ದಾವಣಗೆರೆ:ಕಾನೂನು ಪಾಲಿಸಬೇಕಾದವರೇ ನಿಯಮ ಉಲ್ಲಂಘಿಸಿದ ಪ್ರಕರಣವಿದು. ಮಾಸ್ಕ್ ಧರಿಸುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕಿದ್ದ ಪೊಲೀಸ್ ಪೇದೆಯೊಬ್ಬ ಸ್ವತಃ ಮಾಸ್ಕ್ ಧರಿಸದೇ ಸಂಚರಿಸಿ ದಂಡ ಪಾವತಿಸಿದ್ದಾನೆ.
ಮಾಸ್ಕ್ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತದಿಂದ ಗುರುವಾರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಹಾನಗರ ಪಾಲಿಕೆ ಬಳಿ ಇದಕ್ಕೆ ಚಾಲನೆ ನೀಡಲಾಯಿತು. ಹಳೇ ಬಸ್ ನಿಲ್ದಾಣದ ಬಳಿ ಬಂದಾಗ, ಪೊಲೀಸ್ ಪೇದೆಯೊಬ್ಬ ಮಾಸ್ಕ್ ಧರಿಸದೇ ಬೈಕಿನಲ್ಲಿ ಬಂದ. ಇದನ್ನು ಗಮನಿಸಿದ ಡಿಸಿ ಮಹಾಂತೇಶ ಬೀಳಗಿ ಮತ್ತು ಎಸ್ಪಿ ಹನುಮಂತರಾಯ ಆತನ ವಾಹನವನ್ನು ತಡೆದರು. ಮಾಸ್ಕ್ ಏಕೆ ಧರಿಸಿಲ್ಲ ಎಂದು ಪ್ರಶ್ನಿಸಿ 200 ರೂ. ದಂಡ ಪಾವತಿಸುವಂತೆ ಹೇಳಿದರು. ಆತ ಸಮಜಾಯಿಷಿ ನೀಡಲು ಹೋದರೂ ಒಪ್ಪದ ಪೇದೆಗೆ ಖಡಕ್ ಎಚ್ಚರಿಕೆ ನೀಡಿದ ಎಸ್ಪಿ, ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಿದರು. ಒಂದು ಹಂತದಲ್ಲಿ ಪೇದೆ ಪರವಾಗಿ ಎಸ್ಪಿಯವರೇ ದಂಡದ ಹಣ ನೀಡಲು ಮುಂದಾದರು. ಕೊನೆಗೂ ಪೇದೆ ದಂಡ ಪಾವತಿಸಬೇಕಾಯಿತು.
ಈ ಮಹಿಳಾ ಪೊಲೀಸ್​​ಗೆ ಹ್ಯಾಟ್ಸಾಫ್ ಅಂದದ್ದು ಯಾಕೆ ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 16 =
Remember me
