| ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗಸರಿ-ತಪ್ಪು ವಿವೇಚಿಸದೆ ನಿಮ್ಮ ಮೊಬೈಲ್​ಗೆ ಬರುವ ವಾಟ್ಸ್ ಆಪ್ ಸಂದೇಶಗಳು, ವಿಡಿಯೊಗಳನ್ನು ಫಾರ್ವರ್ಡ್ ಮಾಡುವ ಹವ್ಯಾಸ ನಿಮ್ಮದಾಗಿದ್ದಾರೆ ಎಚ್ಚರ! ಮನಸೋ ಇಚ್ಛೆ ಸಂದೇಶಗಳನ್ನು ಹಂಚಿಕೊಳ್ಳುವುದರಿಂದ ಗ್ರೂಪ್ ಅಡ್ಮಿನ್​ಗಳ ಜತೆ ನೀವು ಕೂಡ ಕಾನೂನಿನ ಕುಣಿಕೆಗೆ ಸಿಲುಕುವುದು ಅನಿವಾರ್ಯವಾದೀತು.
ಸರ್ಕಾರದ ಆದೇಶದ ಬಳಿಕ ಈ ನಿಟ್ಟಿನಲ್ಲಿ ಪೊಲೀಸರು ಚುರುಕಾಗಿದ್ದಾರೆ. ಗೃಹ ಇಲಾಖೆ ಸೂಚನೆಯಂತೆ ರಾಜ್ಯದ ಎಲ್ಲ ಜಿಲ್ಲಾ ಪೊಲೀಸ್ ಕಚೇರಿ (ಡಿಪಿಒ), ಠಾಣೆಗಳಲ್ಲಿ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್​ಗಳು ಆರಂಭವಾಗಿವೆ. ದಿನದ 24 ತಾಸು ಜಾಲತಾಣಗಳ ಮೇಲೆ ಹದ್ದಿನ ಕಣ್ಣಿಡುತ್ತಿದ್ದಾರೆ. ಕೋಮು ಸಂಘರ್ಷಕ್ಕೆ ಕಾರಣವಾಗುವ ಸಂದೇಶಗಳು, ಅಶ್ಲೀಲ, ಅಸಭ್ಯ ವಿಡಿಯೋ, ಫೋಟೋ ಹರಿಬಿಡುವುದು ಹಾಗೂ ಸುಳ್ಳು ಸುದ್ದಿ ಹಬ್ಬಿಸುವುದು ಇತ್ಯಾದಿ ಬೇಜವಾಬ್ದಾರಿ ನಡೆಯಿಂದ ಕಾನೂನು ಸುವ್ಯಸ್ಥೆಗೆ ಆಗುವಂಥ ಧಕ್ಕೆಯನ್ನು ತಪ್ಪಿಸುವುದು ಇದರ ಉದ್ದೇಶ.
150ಕ್ಕೂ ಹೆಚ್ಚು ಗ್ರೂಪ್​ಗಳ ಮೇಲೆ ನಿಗಾ:ಚಿತ್ರದುರ್ಗ ಜಿಲ್ಲೆಯ ಡಿಪಿಒದಲ್ಲಿ ಕಳೆದ ವಾರ ಕಾರ್ಯಾರಂಭ ಮಾಡಿರುವ ಘಟಕ, ಈಗಾಗಲೆ 150 ಕ್ಕೂ ಹೆಚ್ಚು ವಾಟ್ಸ್ ಆಪ್ ಗ್ರೂಪ್​ಗಳ ಮೇಲೆ ನಿಗಾವಹಿಸಿದೆ. ಜಿಲ್ಲೆಯ ಎಲ್ಲ 23 ಠಾಣೆಗಳಲ್ಲೂ ಸೆಲ್ ಸ್ಥಾಪಿಸಲಾಗಿದೆ. ಈ ಹಿಂದೆ ಫೇಸ್​ಬುಕ್ ಇತ್ಯಾದಿಗಳ ಮೂಲಕ ಅವಹೇಳನಕಾರಿ ಸಂದೇಶಗಳು, ಚಿತ್ರಗಳ ರವಾನೆ ಆಗಿರುವ ಕುರಿತಂತೆ ಜಿಲ್ಲೆಯಲ್ಲಿ ದಾಖಲಾಗಿದ್ದ ದೂರುಗಳ ಪೈಕಿ ಕೆಲವಿನ್ನೂ ಬಗೆಹರಿದಿಲ್ಲ. ಇವುಗಳ ವಿಚಾರಣೆ ತ್ವರಿತಗೊಳಿಸಲು ಜಿಲ್ಲಾ ಪೊಲೀಸರು ಮೇಲಧಿಕಾರಿ ಹಾಗೂ ಸರ್ಕಾರದ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.
ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುವ ಸಂದೇಶಗಳ ಮೇಲೆ ಹದ್ದಿನ ಕಣ್ಣಿಡಲು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಕಾರ್ಯಾರಂಭ ಮಾಡಿದೆ. ಎಲ್ಲ ಠಾಣೆಗಳಲ್ಲೂ ಈ ಘಟಕಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲಿದ್ದು, ಆಯಾ ಠಾಣಾ ವ್ಯಾಪ್ತಿಯಲ್ಲಿ ಹರಿದಾಡುವ ಸಂದೇಶಗಳ ಮೇಲೆ ನಿಗಾ ಇಡಲಿವೆ.
| ಕೆ.ಪರಶುರಾಮ, ಎಸ್​ಪಿ, ಚಿತ್ರದುರ್ಗ
ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಲು ಈಗಾಗಲೆ ಜಿಲ್ಲೆಯ ನಿಯೋಜಿತ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಶಂಕಿತ(ಸುಳ್ಳು ಸುದ್ದಿ) ಸಂದೇಶಗಳ ಫ್ಯಾಕ್ಟ್ ಚೆಕ್ಕಿಂಗ್ ಮಾಡಿ ಸತ್ಯ ಏನೆಂಬುದನ್ನು ಇಲಾಖೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಿದೆ.
| ಇ.ವೈ.ಕಿರಣ್, ಇನ್ಸ್​ಪೆಕ್ಟರ್, ಡಿಎಸ್​ಬಿ, ಚಿತ್ರದುರ್ಗ
ಇದು ನಾಯಿಯಲ್ಲ, ನಾಯಿಯಂತೆ ಕಾಣುವ ಮನುಷ್ಯ: 40 ದಿನಗಳೊಳಗೆ ಆಯ್ತು ರೂಪಾಂತರ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
