ಬೆಂಗಳೂರು: ಅರಮನೆ ಮೈದಾನದ ಟೆನಿಸ್ ಪೆವಿಲಿಯನ್​ನಲ್ಲಿ ತಾತ್ಕಾಲಿಕ ಶೆಡ್​ಗಳು ಶುಕ್ರವಾರ ಭಾರಿ ಮಳೆಯಿಂದಾಗಿ ಕುಸಿದುಬಿದ್ದು ಅದರಲ್ಲಿದ್ದ ವಲಸೆ ಕಾರ್ವಿುಕರು ಸಂಕಷ್ಟಕ್ಕಿಡಾಗಿದ್ದಾಗ ಪ್ರಾಣದ ಹಂಗು ತೊರೆದು ರಕ್ಷಿಸಿದ ನಗರದ ಪೊಲೀಸ್ ಕಾನ್ಸ್​ಟೆಬಲ್​ ಅಕ್ಷರಶಃ ‘ಕರೊನಾ ವಾರಿಯರ್’ ಎನಿಸಿದ್ದಾರೆ.
200ಕ್ಕೂ ಅಧಿಕ ಮಂದಿ ಶೆಡ್​ನಲ್ಲಿದ್ದರು. ಶೆಡ್ ಬಿದ್ದ ಸಂದರ್ಭದಲ್ಲಿ ಮಕ್ಕಳು ಚೀರಾಡುತ್ತಿದ್ದರು. ಕೂಡಲೇ ಶೆಡ್​ನೊಳಗೆ ಸಿಲುಕಿದ್ದ ವರನ್ನು ಹೊರತಂದು ಬೇರೆಡೆ ಸ್ಥಳಾಂತ ರಿಸಿದೆ. ಮುಂದೆ ಸಬ್ ಇನ್​ಸ್ಪೆಕ್ಟರ್ ಆಗಬೇಕು ಎಂಬ ಕನಸು ಕಂಡಿದ್ದೇನೆ.| ರವಿಕುಮಾರ್ಕಾನ್​ಸ್ಟೆಬಲ್
ಕರೊನಾ ಸೋಂಕು ಹಿನ್ನೆಲೆಯಲ್ಲಿ ಅರಮನೆ ಮೈದಾನದ ತಾತ್ಕಾಲಿಕ ಶೆಡ್​ಗಳಲ್ಲಿ ಕಾರ್ವಿುಕರಿಗೆ ತಾತ್ಕಾಲಿಕವಾಗಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಶಿವಾಜಿನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೇದೆ ಆಗಿರುವ ರವಿಕುಮಾರ್ ಅವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಶುಕ್ರವಾರ (ಮೇ 29) ಸಂಜೆ ಸುರಿದಿದ್ದ ಭಾರಿ ಮಳೆಗೆ ಕಾರ್ವಿುಕರಿದ್ದ ಶೆಡ್​ಗಳು ಕುಸಿದಿದ್ದವು. ಆ ಶೆಡ್​ನೊಳಗೆ ಸಿಲುಕಿದ್ದ ಹಲವು ಮಂದಿ ಹೊರಬರಲಾಗದೆ ಕೂಗಾಡುತ್ತಿದ್ದರು. ಆಗ ಸಮಯಪ್ರಜ್ಞೆ ತೋರಿದ ರವಿಕುಮಾರ್, ಶೆಡ್​ನೊಳಗೆ ನುಗ್ಗಿ ಮಗು ರಕ್ಷಿಸಿದರು. ಸಾಮಾನು ಸರಂಜಾಮು ತೆಗೆದುಕೊಳ್ಳಲು ಶೆಡ್​ನೊಳಗೆ ಹೋಗುತ್ತಿದ್ದವರನ್ನು ತಡೆದು ಬೇರೊಂದು ಕಡೆ ಸ್ಥಳಾಂತರಿಸಿದರು. ಶೆಡ್​ನಡಿ ಸಿಲುಕಿದ್ದ ಹಲವರನ್ನು ಹೊರಗೆ ತಂದು ರಕ್ಷಣೆ ಮಾಡಿದ್ದರು.
ಆಯುಕ್ತರಿಂದ ಸನ್ಮಾನ:ರವಿಕುಮಾರ್ ಸೇವೆ ಪರಿಗಣಿಸಿ ನಗರ ಪೊಲೀಸ್ ಆಯುಕ್ತ ಭಾಸ್ಕರ್​ರಾವ್ ಸನ್ಮಾನಿಸಿದರು. ಠಾಣೆಯ ಆವರಣದಲ್ಲಿ ಭಾನುವಾರ ಸನ್ಮಾನಿಸಿ, ಪ್ರಶಸ್ತಿ ಪತ್ರದೊಂದಿಗೆ 10 ಸಾವಿರ ರೂ. ನಗದು ಬಹುಮಾನ ವಿತರಿಸಿದರು. ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಕಮಿಷನರ್ ಮುರುಗನ್, ಡಿಸಿಪಿ ಡಾ. ಶರಣಪ್ಪ ಮತ್ತಿತರರಿದ್ದರು.
ಇದನ್ನೂ ಓದಿ:ಕಳ್ಳನಲ್ಲ, ಆದರೂ ಬೈಕ್ ಕಳವು ಮಾಡಿದ: 2 ವಾರ ಬಳಿಕ ಬೈಕ್ ಮಾಲೀಕನಿಗೂ ಶಾಕ್ ನೀಡಿದ್ದ​!
ಎಂಬಿಎಯಲ್ಲಿ ಚಿನ್ನದ ಪದಕ:ದಾವಣಗೆರೆ ಜಿಲ್ಲೆಯ ರವಿಕುಮಾರ್, ಕುವೆಂಪು ವಿವಿಯಲ್ಲಿ 2016ರಲ್ಲಿ ಎಂಬಿಎ ಪದವಿಯನ್ನು ಮೊದಲ ರ್ಯಾಂಕ್​ನಲ್ಲಿ ಚಿನ್ನದ ಪದಕದೊಂದಿಗೆ ಪಡೆದಿದ್ದಾರೆ. ನಂತರ ಕುವೆಂಪು ವಿವಿಯಲ್ಲಿ ಅತಿಥಿ ಉಪನ್ಯಾಸಕರಾಗಿ 2 ವರ್ಷ ಸೇವೆ ಸಲ್ಲಿಸಿದ್ದರು. 2019ರಲ್ಲಿ ಬೆಂಗಳೂರು ನಗರ ಪೊಲೀಸ್ ಕಾನ್​ಸ್ಟೆಬಲ್ ಆಗಿ ನೇಮಕಗೊಂಡಿದ್ದಾರೆ.
ಬಂಕರ್ ಸೇರಿದ ಅಮೆರಿಕ ಅಧ್ಯಕ್ಷ ಟ್ರಂಪ್: ಹೆಚ್ಚಿದ ಹಿಂಸಾಚಾರ 40 ನಗರಗಳಲ್ಲಿ ಕರ್ಫ್ಯೂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + one =
Remember me
