ಬೆಂಗಳೂರು:ಈ ಕಳ್ಳರು ಭಾರಿ ಬುದ್ಧಿವಂತಿಕೆ ಬಳಸಿಕೊಂಡು ಮನೆಗಳ ಮುಂದಿದ್ದ ಸಿಸಿಟಿವಿ ಕ್ಯಾಮರಾವನ್ನು ತಿರುಚಿ ಕಳ್ಳತನ ಮಾಡುತ್ತಿದ್ದರು. ಈ ಮಹಾ ಬುದ್ಧಿವಂತರು ಎಷ್ಟೆಲ್ಲಾ ತಂತ್ರ ಮಾಡಿದ್ದರೂ ಕಡೆಗೆ ಸಿಕ್ಕಿಬಿದ್ದಿದ್ದಾರೆ. ಇವರು ಸಿಕ್ಕಿ ಬಿದ್ದದ್ದೂ ಒಂದು ರೋಚಕ ಕಥೆ.
ರಾಮಮೂರ್ತಿನಗರದ ಪೊಲೀಸರು ರಾಜೇಶ್ ಅಲಿಯಾಸ್ ಕ್ರ್ಯಾಕ್ ಹಾಗೂ ರಾಜ್ ಕಿರಣ್ ಎಂಬುವವರನ್ನು ಕಳ್ಳತನದ ಆರೋಪದ ಮೇಲೆ ಬಂಧಿಸಿದ್ದಾರೆ. ಇವರು ರಾಮಮೂರ್ತಿನಗರದ ಕುವೆಂಪು ಲೇಔಟ್ ನಲ್ಲಿ ಕಳ್ಳತನ ಮಾಡಿ ಹೊಸೂರಿನಲ್ಲಿ ಸಿಕ್ಕ ವಸ್ತುಗಳನ್ನು ಮಾರಾಟ ಮಾಡಲು ಹೋಗಿದ್ದರು. ಮನೆಗಳಲ್ಲಿ ಕದ್ದಿದ್ದ ಚಿನ್ನಾಭರಣಚವನ್ನು ಹೊಸೂರಿನಲ್ಲಿರುವ ಜ್ಯುವೆಲ್ಲರಿ ಶಾಪ್ ನಲ್ಲಿ ಮಾರಾಟ ಮಾಡಲು ಯತ್ನಿಸಿದ್ದಾರೆ. ಕದ್ದ ಮಾಲು ಎಂಬ ಅನುಮಾನ ಬಂದಿದ್ದರಿಂದ ಜ್ಯುವೆಲ್ಲರಿ ಶಾಪ್ ಮಾಲೀಕ ಆಭರಣಗಳನ್ನು ನೋಡಿ ನಕಲಿ ಚಿನ್ನ ಹೋಗಿ ಎಂದು ಹೇಳಿ ಕಳಿಸಿದ್ದ. ಇದರಿಂದ ದುಃಖಿತರಾದ ಕಳ್ಳರು, ನಕಲಿ ಆಭರಣ ಎಂದುಕೊಂಡು ಬೇಸರದಲ್ಲಿ ರಸ್ತೆ ಬದಿಯ ಕಸದಲ್ಲಿ ಚಿನ್ನ ಬಿಸಾಡಿದ್ದಾರೆ.
ನಂತರ ಜ್ಯುವೆಲ್ಲರಿ ಶಾಪ್ ಮಾಲೀಕ ಮಂಜುನಾಥ್, ಆಭರಣ ಕಳ್ಳತನ ಬಗ್ಗೆ ರಾಮಮೂರ್ತಿ ನಗರ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿ ತನಿಖೆ ನಡೆಸಿದ ರಾಮಮೂರ್ತಿ ನಗರ ಪೊಲೀಸರಿಗೆ ಕಸದಲ್ಲಿದ್ದ ಚಿನ್ನಾಭರಣವೂ ಸಿಕ್ಕಿದೆ. ತಕ್ಷಣ ಆರೋಪಿಗಳ ಜಾಡು ಬೆನ್ನತ್ತಿ ಪೊಲೀಸರು ಹೊಸೂರಿಗೆ ದೌಡಾಯಿಸಿದ್ದಾರೆ. ಅಂದ ಹಾಗೆ ಹೊಸೂರಿನ ರಸ್ತೆ ಬದಿಯ ಕಸದಲ್ಲಿ ಸಿಕ್ಕ 400 ಗ್ರಾಂ ಚಿನ್ನಾಭರಣದ ಮೌಲ್ಯ ಬರೋಬ್ಬರಿ19 ಲಕ್ಷ!
ಆರೋಪಿಗಳ ಜಾಡನ್ನು ಹಿಡಿದು ತನಿಖೆ ಮಾಡುತ್ತಿದ್ದ ಪೊಲೀಸರಿಗೆ ಕಳ್ಳತನ ನಡೆದ ಮನೆಯ ಕುರಿತೂ ಮಾಹಿತಿ ಸಿಕ್ಕಿದೆ. ಅಲ್ಲಿ ತನಿಖೆ ಮಾಡುವಾಗ ಕಳ್ಳತನದ ವೇಳೆ ಮನೆ ಮುಂದೆ ಹಾಕಿದ್ದ ಸಿಸಿಟಿವಿಗಳನ್ನ ಬೇರೆಡೆ ಆರೋಪಿಗಳು ತಿರುಗಿಸಿರುವುದು ಕಂಡು ಬಂದಿದೆ.
ಆದರೆ, ಇವರಿಂದ ಮನೆಯೊಳಗೆ ಇದ್ದ ಸಿಸಿಟಿವಿಯನ್ನು ತಿರುಗಿಸಲು ಸಾಧ್ಯವಾಗಿಲ್ಲ. ಈ ಸಿಸಿಟಿವಿಯನ್ನು ಗಮನಿಸದ ಆರೋಪಿಗಳು, ಮಾಸ್ಕ್ ಅರ್ಧಂಬರ್ಧ ಧರಿಸಿದ್ದರು. ಆಗ ಅವರ ಮುಖ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಿಸಿಟಿವಿ ಆಧಾರದ ಮೇಲೆ ರಾಮಮೂರ್ತಿನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 17 =
Remember me
