ಬೆಂಗಳೂರು:ಮಸೀದಿ ಹಾಗೂ ಮಂದಿರಗಳಲ್ಲಿನ ಧ್ವನಿವರ್ಧಕಗಳ ಶಬ್ದ ತಗ್ಗಿಸದಿದ್ದರೆ ಕಾನೂನುಕ್ರಮ ಜರುಗಿಸಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್​ ತಿಳಿಸಿದ್ದಾರೆ. ಇಂದು ಅವರು ಜನರ ಅಹವಾಲು ಆಲಿಸುವ ಸಲುವಾಗಿ ಟ್ವಿಟರ್​ ಲೈವ್​ನಲ್ಲಿ ನಡೆಸಿದ್ದ #AskCPBlr ಸೆಷನ್​ನಲ್ಲಿ ಅವರು ಈ ವಿಷಯ ತಿಳಿಸಿದರು.
ಟ್ವಿಟರ್​ ಲೈವ್​ನಲ್ಲಿ ಮಾತನಾಡಿದ ಕಮಿಷನರ್ ಜತೆ ನಗರದ ಜನರು ತಮ್ಮ ಸಮಸ್ಯೆಗಳನ್ನು ಅವರ ಗಮನಕ್ಕೆ ತಂದಿದ್ದು, ಅವರು ಹಲವಾರು ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಜತೆಗೆ, ಕೆಲವು ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯನ್ನು ಕೂಡ ನೀಡಿದರು.
ಈ ಸೆಷನ್​ನಲ್ಲಿ ಮಲ್ಲೇಶ್ವರದ ಶ್ರೀರಾಮ್ ಎಂಬವರು, ತಮ್ಮ ಮನೆ ಬಳಿಯ ಮಸೀದಿಯಲ್ಲಿ ಆಜಾನ್ ಕೂಗುವ ವೇಳೆ ಧ್ವನಿವರ್ಧಕದ ಶಬ್ದ ನಿಗದಿತ ಡೆಸಿಬಲ್​ಗಿಂತ ಹೆಚ್ಚಾಗಿದೆ ಎಂಬ ದೂರನ್ನು ನೀಡಿದರು. ಮಾತ್ರವಲ್ಲ, ಈ ಶಬ್ದ ಕಡಿಮೆ ಮಾಡಿಸುವಂತೆ ಮಲ್ಲೇಶ್ವರದ ಪೊಲೀಸರಿಗೆ ತಿಳಿಸಿದ್ದರೂ ಮತ್ತೆ ಸಮಸ್ಯೆ ಮುಂದುವರಿದಿದೆ. ದೂರು ನೀಡಿದ ನಂತರದ ಒಂದೆರಡು ದಿನ ಮಾತ್ರ ಸದ್ದು ಕಡಿಮೆ ಇರುತ್ತದೆ, ಬಳಿಕ ಮೊದಲಿನಂತೆ ಜೋರಾಗುತ್ತದೆ ಎಂದು ಅಹವಾಲು ಹೇಳಿಕೊಂಡಿದ್ದಾರೆ.
ಅವರ ಅಹವಾಲಿಗೆ ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್ ಕಮಲ್ ಪಂತ್, ಮಂದಿರ-ಮಸೀದಿಗಳ ಧ್ವನಿವರ್ಧಕಗಳ ಶಬ್ದ ನಿಗದಿತ ಡೆಸಿಬಲ್ ಒಳಗೇ ಇರಬೇಕು ಎಂದು ಈಗಾಗಲೇ ಸೂಚನೆ ನೀಡಲಾಗಿದೆ. ಅದಾಗ್ಯೂ ಅತಿಯಾದ ಶಬ್ದ ಹೊರಹೊಮ್ಮಿಸುತ್ತಿದ್ದರೆ ಅಂಥವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು. ಅಲ್ಲದೆ ಸಂಬಂಧಿತ ಠಾಣೆಯ ಇನ್​ಸ್ಪೆಕ್ಟರ್​ಗೆ ಸೂಚನೆ ನೀಡಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ಕೂಡ ನೀಡಿದರು.
ಕಬ್ಬು ತಿನ್ನುವ ಆಸೆಯಿಂದಾಗಿ ಪ್ರಾಣ ಕಳ್ಕೊಂಡ ಬಾಲಕ; ಟ್ರ್ಯಾಕ್ಟರ್​ ಅಡಿಗೆ ಸಿಲುಕಿ ಸಾವು…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 2 =
Remember me
