ಬೆಳಗಾವಿ:ಕರೊನಾ ಎನ್ನುವುದು ಈಗ ದಿನದ ಇಪ್ಪತ್ನಾಲ್ಕು ಗಂಟೆಯೂ ನಾಗರಿಕ ಕರ್ತವ್ಯವನ್ನು ನಿಭಾಯಿಸುವ ಪೊಲೀಸರಿಗೂ ಆತಂಕ ತಂದಿದೆ.
ಪುತ್ರಿಯ ಮೇಲಿನ ವ್ಯಾಮೋಹವೇ ಈಗ ಪೊಲೀಸ್ ಅಧಿಕಾರಿಯೊಬ್ಬರ ಪಾಲಿಗೆ ದುಬಾರಿಯಾಗಿದ್ದು, ಅದರೊಂದಿಗೆ ಅವರ ಜತೆ ಸಂಪರ್ಕಕ್ಕೆ ಬಂದಿದ್ದ ಸಹೋದ್ಯೋಗಿಗಳಿಗೂ ಕಂಟಕವಾಗಿ ಪರಿಣಮಿಸಿದೆ. ಕರ್ನಾಟಕ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಸೋಂಕಿತ ಪುತ್ರಿಯ ಸಂಪರ್ಕದಲ್ಲಿ ಇದ್ದುದೇ ಇಷ್ಟೆಲ್ಲ ಅವಘಡಕ್ಕೆ ಕಾರಣವಾಗಿದೆ.
ಇದನ್ನೂ ಓದಿಸಿಬಿಎಸ್​ಇ 10 ಹಾಗೂ 12ನೇ ತರಗತಿ ಬಾಕಿ ಪರೀಕ್ಷೆಗಳು ಜುಲೈ 1ರಿಂದ ಆರಂಭ
ಹಿರೇಬಾಗೇವಾಡಿ ಗ್ರಾಮದಲ್ಲಿ ಎರಡನೇ ಸಂಪರ್ಕ ಬಂದ್ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಯ ಮಗಳನ್ನು ಕ್ವಾರಂಟೈನ್ ಮಾಡಲಾಗಿತ್ತು. ಇಂದು ಆಕೆಯ ಕರೊನಾ ಪರೀಕ್ಷೆ ವರದಿ ಪಾಸಿಟಿವ್ ಬಂದಿದೆ.ಈ ಹಿನ್ನೆಲೆಯಲ್ಲಿ ಆ ಪೊಲೀಸ್ ಅಧಿಕಾರಿಯ ಸಹೋದ್ಯೋಗಿಗಳಿಗೆ ಆತಂಕ ಆರಂಭವಾಗಿದೆ. ಕ್ವಾರಂಟೈನ್‌ನಲ್ಲಿದ್ದ ಪುತ್ರಿಯನ್ನು ಆ ಅಧಿಕಾರಿ ಸಾಕಷ್ಟು ಸಲ ಭೇಟಿಯಾಗಿದ್ದರು. ಮಗಳು ಕಣ್ಣೀರಿಡುತ್ತಿದ್ದ ಕಾರಣ ಆ ಕ್ಷಣಕ್ಕೆ ಮೈಮರೆತು ಮಗಳನ್ನು ಸಂತೈಸಿದ್ದರು.
ಮಗಳಿಗೆ ಕರೊನಾ ಸೋಂಕು ಪಾಸಿಟಿವ್ ಬಂದಿರುವುದರಿಂದ ಕೆಎಸ್‌ಆರ್‌ಪಿಯ ಆ ಅಧಿಕಾರಿಯೂ ಸೇರಿದಂತೆ 45ಕ್ಕೂ ಹೆಚ್ಚು ಪೋಲಿಸರನ್ನು ಕ್ವಾರಂಟೈನ್ ಮಾಡಲು ಕ್ರಮ ವಹಿಸಲಾಗುತ್ತಿದೆ. ಕಳೆದ ಹಲವು ದಿನಗಳಲ್ಲಿ ಈ ಪೊಲೀಸರ ಜತೆ ಒಡನಾಡಿರುವ ಸಿವಿಲ್ ಪೋಲಿಸರಿಗೂ ಆತಂಕ ಆರಂಭವಾಗಿದೆ.
VIDEO| ಪಾದರಾಯನಪುರ ಆರೋಪಿಗಳ ಸ್ಥಳಾಂತರದಿಂದ ರಾಮನಗರಕ್ಕೆ ತೊಂದರೆ ಆಗಿಲ್ಲ: ಬಿಜೆಪಿ ಜಿಲ್ಲಾಧ್ಯಕ್ಷ ಎಂ. ರುದ್ರೇಶ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 4 =
Remember me
