ಶ್ರೀರಂಗಪಟ್ಟಣ:ಹಾಸನದ ಕೆಎಸ್​ಆರ್​ಪಿ 11ನೇ ಪಡೆಯ ಮುಖ್ಯಪೇದೆಯೊಬ್ಬರು ಮೈಸೂರು ಜಿಲ್ಲೆ ಶ್ರೀರಂಗಪಟ್ಟಣದ ಲಾಡ್ಜ್​ವೊಂದರಲ್ಲಿ ನೇಣುಬಿಗಿದುಕೊಂಡು ಮೃತಪಟ್ಟಿದ್ದಾರೆ.
ಮುಖ್ಯಪೇದೆ ಸುರೇಶ್​(40) ಮೃತರು. ಇವರು ಮಂಗಳವಾರ ರಾತ್ರಿ ಶ್ರೀರಂಗಪಟ್ಟಣಕ್ಕೆ ಆಗಮಿಸಿ ಸಮೀಪದ ಪಶ್ಚಿಮವಾಹಿನಿಯ ಲಾಡ್ಜ್​ನಲ್ಲಿ ತಂಗಿದ್ದರು. ಬುಧವಾರ ಮಧ್ಯಾಹ್ನ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಸಾವಿಗೂ ಮುನ್ನ ಡೆತ್​ನೋಟ್​ ಬರೆದಿಟ್ಟಿದ್ದು, ಘಟನೆ ನಡೆದ ಸ್ಥಳದಲ್ಲೇ ಪತ್ತೆಯಾಗಿದೆ.ಇದನ್ನೂ ಓದಿರಿರಾಜ್ಯದಲ್ಲಿ ಈ ಭಾರಿ 110 ಜಿಲ್ಲಾ ಪಂಚಾಯಿತಿ ಕ್ಷೇತ್ರ ಹೆಚ್ಚಳ, 600 ತಾಪಂ ಕ್ಷೇತ್ರಗಳು ರದ್ದು!
ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಸುರೇಶ್​, ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಮಂಗಳವಾರ ರಾತ್ರಿ ಲಾಡ್ಜ್​ ಒಳಗೆ ಹೋದವರು ಬುಧವಾರ ಮಧ್ಯಾಹ್ನವಾದರೂ ರೂಂನಿಂದ ಹೊರ ಬಂದಿರಲಿಲ್ಲ. ಅನುಮಾನಗೊಂಡ ಲಾಡ್ಜ್​ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
‘ಅನಾರೋಗ್ಯದಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಕುಟುಂಬಕ್ಕೆ ಸೌಲಭ್ಯ ಕಲ್ಪಿಸಿ’ ಎಂದು ಡೆತ್​ನೋಟ್​ನಲ್ಲಿ ಬರೆದಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್ಪಿ ಅರುಣ್​ಗೌಡ, ಸಿಪಿಐ ಡಿ.ಯೋಗೇಶ್​, ಪಿಎಸ್​ಐ ರೇಖಾ ಪರಿಶೀಲನೆ ನಡೆಸಿದರು. ಶ್ರೀರಂಗಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂದು ಪೊಲೀಸರು ಅವನನ್ನ ಚಪ್ಪಲಿ ಇಲ್ಲದೆ ನಿಲ್ಲಿಸಿದ್ರು, ಆಗ ಸಹಾಯಕ್ಕೆ ನಾನೇ ಬಂದೆ… ಇದನ್ನ ದರ್ಶನ್​ ನೆನೆಯಲಿ

ನಾಟಕ ಪ್ರದರ್ಶನದಲ್ಲಿ ಮೈಮೇಲೆ ಬಂದ ಚಾಮುಂಡಿ ದೇವಿ! ವಿಡಿಯೋ ವೈರಲ್​

ರಾಜ್ಯದಲ್ಲಿ ಈ ಭಾರಿ 110 ಜಿಲ್ಲಾ ಪಂಚಾಯಿತಿ ಕ್ಷೇತ್ರ ಹೆಚ್ಚಳ, 600 ತಾಪಂ ಕ್ಷೇತ್ರಗಳು ರದ್ದು!

ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದರೂ ಹೊಸ ಕಾರು ಖರೀದಿಸಲು ಸಚಿವ-ಸಂಸದರಿಗೆ ಲಕ್ಷಾಂತರ ಹಣ ಕೊಡುತ್ತೆ ಸರ್ಕಾರ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 + seventeen =
Remember me
