ತುಮಕೂರು:ಗೃಹ ಸಚಿವರ ಎದುರು ಅಳಲು ತೋಡಿಕೊಳ್ಳಲು ಬಂದ ಪೊಲೀಸ್ ಹುದ್ದೆ ಆಕಾಂಕ್ಷಿಗೆ ಸಾರ್ವಜನಿಕರ ಎದುರೇ ತುಮಕೂರು ಡಿವೈಎಸ್ಪಿ ಶ್ರೀನಿವಾಸ್ ಕಪಾಳಮೋಕ್ಷ ಮಾಡಿದ್ದಾರೆ.
ಇಂತಹ ಘಟನೆ ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು‌ ಮೈದಾನದ ಬಳಿ ಮಂಗಳವಾರ ಕನ್ನಡ ರಾಜ್ಯೋತ್ಸವ ಆಚರಣೆ ವೇಳೆ ನಡೆದಿದೆ. ಪೊಲೀಸ್ ನೇಮಕಾತಿ ವಯೋಮಿತಿ ಹೆಚ್ಚಳ‌ ಮಾಡುವಂತೆ ಆಗ್ರಹಿಸಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಮನವಿ ಕೊಡಲು ಉತ್ತರ ಕರ್ನಾಟಕ‌ ಮೂಲದ ನೂರಾರು ಪೊಲೀಸ್ ಅಕಾಂಕ್ಷಿಗಳು ಆಗಮಿಸಿದ್ದರು.
ಈ ವೇಳೆ ಗೃಹ ಸಚಿವರನ್ನು ಭೇಟಿಯಾಗಲು ಪೊಲೀಸ್ ಅಕಾಂಕ್ಷಿಗಳು ಯತ್ನಿಸುತ್ತಿದ್ದರು. ಈ ವೇಳೆ ಪೊಲೀಸರು ಮತ್ತು ಪೊಲೀಸ್​ ಆಕಾಂಕ್ಷಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಸ್ಥಳದಲ್ಲಿದ್ದ ಡಿವೈಎಸ್ಪಿ ಶ್ರೀನಿವಾಸ್​, ಪೊಲೀಸ್ ಅಕಾಂಕ್ಷಿಯೊಬ್ಬರಿಗೆ ಕಪಾಳ‌ಮೋಕ್ಷ ಮಾಡಿ ದೂರ ತಳ್ಳಿದ್ದಾರೆ. ಗೃಹ ಸಚಿವರಿದ್ದ ವೇದಿಕೆ ಬಳಿಯೇ ಈ ಘಟನೆ ನಡೆದಿದ್ದು, ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಗೃಹ ಸಚಿವರ ಕಾಲಿಗೆ ಬಿದ್ದ ಪೊಲೀಸ್ ಅಕಾಂಕ್ಷಿಗಳು: ಕೊನೆಗೂ ಗೃಹ ಸಚಿವರನ್ನು ಭೇಟಿಯಾದ ಪೊಲೀಸ್ ಅಕಾಂಕ್ಷಿಗಳು, ಪೊಲೀಸ್ ನೇಮಕಾತಿ ವಯೋಮಿತಿ ಹೆಚ್ಚಿಸುವಂತೆ ಮನವಿ ಮಾಡುತ್ತಾ ಸಚಿವರ ಕಾಲಿಗೆ ಬಿದ್ದು ಪರಿಪರಿಯಾಗಿ ಬೇಡಿಕೊಂಡರು. ಎರಡು ವರ್ಷಗಳಿಂದ ಶಾಸಕರಿಂದ ಹಿಡಿದು ಸಿಎಂವರೆಗೂ ಮನವಿ ಮಾಡಿದ್ದೇವೆ. ಇದುವರೆಗೆ ಪೊಲೀಸ್ ನೇಮಕಾತಿ ವಯೋಮಿತಿ ಹೆಚ್ಚಳ ಮಾಡಿಲ್ಲ. ನಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದು ಕಣ್ಣೀರಿಟ್ಟರು.
ನನ್ನನ್ನು ಮುಗಿಸಲು ಮುಧೋಳ-ಬೆಂಗಳೂರಿಂದ ಗ್ಯಾಂಗ್​ ಬಂದಿತ್ತು: ಹೊಸ ಬಾಂಬ್​ ಸಿಡಿಸಿದ ಯತ್ನಾಳ್​

ಶಾಸಕರ ಹೆಸರಲ್ಲೂ ಹಣಕ್ಕೆ ಪೀಡಿಸ್ತಿದ್ದಾರೆ… ಪ್ಲೀಸ್​ ನನಗೆ ದಯಾಮರಣ ಕೊಡಿ: ಹುಬ್ಬಳ್ಳಿ ಮೂಲದ ಗುತ್ತಿಗೆದಾರ ಅಳಲು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × one =
Remember me
