ಬೆಂಗಳೂರು:ಪೊಲೀಸ್​ ಕಾನ್​ಸ್ಟೆಬಲ್​ ಹುದ್ದೆಗಳ ನೇಮಕಾತಿ ವಯೋಮಿತಿಯಲ್ಲಿ ಎರಡು ವರ್ಷ ಏರಿಕೆ ಮಾಡಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ಇದು 2022-23ನೇ ಸಾಲಿನ ನೇಮಕಾತಿಗೆ ಮಾತ್ರ ಅನ್ವಯ ಆಗಲಿದೆ ಎಂದು ಸ್ಪಷ್ಟಪಡಿಸಿದೆ.
ಹೊಸ ಆದೇಶದ ಪ್ರಕಾರ ಸಾಮಾನ್ಯ ವರ್ಗದ ವಯೋಮಿತಿ 25 ರಿಂದ 27 ವರ್ಷಕ್ಕೆ, ಎಸ್​ಸಿ/ಎಸ್​ಟಿ ಮತ್ತು ಹಿಂದುಳಿದ ವರ್ಗಗಳಿಗೆ 27 ರಿಂದ 29ಕ್ಕೆ ಹಾಗೂ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟು ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 30 ರಿಂದ 32 ವರ್ಷಕ್ಕೆ ಏರಿಕೆ ಆಗಲಿದೆ. ಸಿವಿಲ್​ ಕಾನ್​ಸ್ಟೆಬಲ್​ ನೇಮಕಾತಿಯಲ್ಲಿ ಸೇವಾ ನಿರತ ಎಸ್​ಸಿ ಮತ್ತು ಹಿಂದುಳಿದ ವರ್ಗದ ಸೇವಾ ನಿರತ ಅಭ್ಯರ್ಥಿಗಳಿಗೆ 35 ಮತ್ತು ಇತರ ಅಭ್ಯರ್ಥಿಗಳಿಗೆ 33ಕ್ಕೆ ಏರಿಕೆ ಮಾಡಲಾಗಿದೆ.
ಕರೊನಾ ಹಿನ್ನೆಲೆ ಕಳೆದ ಮೂರು ವರ್ಷಗಳಿಂದ ನಿಯಮಿತವಾಗಿ ನೇಮಕಾತಿ ನಡೆಯದ ಪ್ರಯುಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶದಿಂದ ವಂಚಿತರಾಗಿದ್ದರು. ಈ ಸಲುವಾಗಿ ವಯೋಮಿತಿಯನ್ನು 2 ವರ್ಷ ಏರಿಕೆ ಮಾಡಲಾಗಿದೆ. ಇದು ಒಂದು ಬಾರಿಗೆ ಅನ್ವಯ ಆಗುವಂತೆ 2022-23ನೇ ಸಾಲಿನಲ್ಲಿ ಕರೆದಿರುವ ಸಿಎಆರ್​ ಮತ್ತು ಡಿಎಆರ್​ ಕಾನ್​ಸ್ಟೆಬಲ್​ಗಳ (420+3064) 3,484 ಹುದ್ದೆಗಳಿಗೆ ಮತ್ತು ಸಿವಿಲ್​ ಕಾನ್​ಸ್ಟೆಬಲ್​ 1,591 ಹುದ್ದೆಗಳ ನೇಮಕಾತಿಗೆ ವಯೋಮಿತಿ 2 ವರ್ಷ ಹೆಚ್ಚಳ ಅನ್ವಯ ಆಗಲಿದೆ. ಇವರಿಗೆ ಅನುಕೂಲ ಆಗುವಂತೆ ಅರ್ಜಿ ಸಲ್ಲಿಸುವ ನಿಗದಿತ ಕೊನೆಯ ದಿನಾಂಕವನ್ನು ಒಂದು ವಾರ ವಿಸ್ತರಿಸಲಾಗಿದೆ. ಈ ಪ್ರಕಾರ ಸಿವಿಲ್​ ಕಾನ್​ಸ್ಟೆಬಲ್​ಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಅ.31ರಿಂದ ನ.30ರವರೆಗೆ ಮತ್ತು ಶುಲ್ಕ ಪಾವತಿಸುವ ಕೊನೆಯ ದಿನಾಂಕವನ್ನು ನ.3 ರಿಂದ ಡಿ.2 ವರೆಗೆ ವಿಸ್ತರಿಸಲಾಗಿದೆ.
ರೇಣುಕಾಚಾರ್ಯರ ತಮ್ಮನ ಪುತ್ರ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ… ಕಾರಿನ ಹಿಂಬದಿ ಸೀಟಿನ ರಹಸ್ಯ ಏನು?

ಹೊಂಡಕ್ಕೆ ಬಿದ್ದ ತಮ್ಮನನ್ನು ರಕ್ಷಿಸಲು ಹೋದ ಮೂವರು ಅಕ್ಕಂದಿರೂ ದುರಂತ ಅಂತ್ಯ! ವಿಜಯನಗರದಲ್ಲಿ ಹೃದಯವಿದ್ರಾವಕ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 6 =
Remember me
