಕ್ಟ್ರಿಕ್​ ಸ್ಕೂಟರ್​ ಸ್ಫೋಟ: ಸುಟ್ಟು ಕರಕಲಾದ ಗೃಹ ಉಪಯೋಗಿ ವಸ್ತುಗಳು

ಆಸ್ಕರ್ ವಿಜೇತರಿಗೆ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ

ಬೇಸಿಗೆಯಲ್ಲಿ ತಂಪಾದ ಸ್ಥಳ ಹುಡುಕಿ ಬರಲಿವೆ ಹಾವುಗಳು: ಈ ಮುಂಜಾಗ್ರತಾ ಕ್ರಮಗಳು ನಿಮಗೆ ತಿಳಿದಿರಲಿ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:five × 5 =
Remember me
