ಬೆಂಗಳೂರು:‘ನನ್ನ ಮೊಬೈಲ್​ ಹಾಳಾಗಿದೆ. ಒಂದೇ ಒಂದು ಕರೆ ಮಾಡ್ಬೇಕು’ ಎಂದು ಹೇಳಿ ಈ ಭೂಪ ಮತ್ತಿಕೆರೆಯ ದೇವವ್ರತ್ ಸಿಂಗ್ ಎಂಬಾತನ ಮೊಬೈಲ್ ಪಡೆದಿದ್ದ. ಇದನ್ನು ನಿಜ ಎಂದು ನಂಬಿದ್ದೇ ಯುವಕ ದೇವವ್ರತ್ ಸಿಂಗ್​ನ ಒಂದೇ ಒಂದು ತಪ್ಪು.
ದೇವವ್ರತ್​, ತನ್ನ ಮೊಬೈಲ್ ಕೊಡೊ ಮುನ್ನ ಅನ್​ಲಾಕ್ ಮಾಡಿ ಕೊಟ್ಟಿದ್ದ. ಪ್ಯಾಟರ್ನ್ ಗಮನಿಸಿದ್ದ ಆರೋಪಿ ಪವನ್, ಮೊಬೈಲ್ ಪಡೆದ ಕ್ಷಣಾರ್ಧದಲ್ಲೇ ತನ್ನ ಬೈಕ್ ಹತ್ತಿ ಎಸ್ಕೇಪ್ ಆಗಿದ್ದಾನೆ. ನಂತರ ಮೊಬೈಲ್ ಗ್ಯಾಲರಿಯಲ್ಲಿದ್ದ ಫೋಟೋ ವೀಡಿಯೋಗಳನ್ನು ನೋಡಿದ್ದಾನೆ.
ದೇವವ್ರತ ಸಿಂಗ್ ಹಾಗು ಆತನ ಪ್ರೇಯಸಿಯ ಖಾಸಗಿ ಫೋಟೋಗಳನ್ನ ನೋಡಿದ ಪವನ್​, ಇದನ್ನೇ ಹಣ ಮಾಡಲು ಒಳ್ಳೆ ಉಪಾಯ ಎಂದುಕೊಂಡು ದೇವವ್ರತ್​ನ ಗರ್ಲ್ ಫ್ರೆಂಡ್​ಗೆ ಕರೆ ಮಾಡಿ ಖಾಸಗಿ ಫೋಟೋಗಳನ್ನ ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಫೋಟೊ ಲೀಕ್ ಮಾಡಬಾರದು ಅಂದ್ರೆ1 ಲಕ್ಷ ಹಣ ಕೊಡಬೇಕು ಅಂತ ಬ್ಲಾಕ್​ಮೇಲ್​ ಕೂಡ ಮಾಡಿದ್ದಾನೆ.
ಇಷ್ಟೇ ಸಾಲದು ಅಂತ ಯುವತಿಗೆ ಕೆಟ್ಟ ಕೆಟ್ಟ ಮೆಸೇಜ್ ಕೂಡ ಕಳುಹಿಸಿದ್ದಾನೆ. ಹಣ ಆಸೇ ಎಷ್ಟು ಹೆಚ್ಚಾಗಿತ್ತು ಎಂದರೆ, ಈತ ದೇವವ್ರತ್​ನ ತಾಯಿಗೂ ಕರೆ ಮಾಡಿ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದ. ಈ ಪವನ್​ನ ಕಿರುಕುಳ ತಾಳಲಾರದೇ ದೇವವ್ರತ್ ಸಿಂಗ್​, ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ದೂರು ದಾಖಲಿಸಕೊಂಡ ಯಶವಂತಪುರ ಪೊಲೀಸರು ಹಣ ಕೊಡೊದಾಗಿ ಕರೆಸಿ ಆರೋಪಿ ಪವನ್​ನನ್ನು ಬಂಧಿಸಿದ್ದಾರೆ. ಇನ್ನು ವಿಚಾರಣೆ ವೇಳೆ ಆರೋಪಿ ಪವನ್​ಗೆ ಡ್ರಗ್ ಪೆಡ್ಲರ್ ಜೊತೆ ನಂಟಿರುವುದು ಬೆಳಕಿಗೆ ಬಂದಿದೆ. ಈ ಖತರ್ನಾಕ್​ ಪವನ್​ ಸಣ್ಣ ಪುಟ್ಟ ಕಳ್ಳತನದ ಜೊತೆಗೆ ಡ್ರಗ್ ಪೆಡ್ಲರ್ ಸೈಯದ್ ನಿಯಾಜ್ ಜೊತೆ ಡ್ರಗ್ಸ್ ಮಾರಾಟ‌ ಕುಡ ಮಾಡುತ್ತಿದ್ದ.
ಪವನ್​ ನೀಡಿದ ಮಾಹಿತಿ ಮೇರೆಗೆ ಸೈಯದ್ ನಿಯಾಜ್​ನನ್ನೂ ಬಂಧಿಸಲಾಗಿದೆ. ಬಂಧಿತನಿಂದ 3.45 ಲಕ್ಷ ಬೆಲೆಬಾಳುವ ಎಂಡಿಎಂಎ, 560 ಗ್ರಾಂ ಗಾಂಜಾ, ಮೊಬೈಲ್ ಫೋನ್,ಒಂದು ಕಾರ್,ಎಕ್ಸಟೆಸಿ ಟ್ಯಾಬ್ಲೆಟ್ ಪೌಡರ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಯಶವಂತಪುರ ಠಾಣೆಯ ಪೊಲೀಸರು ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − seven =
Remember me
