ಬೆಂಗಳೂರು:ಅನ್ಯಾಯ ಮಾಡುತ್ತಿದ್ದೀರಿ ಎಂದು ಪೊಲೀಸರ ವಿರುದ್ಧ ಯುವತಿಯೊಬ್ಬಳು ಮಾತಿಗಿಳಿದು, ಅದು ವಾಗ್ವಾದಕ್ಕೆ ತಿರುಗಿ ಕೊನೆಗೆ ಆಕೆ ಪೊಲೀಸರ ಕೈಗೇ ಕಚ್ಚಿ ದೊಡ್ಡ ರಾದ್ಧಾಂತ ನಡೆದ ಪ್ರಸಂಗವೊಂದು ಬೆಂಗಳೂರಿನ ಚಿಕ್ಕಪೇಟೆಯಲ್ಲಿ ನಡೆದಿದೆ.
ಚಿಕ್ಕಪೇಟೆಗೆ ಶಾಪಿಂಗ್​ಗೆಂದು ಬಂದಿದ್ದ ಯುವತಿ, ಹೀಗೆ ರಸ್ತೆ ಬದಿಯಲ್ಲಿ ನಡೆಸಿದ ಅವಾಂತರದಿಂದ ಬಹಳಷ್ಟು ಜನರು ನಿಂತು ನೋಡುವಂತಾಗಿತ್ತು. ಈಕೆ ಶಾಪಿಂಗ್​ಗೆ ಬಂದಿದ್ದ ವೇಳೆ ಪೊಲೀಸರು ಫುಟ್​ಪಾತ್ ಮೇಲಿದ್ದ ಅಂಗಡಿಗಳನ್ನು ತೆರವುಗೊಳಿಸುತ್ತಿದ್ದರು.
ಪೊಲೀಸರ ಈ ತೆರವು ಕಾರ್ಯಾಚರಣೆ ನೋಡಿದ ಈಕೆ ಯಾಕೆ ಜನರಿಗೆ ಸಮಸ್ಯೆ ಕೊಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾಳೆ. ಆಗ ಪೊಲೀಸ್​ ಮತ್ತು ಯುವತಿ ನಡುವೆ ವಾಗ್ವಾದ ನಡೆದಿದೆ. ಅದನ್ನು ಈಕೆ ಮೊಬೈಲ್​ಫೋನ್​ನಲ್ಲಿ ಚಿತ್ರೀಕರಿಸಿಕೊಳ್ಳಲು ಮುಂದಾದಾಗ ಪೊಲೀಸ್​ ಮೊಬೈಲ್​ಫೋನ್​ ಕಿತ್ತುಕೊಂಡಿದ್ದಾರೆ.
ಮೊಬೈಲ್​ಫೋನ್​ ಕೊಡಿ ಎಂದು ಕೇಳಿದರೂ ಪೊಲೀಸರು ಕೊಡದಿದ್ದಾಗ ಅವರನ್ನು ಅಡ್ಡಗಟ್ಟಿದ ಯುವತಿ, ಕೊನೆಗೆ ಪೊಲೀಸ್​ ಕೈಗೆ ಕಚ್ಚಿದ್ದಾಳೆ. ಈ ಸಂದರ್ಭದಲ್ಲಿ ಜನರು ಗುಂಪುಗೂಡಿ ನೋಡಲಾರಂಭಿಸಿದ್ದು, ಬಳಿಕ ಆಕೆಯನ್ನು ಕೆ.ಆರ್​.ಮಾರುಕಟ್ಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಲ್ಲಿ 4 ಅಥವಾ ಅದಕ್ಕೂ ಹೆಚ್ಚು ಮಕ್ಕಳಿದ್ದರೆ ಜಾಸ್ತಿ ಸೌಲಭ್ಯ; ಶಿಕ್ಷಣ-ಉದ್ಯೋಗಕ್ಕೂ ಸಿಗುತ್ತೆ ಆದ್ಯತೆ!
Sign in to your account
Please enter an answer in digits:12 + twenty =
Remember me
