ಬೆಂಗಳೂರು: ಧಾರವಾಡದಲ್ಲಿ ಕ್ಯಾನ್ಸರ್​ನಿಂದ ಬಳಲುತ್ತಿದ್ದ ವ್ಯಕ್ತಿಗೆ ನಗರ ಪೊಲೀಸ್ ಪೇದೆ ದ್ವಿಚಕ್ರ ವಾಹನದಲ್ಲಿ ತೆರಳಿ ಔಷಧ ತಲುಪಿಸಿದ್ದಾರೆ.
ಧಾರವಾಡದ ಉಮೇಶ್ ಎಂಬುವರು ಕ್ಯಾನ್ಸರ್​ನಿಂದ ಬಳಲುತ್ತಿದ್ದು, ಔಷಧ ಖಾಲಿಯಾಗಿತ್ತು. ಲಾಕ್​ಡೌನ್ ಹಿನ್ನೆಲೆಯಲ್ಲಿ ಔಷಧ ಸಿಗದೆ ಸಂಕಷ್ಟದಲ್ಲಿ ಸಿಲುಕಿದ್ದರು. ಈ ಕುರಿತು ಮಾಧ್ಯಮದ ಮುಂದೆ ಅಳಲು ತೋಡಿಕೊಂಡಿದ್ದರು. ಅದನ್ನು ಗಮನಿಸಿದ್ದ ಮುಖ್ಯಪೇದೆ ಕುಮಾರಸ್ವಾಮಿ, ರೋಗಿ ಉಮೇಶ್ ಫೋನ್ ನಂಬರ್ ಪಡೆದು ಕರೆ ಮಾಡಿ ವಿಚಾರಿಸಿದಾಗ ಬೆಂಗಳೂರಿನಲ್ಲಿ ಹೊರತುಪಡಿಸಿದರೆ ಬೇರೆ ಯಾವ ಕಡೆಯೂ ಔಷಧ ಸಿಗುವುದಿಲ್ಲ ಎಂದು ಹೇಳಿದ್ದರು. ಉಮೇಶ್ ಆನ್​ಲೈನ್ ಮೂಲಕ ಇಂದಿರಾನಗರದಲ್ಲಿರುವ ಡಿ.ಎಸ್. ರಿಸರ್ಚ್ ಸೆಂಟರ್​ನಲ್ಲಿ ಔಷಧಕ್ಕೆ ಆರ್ಡರ್ ಕೊಟ್ಟಿದ್ದರು. ಆದರೆ, ನಿಗದಿತ ಸಮಯಕ್ಕೆ ಅಲ್ಲಿಗೆ ಹೋಗಿ ಔಷಧ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ.
ಎರಡು ದಿನಕ್ಕೆ ಆಗುವಷ್ಟು ಔಷಧ ಇದೆ. ಔಷಧ ಮುಂದುವರಿಸದಿದ್ದರೆ ಆರೋಗ್ಯ ಸಮಸ್ಯೆ ಉಲ್ಬಣಿಸುತ್ತದೆ. ಹೇಗಾದರೂ ಮಾಡಿ ಔಷಧ ತಲುಪಿಸುವಂತೆ ಕುಮಾರಸ್ವಾಮಿಗೆ ಉಮೇಶ್ ಮನವಿ ಮಾಡಿದ್ದರು. ಅವರ ಪರಿಸ್ಥಿತಿಯನ್ನು ಅರಿತ ಪೇದೆ, ಇಂದಿರಾನಗರದ ಡಿ.ಎಸ್. ರಿಸರ್ಚ್ ಸೆಂಟರ್​ನಿಂದ ಏ.10ರಂದು ಔಷಧ ಪಡೆದು, ಬಳಿಕ ಕಂಟ್ರೋಲ್ ರೂಂ ಎಸಿಪಿ ಅಜಯ್ ಕುಮಾರ್ ಅವರನ್ನು ಭೇಟಿ ಮಾಡಿ ಗಮನಕ್ಕೆ ತಂದಿದ್ದರು. ಧಾರವಾಡಕ್ಕೆ ಹೋಗಲು ಎಸಿಪಿ ವಿಶೇಷ ಅನುಮತಿ ನೀಡಿದ್ದರು.
ಏ.11ರ ಬೆಳಗಿನ ಜಾವ 4 ಗಂಟೆಯಲ್ಲಿ ಬೆಂಗಳೂರಿನಿಂದ ಸ್ಕೂಟರ್​ನಲ್ಲಿ 430 ಕಿ.ಮೀ, ಪ್ರಯಾಣ ಬೆಳೆಸಿದ ಪೇದೆ, ಮಧ್ಯಾಹ್ನ 2 ಗಂಟೆಗೆ ಧಾರವಾಡ ತಲುಪಿ ರೋಗಿಗೆ ಔಷಧ ಮುಟ್ಟಿಸಿದ್ದಾರೆ.
ಪೊಲೀಸ್ ಆಯುಕ್ತರ ಅಭಿನಂದನಾ ಪತ್ರ: ನಗರದ ಠಾಣೆಯೊಂದರ ಮುಖ್ಯಪೇದೆ ಎಸ್. ಕುಮಾರಸ್ವಾಮಿ ಅವರ ಪರಿಚಯಸ್ಥರೊಬ್ಬರು ಧಾರವಾಡದಲ್ಲಿ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಲಾಕ್​ಡೌನ್ ಹಿನ್ನೆಲೆಯಲ್ಲಿ ಔಷಧ ಸಮಸ್ಯೆ ಎದುರಾಗಿತ್ತು. ಕುಮಾರಸ್ವಾಮಿ ದ್ವಿಚಕ್ರ ವಾಹನದಲ್ಲಿ 430 ಕಿ.ಮೀ. ತೆರಳಿ ರೋಗಿಗೆ ಅಗತ್ಯವಿರುವ ಔಷಧಗಳನ್ನು ತಲುಪಿಸಿದ್ದಾರೆ. ಇದು ಅತ್ಯಂತ ಮೆಚ್ಚುಗೆಯ ಕೆಲಸ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್​ರಾವ್ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ, ಪೊಲೀಸ್ ಇಲಾಖೆಯಿಂದ ಅಭಿನಂದನಾ ಪತ್ರವನ್ನು ವಿತರಿಸಿ ಬೆನ್ನು ತಟ್ಟಿದ್ದಾರೆ.
ಪಾಕಿಸ್ತಾನದ ಖಜಾನೆ ತುಂಬುತ್ತಿದೆ ವಿದೇಶಿ ನೆರವು – ಐಎಂಎಫ್​ನಿಂದಲೂ ಸಿಗ್ತಿದೆ 1.4 ಶತಕೋಟಿ ಡಾಲರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 11 =
Remember me
