ಬೆಂಗಳೂರು:ರಾಬರಿ ಕಥೆ ಕಟ್ಟಿ ತಾನೇ ಎಲ್ಲಾ ಹಣವನ್ನು ದೋಚಲು ಮುಂದಾದವನು ಕೊನೆಗೂ ಅರೆಸ್ಟ್ ಆಗಿದ್ದಾನೆ. ಈ ಆರೋಪಿ, ಹಣ ಹೊಡೆಯಲು ತಾನೇ ದೂರು ನೀಡಿದ್ದ. ಆದರೆ ಪೊಲೀಸರು ಈತನ ಪ್ಲಾನ್​ಅನನ್ನು ಉಲ್ಟಾ ಮಾಡಿದ್ದು ಈತನ ಅಸಲಿಯತ್ತನ್ನು ಬಯಲು ಮಾಡಿದ್ದಾರೆ.
ಆರೋಪಿ ಮೂಲರಾಮ್‌ ಎನ್ನುವಾತನಿಗೆ ವಿಕ್ರಮ್ ಎಂಬಾತ 10 ಲಕ್ಷ ಹಣ ಕೊಡುವುದಕ್ಕೆ ಹೇಳಿದ್ದ. ಅಶೋಕ್ ಎಂಬುವರಿಗೆ ತಲುಪಿಸಲು ವಿಕ್ರಮ್ ನೀಡಿದ್ದ. ಕೈಗೆ ಹಣ ಬಂದಿದ್ದೇ ತಡ 10 ಲಕ್ಷ ತಾನೇ ಹೊಡೆದುಕೊಳ್ಳಲು ಮೂಲರಾಮ್ ಮುಂದಾಗಿದ್ದ. ಆದರೆ ಯಾರಿಗೂ ಅನುಮಾನ ಬರಬಾರದು ಎಂದು ರಾಬರಿ ಕಥೆ ಕೂಡ ಕಟ್ಟಿದ್ದ.
ಈತ ಜನವರಿ 13ರ ರಾತ್ರಿ 8 ಗಂಟೆಗೆ ನಾಟಕ ಶುರುಮಾಡಿದ್ದು ಹಣ ಕೈಗೆ ಬಂದಿದ್ದೆ ತಡ ಸಿರ್ಸಿ ಸರ್ಕಲ್ ಬಳಿ ಖಾಲಿ ಬ್ಯಾಗ್ ಬಿಸಾಡಿ ಆತನ ಮೇಲೆ ಅನುಮಾನ ಬರಬಾರದು ಎಂದು ಕೈ ಕೊಯ್ದುಕೊಂಡಿದ್ದ. ನಂತರ ರಾಬರಿ ಮಾಡಿದ್ದಾರೆಂದು ಚಾಮರಾಜಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದ. ಆದರೆ ಈತನ ಕೈಮೇಲಿನ ಗಾಯ ನೋಡಿ ಆತನ ಮೇಲೆಯೇ ಪೊಲೀಸರಿಗೆ ಅನುಮಾನ ಮೂಡಿತ್ತು. ಈ ವೇಳೆ ಈ ಮೂಲರಾಮ್​ನನ್ನು ವಶಕ್ಕೆ ಪಡೆದು ತಮ್ಮ ಸ್ಟೈಲ್ ನಲ್ಲಿ ವಿಚಾರಿಸಿದಾಗ ಅಸಲಿ ಸತ್ಯವನ್ನು ಬಾಯ್ಬುಟ್ಟಿದ್ದಾನೆ. ಈತನೇ ನೀಡಿದ ಮಾಹಿತಿ ಆಧಾರದ ಮೇಲೆ ಆರೋಪಿ, ತನ್ನ ಮನೆಯಲ್ಲಿಟ್ಟಿದ್ದ 10 ಲಕ್ಷ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 12 =
Remember me
