ಬೆಂಗಳೂರು:ಸ್ವತಃ ಹೋಂ ಕ್ವಾರಂಟೈನ್​ನಲ್ಲಿ ಇದ್ದುಕೊಂಡೇ ಪೊಲೀಸ್​ ಕಮಿಷನರ್​ ಕಮಲ್​ ಪಂತ್​ ಅವರು ಕರೊನಾ ಸೋಂಕಿತ ಪೊಲೀಸ್​ ಸಿಬ್ಬಂದಿಯ ಆರೋಗ್ಯವನ್ನು ವಿಡಿಯೋ ಕಾಲ್​ ಮೂಲಕ ವಿಚಾರಿಸಿದರು.
ಪೊಲೀಸ್​ ಆಯುಕ್ತರಾಗಿ ಕಮಲ್​ ಪಂತ್ ಶನಿವಾರ ಅಧಿಕಾರ ಸ್ವೀಕರಿಸಿದ್ದರು. ಸಿಎಂ ಬಿ.ಎಸ್​. ಯಡಿಯೂರಪ್ಪಗೆ ಭಾನುವಾರ ಕರೊನಾ ದೃಢಪಟ್ಟಿದ್ದು, ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಹಿನ್ನೆಲೆಯಲ್ಲಿ ಆಯುಕ್ತರು ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ಈ ವೇಳೆ ಸೋಂಕು ತಗುಲಿ ಕೋವಿಡ್​ ಆಸ್ಪತ್ರೆ ಸೇರಿರುವ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್​ ಅವರೊಂದಿಗೆ ಪೊಲೀಸರ ಜತೆ ಸೋಮವಾರ ವಿಡಿಯೋ ಕಾಲ್​ನಲ್ಲಿ ಯೋಗಕ್ಷೇಮ ವಿಚಾರಿಸಿದರು. ಅಲ್ಲಿನ ವ್ಯವಸ್ಥೆ ಕುರಿತು ಮಾಹಿತಿ ಪಡೆದು ಸಿಬ್ಬಂದಿಗೆ ಆತ್ಮಸ್ಥೈರ್ಯ ತುಂಬಿದರು.
ಇದನ್ನೂ ಓದಿರಿಸಿಎಂ ಯಡಿಯೂರಪ್ಪ ನಿವಾಸದಲ್ಲಿ ಕರೊನಾ ಸ್ಫೋಟ, 11 ಮಂದಿಗೆ ಸೋಂಕು ದೃಢ
ಈ ಮೊದಲು ರಾಜ್ಯ ಗುಪ್ತದಳ ಎಡಿಜಿಪಿ ಆಗಿದ್ದ ಕಮಲ್​ ಪಂತ್​, ಪ್ರತಿದಿನ ಬೆಳಗ್ಗೆ ಸಿಎಂ ಅವರನ್ನು ಭೇಟಿ ಮಾಡಿ ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ಮಾಹಿತಿ ನೀಡುತ್ತಿದ್ದರು. ಕಮಿಷನರ್​ ಆದ ಮೇಲೂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ್ದರು. ಸದ್ಯ ಕ್ವಾರಂಟೈನ್​ಗೆ ಒಳಪಟ್ಟಿದ್ದರೂ ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
ಕೋವಿಡ್ ಸೋಂಕಿತ ಪೊಲೀಸ್ ಸಿಬ್ಬಂದಿ ಹಾಗು ಅವರ ಕುಟುಂಬದವರೊಂದಿಗೆ ಇಂದು ಮಾತನಾಡಿದ್ದೇನೆ. ನಾವು ಒಂದಾಗಿ ಕೋವಿಡ್ ಸಾಂಕ್ರಾಮಿಕ ಎದುರಿಸಬೇಕಾಗಿದೆ. ಸಿಬ್ಬಂದಿ ಸುರಕ್ಷತೆಗೆ ಇಲಾಖೆ ಎಲ್ಲ ಕ್ರಮ ತೆಗೆದುಕೊಳ್ಳುತ್ತಿದ್ದು, ಯಾವುದೇ ಪರಿಸ್ಥಿತಿ ಎದುರಿಸಲು@BlrCityPoliceಸನ್ನದ್ಧವಾಗಿದೆ. ಬೆಂಗಳೂರಿನ ಜನರ ಸುರಕ್ಷತೆ,ಸೇವೆ ನಮ್ಮ ಆದ್ಯತೆಯಾಗಿದೆ
— Pratap Reddy, IPS ಪೊಲೀಸ್ ಆಯುಕ್ತರು, ಬೆಂಗಳೂರು ನಗರ (@CPBlr)August 3, 2020

ಆಸ್ಪತ್ರೆಯಲ್ಲಿ ಕಾಲ ಕಳೆಯೋದು ಕಷ್ಟ ಎಂದು ಸಿಎಂ ಯಡಿಯೂರಪ್ಪ ಏನ್​ ಮಾಡಿದ್ರು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
