ಕೀರ್ತಿನಾರಾಯಣ ಸಿ.ಬೆಂಗಳೂರು:ಕರ್ನಾಟಕದಲ್ಲಿ 2.59 ಲಕ್ಷ ಪುರುಷರು ಹಾಗೂ 44 ಸಾವಿರ ಮಹಿಳೆಯರು ಗಾಂಜಾ ವ್ಯಸನಿಗಳಾಗಿದ್ದಾರೆ. ಇದಲ್ಲದೆ ಕೊಕೇನ್, ಒಪಿಯಾಡ್ಸ್ ಇನ್ನಿತರ ಮಾದಕ ವಸ್ತುಗಳ ಚಟ ಅಂಟಿಸಿಕೊಂಡಿರುವವರ ಸಂಖ್ಯೆಯೂ ಮಿತಿಮೀರಿದ್ದು, ರಾಜ್ಯದಲ್ಲಿ ವಾರ್ಷಿಕ 1,000 ಕೋಟಿ ರೂ. ಮೌಲ್ಯದ ಮತ್ತಿನ ಮಾಫಿಯಾ ನಡೆಯುತ್ತಿದೆ. ಯುವಪೀಳಿಗೆಯನ್ನು ಅಪಾಯದಂಚಿಗೆ ತಳ್ಳುತ್ತಿರುವ ‘ಡ್ರಗ್ಸ್ ದಂಧೆ’ಗೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹೆಜ್ಜೆಯಿಟ್ಟಿದೆ.
ಕೇಂದ್ರ ಸರ್ಕಾರ ನಡೆಸಿರುವ ರಾಷ್ಟ್ರೀಯ ಸರ್ವೆ ಪ್ರಕಾರ 2023 ಫೆ.7ರವರೆಗೆ ಕರ್ನಾಟಕದಲ್ಲಿ 3.3 ಲಕ್ಷ ಗಾಂಜಾ ವ್ಯಸನಿಗಳು, 7.29 ಲಕ್ಷ ಒಪಿಯಾಡ್ಸ್ ಚಟಗಾರರು, 46 ಸಾವಿರ ಕೊಕೇನ್ ಸೇವನೆದಾರರು, 68 ಸಾವಿರ ಆಂಪಟಮೈನ್ 2.46 ಲಕ್ಷ ಇನ್​ಹೇಲೆಂಟ್ಸ್ (ಪೇಂಟ್, ಸೆಲ್ಯುಷನ್, ಆಯಿಲ್) ಆಘ್ರಾಣಿಸುವ ವ್ಯಸನಿಗಳಿದ್ದಾರೆ. ಕಳವಳಕಾರಿ ಸಂಗತಿ ಎಂದರೆ ಡ್ರಗ್ಸ್ ವ್ಯಸನಕ್ಕೆ ಬಿದ್ದವರ ಪೈಕಿ ಕರ್ನಾಟಕದಲ್ಲಿ ವಾರ್ಷಿಕ 1,200 ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪೊಲೀಸ್ ಇಲಾಖೆ ಡ್ರಗ್ಸ್ ದಂಧೆಯನ್ನು ನಿಯಂತ್ರಿಸುವುದು ಹಾಗೂ ಅಪಾಯದ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ಯೋಜನೆ ಜಾರಿಗೆ ಮುಂದಾಗಿದೆ.
ಇದನ್ನೂ ಓದಿ:ಪೊಲೀಸರು ತಿಲಕ ಇಡಬಾರದೆಂದು ನಾನು ಎಲ್ಲೂ ಹೇಳಿಲ್ಲ; ಸ್ಪಷ್ಟನೆ ನೀಡಿದ ಗೃಹ ಸಚಿವ
ಮಾದಕ ವಸ್ತುಗಳು ಹೊರರಾಜ್ಯಗಳಿಂದ ರಾಜ್ಯಕ್ಕೆ ಪ್ರವೇಶಿಸುತ್ತಿರುವ ಮಾಹಿತಿ ಇದೆ. ಹೀಗಾಗಿ ಕೇರಳ, ಮಹಾರಾಷ್ಟ್ರ, ತಮಿಳುನಾಡು, ಗೋವಾ ಮತ್ತು ಆಂಧ್ರಪ್ರದೇಶಗಳ ಗಡಿಭಾಗದಲ್ಲಿ ಚೆಕ್​ಪೋಸ್ಟ್​ಗಳನ್ನು ಸ್ಥಾಪಿಸಿ ಸೂಕ್ಷ್ಮ ಪ್ರದೇಶಗಳ ಮೇಲೆ ಕಟ್ಟುನಿಟ್ಟಿನ ಕಣ್ಗಾವಲಿರಿಸುವಂತೆ ಡಿಜಿ-ಐಜಿಪಿ ಅಲೋಕ್ ಮೋಹನ್ ಆದೇಶಿಸಿದ್ದಾರೆ. ಇದಲ್ಲದೆ ರಾಜ್ಯದಲ್ಲಿ ಯಾವೆಲ್ಲ ಮಾದಕ ವಸ್ತುಗಳು, ಎಲ್ಲಿ, ಹೇಗೆ ವ್ಯಸನಿಗಳಿಗೆ ದೊರೆಯುತ್ತಿವೆ ಎಂಬುದರ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಲು ಸೂಚಿಸಿದ್ದಾರೆ. ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲೂಕುಮಟ್ಟದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಮಾನಸಿಕ ಅಸ್ವಸ್ಥರ ಮತ್ತು ಮಾದಕ ವ್ಯಸನಿಗಳ ಮಾಹಿತಿ ಸಂಗ್ರಹಿಸಿ, ಆ ಮೂಲಕ ಡ್ರಗ್ಸ್ ಪೆಡ್ಲರ್​ಗಳಿಗೆ ಬಲೆ ಬೀಸಲು ಪೊಲೀಸರು ಖೆಡ್ಡಾ ತೋಡುತ್ತಿದ್ದಾರೆ.
ಆಸ್ಪತ್ರೆಗಳ ಮಾದಕ ವ್ಯಸನ ವಿಭಾಗಗಳಿಗೆ ಭೇಟಿ ಕೊಟ್ಟು ವ್ಯಸನಿಗಳ ದಾಖಲಾತಿಗಳನ್ನು ಪರಿಶೀಲಿಸಿ, ಅವರ ಅಂಕಿ-ಅಂಶಗಳನ್ನು ಸಂಗ್ರಹಿಸಲಾಗುತ್ತಿದೆ. ಜೈಲಿನಿಂದ ಬಿಡುಗಡೆಯಾಗಿರುವ ಮಾಜಿ ಕೈದಿಗಳು ಹಾಗೂ ವಿದೇಶಿ ಡ್ರಗ್ಸ್ ಪೆಡ್ಲರ್​ಗಳು ಮಾದಕ ವಸ್ತು ಮಾರಾಟ ದಂಧೆಯ ನೇತೃತ್ವ ವಹಿಸಿರುವ ಮಾಹಿತಿಯಿದ್ದು, ಇಂತಹವರ ಮೇಲೆ ನಿಗಾ ವಹಿಸಲು ಆದೇಶಿಸಲಾಗಿದೆ. ಮಾದಕ ವಸ್ತುಗಳ ಕಳ್ಳಸಾಗಣೆಗೆ ಬಳಸುವ ಮಾರ್ಗಗಳನ್ನು ಪತ್ತೆಹಚ್ಚಿ ಬಂದ್ ಮಾಡಲು ಪೊಲೀಸರು ಸಿದ್ಧತೆ ಆರಂಭಿಸಿದ್ದಾರೆ. ಅಲ್ಲದೆ, ಡಿಜಿಪಿ ಸೂಚನೆ ಮೇರೆಗೆ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಹೆದ್ದಾರಿ ಗಸ್ತು ಹಾಗೂ ರಸ್ತೆ ತಪಾಸಣೆಗಳನ್ನು ಹೆಚ್ಚಿಸಲು ಪೊಲೀಸರ ತಂಡಗಳು ರೆಡಿಯಾಗಿವೆ.
ಡ್ರಗ್ಸ್ ಉತ್ಪಾದಕರು, ಸಾಗಣೆದಾರರು, ಮಾರಾಟಗಾರರ ವಿವರ ಸಂಗ್ರಹಿಸುವುದುಗುಪ್ತಚರ ಮಾಹಿತಿ ಬಳಸಿ ಪೆಡ್ಲರ್​ಗಳ ವಿರುದ್ಧ ಪರಿಣಾಮಕಾರಿ ಕಾನೂನು ಜಾರಿಮಾದಕ ವಸ್ತುಗಳ ಮಾರಾಟ ಪ್ರದೇಶ, ಅಲ್ಲಿ ಯಾವೆಲ್ಲ ಡ್ರಗ್ಸ್ ಸಿಗುತ್ತೆಂಬ ಮಾಹಿತಿ ಸಂಗ್ರಹಡ್ರಗ್ಸ್ ಸ್ಮಗ್ಲರ್​ಗಳು, ಪೆಡ್ಲರ್​ಗಳ ಮೇಲೆ ಆಗಾಗ ದಾಳಿ ನಡೆಸಿ, ಪರಿಶೀಲಿಸುವುದು
ರಾಜ್ಯದಲ್ಲಿ ವಾರ್ಷಿಕ ಎನ್​ಡಿಪಿಎಸ್ ಕಾಯ್ದೆಯಡಿ 1,100 ಪ್ರಕರಣ ದಾಖಲುಮಾದಕ ಪದಾರ್ಥ ಪೂರೈಕೆ/ಮಾರಾಟದಲ್ಲಿ ಆಫ್ರಿಕಾ ರಾಷ್ಟ್ರಗಳ ಪ್ರಜೆಗಳ ಸಂಖ್ಯೆ ಹೆಚ್ಚುಡ್ರಗ್ಸ್ ಪೆಡ್ಲರ್​ಗಳು ಕಾಯಂ ಗಿರಾಕಿಗಳಿಗೆ ಮಾತ್ರವೇ ಮಾದಕ ವಸ್ತು ಮಾರಾಟಶೂಟ್, ಬಾಲ್ ಹೀಗೆ ಬೇರೆಬೇರೆ ರೀತಿಯ ಕೋಡ್ ವರ್ಡ್ ಬಳಸಿ ಮಾರಾಟಡ್ರಗ್ಸ್ ಖರೀದಿಗೆ ಹವಾಲಾ ಹಣ, ಬಿಟ್ ಕಾಯಿನ್​ಗಳ ಬಳಕೆಡಾರ್ಕ್ ವೆಬ್​ಸೈಟ್​ನಲ್ಲಿ ಖರೀದಿಸಿ, ಕೊರಿಯರ್ ಮೂಲಕ ರವಾನೆ
ಇದನ್ನೂ ಓದಿ:VIDEO | ಇಳಕಲ್ ಸೀರೆಯುಟ್ಟು ಮಿಂಚಿದ ಮೇಘನಾ ಗಾಂವ್ಕರ್; ‘ಚಾರ್ ಮಿನಾರ್’ ಬೆಡಗಿಯ ಲುಕ್​ಗೆ ಫ್ಯಾನ್ಸ್ ಫಿದಾ!
ಶಾಲಾ-ಕಾಲೇಜುಗಳಲ್ಲಿ ಲೇಖನ, ಕಥೆ ರೂಪದಲ್ಲಿ ಪ್ರಸ್ತುತಪಡಿಸುವ ಕಾರ್ಯಕ್ರಮ ಆಯೋಜನೆಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್​ಗಳಲ್ಲಿ ಸಿನಿಮಾ ಹಾಗೂ ಸಾಕ್ಷ್ಯಚಿತ್ರಗಳ ಮೂಲಕ ಜಾಗೃತಿಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಬೀದಿ ನಾಟಕ ಪ್ರದರ್ಶನಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್, ಕಟೌಟ್, ಪೋಸ್ಟರ್​ಗಳ ಪ್ರದರ್ಶನಮಾದಕ ವ್ಯಸನದ ವಿರುದ್ಧ ಹೋರಾಡುತ್ತಿರುವ ಎನ್​ಜಿಒಗಳ ಜತೆ ಸಮನ್ವಯವಿಶೇಷ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಮುಖಂಡರ ಉಪಸ್ಥಿತಿ
ಗಾಂಜಾವನ್ನು ಸಣ್ಣಸಣ್ಣ ಪಾಕೇಟ್​ಗಳಲ್ಲಿ ತುಂಬಿ 500, 1000 ರೂ.ಗೆ ಮಾರಾಟಕೂಲಿ ಕಾರ್ವಿುಕರು, ವಿದ್ಯಾರ್ಥಿಗಳಿಗೆ ಸರಬರಾಜುಶ್ರೀಮಂತರು ಆಯೋಜಿಸುವ ಪಾರ್ಟಿಗಳು, ನೈಟ್ ಪಾರ್ಟಿಗಳಿಗೆ ಪೂರೈಕೆಐಟಿ-ಬಿಟಿ ಉದ್ಯೋಗಿಗಳು ಇವರ ಗಿರಾಕಿಗಳು
ಮಾದಕ ವಸ್ತು ಮಾರಾಟ ಹಾಗೂ ಸೇವನೆಗೆ ಸಂಬಂಧಿಸಿದಂತೆ ಮಾಹಿತಿ ಅಥವಾ ದೂರುಗಳನ್ನು ಕೊಡಲು ಟೋಲ್ ಫ್ರೀ ಸಂಖ್ಯೆ 1908 ಆರಂಭಿಸಲಾಗಿದೆ. ಸಾರ್ವಜನಿಕರು ಈ ನಂಬರ್​ಗೆ ಕರೆ ಮಾಡಿ ದೂರು ಕೊಡಬಹುದು. ಈ ಟೋಲ್ ಫ್ರೀ ಸಂಖ್ಯೆಯನ್ನು ಇನ್ನಷ್ಟು ಜನಪ್ರಿಯಗೊಳಿಸಲು ಕ್ರಮಗಳನ್ನು ಕೈಗೊಳ್ಳುವಂತೆ ಡಿಜಿಪಿ ಆದೇಶಿಸಿದ್ದಾರೆ.
ಕರ್ನಾಟಕವನ್ನು ಮಾದಕದ್ರವ್ಯಮುಕ್ತ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ. ಡ್ರಗ್ಸ್ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲು ರಾಜ್ಯದ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಾದಕ ವ್ಯಸನದಿಂದ ಅಪರಾಧ ಪ್ರಕರಣಗಳ ಹೆಚ್ಚಳಕ್ಕೂ ಕಾರಣವಾಗಿದ್ದು, ಮಾದಕ ವಸ್ತುಗಳ ಮಾರಾಟ ನಿಯಂತ್ರಣಕ್ಕೆ ಹಾಗೂ ಸೇವನೆಯಿಂದ ಆಗಬಹುದಾದ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜನೆಗೂ ಸೂಚಿಸಲಾಗಿದೆ.| ಡಾ.ಅಲೋಕ್ ಮೋಹನ್ ಡಿಜಿ-ಐಜಿಪಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + two =
Remember me
