ಮಂಗಳೂರು:ಕಿರುಕುಳ ಪ್ರಕರಣದಲ್ಲಿ ದೂರು ಕೊಡಲು ಹೋಗಿದ್ದ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆಯೇ ಬಜ್ಪೆ ಠಾಣೆಯ ಪೊಲೀಸರು ಬಾಸುಂಡೆ ಬರುವಂತೆ ಹೊಡೆದು ಹಲ್ಲೆಗೈದಿರುವ ಆರೋಪ ಕೇಳಿಬಂದಿದ್ದು, ಮೂವರು ಪೊಲೀಸ್ ಪೇದೆಗಳ ವಿರುದ್ಧ ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮಂಗಳೂರು ಹೊರವಲಯದ ಗಂಜಿಮಠದ ಪರಿಸರದ ಪಿಯುಸಿ ವಿದ್ಯಾರ್ಥಿನಿ ಹಲ್ಲೆಗೊಳಗಾದ ಯುವತಿಯಾಗಿದ್ದು, ಕೈ, ಕಾಲಿಗೆ ತೀವ್ರ ಗಾಯಗೊಂಡು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿದ್ಯಾರ್ಥಿನಿಗೆ ಎಡಪದವು ಬಳಿಯ ಇರುವೈಲು ನಿವಾಸಿ ಶ್ರೀಕಾಂತ್ ನಾಗೇಶ್ ಎಂಬ ಯುವಕನ ಜೊತೆಗೆ ಫೇಸ್ಬುಕ್ ನಲ್ಲಿ ಪರಿಚಯ ಆಗಿತ್ತು ಎನ್ನಲಾಗುತ್ತಿದೆ. ಈ ಬಗ್ಗೆ ಪರಿಚಯ ಪ್ರೇಮಕ್ಕೆ ತಿರುಗಿ, ಯುವಕ ನಾಗೇಶ್ ಯುವತಿಯ ಮನೆಗೆ ಬಂದು ಕಿರುಕುಳ ನೀಡಿದ್ದಾನೆ. ಮದುವೆ ಮಾಡಿಕೊಡುವಂತೆ ಒತ್ತಾಯ ಮಾಡಿದ್ದು, ಯುವತಿ ಅಪ್ರಾಪ್ತಳಾಗಿದ್ದರಿಂದ ಹೆತ್ತವರು ನಿರಾಕರಿಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಸಿಗಂದೂರು ದೇವಸ್ಥಾನದ ಆಡಳಿತದಲ್ಲಿ ಸರ್ಕಾರದ ಹಸ್ತಕ್ಷೇಪಕ್ಕೆ ಹುಲ್ತಿಕೊಪ್ಪ ಶ್ರೀಧರ್ ಆಕ್ಷೇಪ
ಈ ನಡುವೆ, ಬೇರೆ ಯುವಕರನ್ನು ಕಟ್ಟಿಕೊಂಡು ಯುವತಿಯ ಮನೆಗೆ ಬಂದಿದ್ದ ಯುವಕ ನಾಗೇಶ್, ಮದುವೆ ಮಾಡಿಕೊಡದಿದ್ದರೆ ನಿಮ್ಮ ಮನೆಯನ್ನು ಧ್ವಂಸ ಮಾಡುತ್ತೇನೆಂದು ಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದ್ದು ಯುವತಿಯ ತಂದೆ ಈ ಬಗ್ಗೆ ಬಜ್ಪೆ ಠಾಣೆಗೆ ದೂರು ನೀಡಿದ್ದರು. ಆದರೆ, ನಾಗೇಶ್ ಮರುದಿನ ಬಜ್ಪೆ ಠಾಣೆಗೆ ವಕೀಲರ ಜೊತೆ ತೆರಳಿದ್ದಾನೆ. ಇದರಿಂದ ಯು ಟರ್ನ್ ಹೊಡೆದ ಬಜ್ಪೆ ಪೊಲೀಸರು ಯುವತಿಯನ್ನು ಕರೆಸಿ ಬಾಸುಂಡೆ ಬರುವಂತೆ ಹೊಡೆದಿದ್ದಾರೆ ಎಂದು ದೂರಲಾಗಿದ್ದು, ಈ ಬಗ್ಗೆ ಯುವತಿಯ ತಂದೆ ಜೆರಾಲ್ಡ್ ಮ್ಯಾಕ್ಸಿಂ ಪಿಂಟೋ ಪಾಂಡೇಶ್ವರದ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬಿಹಾರ ಚುನಾವಣೆ: ಜೆಡಿಯುಗೆ ಮತ ಎಂದ ವಯೋವೃದ್ಧನನ್ನು ಥಳಿಸಿದ್ರು ಆರ್​ಜೆಡಿ ಬೆಂಬಲಿಗರು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
