ಬೆಂಗಳೂರು:ಇಲ್ಲೊಬ್ಬ ಬಾಲಕ ಬೊಮ್ಮಸಂದ್ರದಲ್ಲಿರುವ ತನ್ನ ಮನೆಯಿಂದ ತಪ್ಪಿಸಿಕೊಂಡು ಬಂದಿದ್ದ. ಈತ ಮೆಜೆಸ್ಟಿಕ್​ನಲ್ಲಿ ಅತ್ತಿಂದಿತ್ತ, ಇತ್ತಿಂದತ್ತ ಓಡಾಡುತ್ತಿದ್ದ. ಈತನನ್ನು ಪೊಲೀಸ್​ ಕಾನ್ಸ್​​ಟೇಬಲ್​ ಒಬ್ಬರು ಮಾತನಾಡಿಸಿ ವಾಪಸ್​ ಆತನ ಮನೆಗೆ ತಲುಪಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಸಂಚಾರಿ ಪೊಲೀಸ್ ಕಾನ್ಸ್​ಟೇಬಲ್ ಎಲ್ಲರೂ ಮೆಚ್ಚುವ ಕೆಲಸ ಮಾಡಿದ್ದು ಮನೆಯಿಂದ ತಪ್ಪಿಸಿಕೊಂಡಿದ್ದ ಬಾಲಕ ಮರಳಿ ಪೋಷಕರ ಮಡಿಲಿಗೆ ತಲುಪಿದ್ದಾನೆ.
ಕಳೆದ ರಾತ್ರಿ ಚಿಕ್ಕಪೇಟೆ ಸಂಚಾರಿ ಕಾನ್ಸ್ ಟೇಬಲ್ ಶ್ರೀಕಾಂತ್ ಸೂಳೆಬಾವಿ ಎನ್ನುವವರು ಕರ್ತವ್ಯದಲ್ಲಿದ್ದರು. ಈ ವೇಳೆ ಮೆಜೆಸ್ಟಿಕ್​ನಲ್ಲಿ ಒಬ್ಬಂಟಿಯಾಗಿ ಓಡಾಡುತ್ತಿದ್ದ ಬಾಲಕನನ್ನು ಕರೆದು ಮಾತನಾಡಿಸಿದ್ದಾರೆ. ಆಗ ಈ ಬಾಲಕ ಬೊಮ್ಮಸಂದ್ರದಿಂದ ತಪ್ಪಿಸಿಕೊಂಡಿರೋದಾಗಿ ಹೇಳಿದ್ದಾನೆ.
ಕೂಡಲೇ ಈತನ ಪೋಷಕರನ್ನು ಸಂಪರ್ಕಿಸಿದ ಸಂಚಾರಿ ಕಾನ್ಸ್​ಟೇಬಲ್, ಪೋಷಕರಿಗೆ ಬಾಲಕನನ್ನು ಒಪ್ಪಿಸಿದ್ದಾರೆ. ಕಾನ್ಸ್ ಟೇಬಲ್ ಶ್ರೀಕಾಂತ್ ಸಮಯಪ್ರಜ್ಞೆಗೆ ಹಿರಿಯ ಅಧಿಕಾರಿಗಳೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮರಳಿ ಗೂಡಿಗೆ..ಚಿಕ್ಕಪೇಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಕಾಂತ್ ಸೂಳೆಬಾವಿ ರವರು ಇಂದು ಬೊಮ್ಮಸಂದ್ರ ದಿಂದ ಕಳೆದುಹೋಗಿದ್ದ ಬಾಲಕನನ್ನು ಠಾಣಾ ಸರಹದ್ದಿನ ಮೆಜೆಸ್ಟಿಕ್ ನಲ್ಲಿ ವಿಚಾರಿಸಿ ಬಾಲಕನ ತಂದೆಯನ್ನು ಸಂಪರ್ಕಿಸಿ ಅವರ ವಶಕ್ಕೆ ಒಪ್ಪಿಸಿರುತ್ತಾರೆ.pic.twitter.com/0C3gQXMQtP
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + one =
Remember me
