ಬೆಂಗಳೂರು:ಪಾಕಿಸ್ತಾನದ ಪರ ಘೋಷಣೆ ಕೂಗಿದ ಮತ್ತು ಫ್ರೀ ಕಾಶ್ಮೀರ ಪ್ಲಕಾರ್ಡ್​ ಹಿಡಿದ ಅಮೂಲ್ಯಾ ಮತ್ತು ಆರುದ್ರಾರನ್ನು ಪೊಲೀಸರು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ.
ಅಮೂಲ್ಯಾ ಹಾಗೂ ಆರುದ್ರಾ ಬಂಧನದ ವೇಳೆ ಠಾಣೆಯ ಬಳಿ ಬಂದಿದ್ದ ಅವರ ಇಬ್ಬರು ಸ್ನೇಹಿತರನ್ನು ಪೊಲೀಸ್​ ವಿಶೇಷ ತಂಡ ವಿಚಾರಣೆಗೆ ಒಳಪಡಿಸಿದೆ.
ಅಮೂಲ್ಯಾ ಹಾಗೂ ಆರುದ್ರಾ ಎಲ್ಲೆಲ್ಲಿ ಇಂತಹ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದಾರೆ ಎಂಬಿತ್ಯಾದಿ ಪ್ರಶ್ನೆಗಳನ್ನು ಸ್ಟೇಶನ್ ಬಳಿ ಬಂದ ಪರನ್​ ಅಮಿತವ್​ ಮತ್ತು ನಜೀಬುಲ್ಲ ಬಳಿ ಪೊಲೀಸರು ಕೇಳಿದ್ದಾರೆ ಎನ್ನಲಾಗಿದೆ.ಅದಕ್ಕೆ ಉತ್ತರಿಸಿದ ಇವರಿಬ್ಬರೂ, ಅಮೂಲ್ಯ ಮತ್ತು ಆರುದ್ರಾ ಬಂಧನವಾಗಿದ್ದು ತಿಳಿಯಿತು. ಅದಕ್ಕಾಗಿ ಠಾಣೆಗೆ ಬಂದಿದ್ದೇವೆ. ಅವರ ಹೋರಾಟ ಮತ್ತು ಹೇಳಿಕೆ ಬಗ್ಗೆ ನಮಗೆ ಗೊತ್ತಿಲ್ಲ. ಅವರ ಹೇಳಿಕೆಗೂ ನಮಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ನಾವು ಅವರ ಸ್ನೇಹಿತರು. ಹಾಗಾಗಿ ಬಂದಿದ್ದೇವೆ. ನಾವಿಬ್ಬರು ಯಾವುದೇ ಹೋರಾಟದಲ್ಲೂ ಭಾಗಿಯಾಗಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
