ಬೆಂಗಳೂರು:ಕೆಜಿ ಹಳ್ಳಿ ಪೊಲೀಸ್ ಠಾಣೆಯ ಕಾನ್ಸ್​ಟೇಬಲ್ ಶಿವು ಅವರಿಗೆ ನಗರ ಪೊಲೀಸ್​ ಆಯುಕ್ತ ಕಮಲ್ ಪಂತ್ ಅವರು ಸನ್ಮಾನ ಮಾಡಿ ಶಿವು ಅವರ ಉತ್ತಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದು ಬಕ್ರೀದ್ ಹಬ್ಬ ಹಿನ್ನಲೆಯಲ್ಲಿ ಕಮಿಷನರ್ ಕಮಲ್ ಪಂತ್ ನಿನ್ನೆ ರಾತ್ರಿ ಸಿಟಿ ರೌಂಡ್ಸ್ ನಡೆಸಿದರು. ಶಿವಾಜಿನಗರ, ಕೆಜಿಹಳ್ಳಿ, ಡಿಜೆಹಳ್ಳಿ, ಗೋವಿಂದಪುರ, ಜೆಜೆನಗರ, ಪಾದರಾಯನಪುರ, ಚಾಮರಾಜಪೇಟೆ, ಹೆಣ್ಣೂರು, ಬಾಣಸವಾಡಿ ಹಾಗೂ ಕೋರಮಂಗಲ ಸೇರಿ ಹಲವು ಠಾಣೆಗೆ ಪೊಲೀಸ್​ ಆಯುಕ್ತರು ಭೇಟಿ‌ ನೀಡಿದರು.
ಭೇಟಿಯ ವೇಳೆ ಕಮಲ್ ಪಂತ್​ರನ್ನು ಮುಸಲ್ಮಾನ್​ ಬಾಂಧವರು ಭೇಟಿ ಮಾಡಿ ಸನ್ಮಾನಿಸಲು ಮುಂದಾದರು. ಈ ವೇಳೆ ಸನ್ಮಾನ ಮಾಡಬೇಕಿರುವುದು ನನಗಲ್ಲ, ಸದಾಕಾಲ ಕ್ಷೇತ್ರದಲ್ಲಿ ಸಾರ್ವಜನಿಕರ ಸೇವೆ ಮಾಡುವ ಪೊಲೀಸ್ ಕಾನ್ಸ್​ಟೇಬಲ್​​ಗಳಿಗೆ ಎಂದರು.
ಕಾನ್ಸ್​ಟೇಬಲ್​ ಶಿವು ಕೆಜಿಹಳ್ಳಿ ಏರಿಯಾದ ಬಂದೋಬಸ್ತ್ ನೋಡಿಕೊಳ್ಳುತ್ತಿದ್ದರು. ಕೆಜಿಹಳ್ಳಿಯಲ್ಲಿನ ಪೊಲೀಸ್ ಗಸ್ತು ಹಾಗೂ ಬೀಟ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಕಮಲ್ ಪಂತ್, ತಮಗಾಗಿ ಸಾರ್ವಜನಿಕರು ತಂದಿದ್ದ ಶಾಲು, ಪೇಟ ಮತ್ತು ಹಾರವನ್ನು ಕಾನ್ಸ್’ಟೇಬಲ್​ಗೆ ತೋಡಿಸಿ ಸನ್ಮಾನಿಸಿದರು.
ಕೆಜಿಹಳ್ಳಿ ಠಾಣೆಯಲ್ಲಿ ಯಾರು ಉತ್ತಮವಾಗಿ ಕೆಲಸ ಮಾಡ್ತಿದ್ದಾರೆ ಎಂದು ಡಿಸಿಪಿ ಹಾಗೂ ಎಸಿಪಿಗೆ ಕೇಳಿದ ಕಮಲ್​ಪಂತ್, ಡಿಸಿಪಿ ಶರಣಪ್ಪ ಹಾಗೂ ಎಸಿಪಿ ನಿಂಗಣ್ಣ ಸಕ್ರಿ ಕಾನ್ಸ್’ಟೇಬಲ್ ಶಿವು ಹೆಸರನ್ನ ಸೂಚಿಸಿದ್ದಾರೆ. ಈ ವೇಳೆ ನೈಟ್ ಬೀಟ್​ನಲ್ಲಿದ್ದ ಕಾನ್ಸ್’ಟೇಬಲ್ ಶಿವುರನ್ನು ಕೆಜಿಹಳ್ಳಿ ಠಾಣೆಗೆ ಕರೆಸಿದ ಕಮಿಷನರ್, ಸಾರ್ವಜನಿಕರ ಮುಂದೆ ಶಿವುಗೆ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನ ಮಾಡಿದರು.(ದಿಗ್ವಿಜಯ ನ್ಯೂಸ್​)
BBK8: ಎಂಟು ಸ್ಪರ್ಧಿಗಳಿಗೆ ಗೊತ್ತಾಗಿದೆ ಬಿಗ್​ಬಾಸ್​ ಸೀಸನ್​ 8ರ ವಿನ್ನರ್​​ ನೇಮ್​..!​

ಸಾಕಪ್ಪ ಸಾಕು ರಾಜ್​ ಕುಂದ್ರಾ ಸಹವಾಸ: 2019ರಲ್ಲಿ ನಡೆದ ಕರಾಳ ಘಟನೆ ಬಿಚ್ಚಿಟ್ಟ ಪೂನಂ ಪಾಂಡೆ..!

ಒಲಿಂಪಿಕ್ಸ್ ಕ್ರೀಡಾಸ್ಫೂರ್ತಿ; ಅದ್ಭುತ ಕ್ಷಣಗಳ ಸಂಕ್ಷಿಪ್ತ ಮೆಲುಕು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
