ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ರಾತ್ರಿ ರೆಸಾರ್ಟ್‌ನಿಂದ ಹೊರಡುವ ಹೊತ್ತಿಗೆ ಸರಿಯಾಗಿ ಕಪಿಗಳ ಚೇಷ್ಟೆಯಿಂದ ಖಾಕಿಪಡೆ ಸುಸ್ತಾದ ಪ್ರಸಂಗ ನಡೆದಿದೆ.
ದೇವನಹಳ್ಳಿ ಸಮೀಪದ ರೆಸಾರ್ಟ್‌ನಲ್ಲಿ ಆಯೋಜಿಸಿದ್ದ ಬಿಜೆಪಿ ಚಿಂತನ ಸಭೆ ಮುಗಿದು ಸಿಎಂ ವಾಪಸ್‌ ಹೊರಡಲು ಸಜ್ಜಾಗಿದ್ದರು. ಇದೇ ವೇಳೆ ಪೊಲೀಸರು ತಮ್ಮ ಬೈಕ್‌ಗಳ ಮೇಲಿಟ್ಟಿದ್ದ ಟಿ-ಶರ್ಟ್, ರೇಡಿಯಂ ಜಾಕೆಟ್‌ಗಳನ್ನು ಕೆಲವು ಕೋತಿಗಳು ಎಗರಿಸಿ ಮರವೇರಿ ಕುಳಿತವು. ಮರವೇರಿದ ಒಂದು ಕೋತಿ ಟಿ-ಶರ್ಟ್ ಹಾಕಿಕೊಳ್ಳುವಲ್ಲಿ ಯಶಸ್ವಿಯಾಯಿತು. ಮತ್ತೊಂದು ಮರಿ ಕೋತಿ ರೇಡಿಯಂ ಜಾಕೆಟ್ ಎತ್ತಿಕೊಂಡು ಮರಕ್ಕೆ ಜಿಗಿಯಿತು.
ಮುಖ್ಯಮಂತ್ರಿ ಬರುತ್ತಿರುವ ಮಾಹಿತಿ ತಿಳಿದು ಅತ್ತ ಕರ್ತವ್ಯ ನಿರ್ವಹಿಸಬೇಕೋ? ಕೋತಿಗಳಿಂದ ಟಿ-ಶರ್ಟ್, ರೇಡಿಯಂ ಜಾಕೆಟ್ ವಾಪಸ್ ಕಿತ್ತುಕೊಳ್ಳಬೇಕೋ? ಎಂದು ತಿಳಿಯದ ಫಜೀತಿಗೆ ಪೊಲೀಸರು ಸಿಲುಕಿದರು. ಕೋತಿಗಳ ಬದಲಿಗೆ ಡ್ಯೂಟಿಯತ್ತ ಪೊಲೀಸರು ಗಮನಹರಿಸಿದರು. ಮುಖ್ಯಮಂತ್ರಿಯಿದ್ದ ಕಾರು ಅತ್ತ ಹೋಗುತ್ತಿದ್ದಂತೆ ಇತ್ತ ಕೋತಿಗಳು ಟಿ ಶರ್ಟ್, ರೇಡಿಯಂ ಜಾಕೆಟ್ ಕೆಳಗೆ ಎಸೆದು ಓಟು ಕಿತ್ತವು.
ಇಷ್ಟಪಟ್ಟು ಪುರುಷನ ಜತೆಗಿದ್ದು, ಸಂಬಂಧ ಕೆಟ್ಟಾಗ ರೇಪ್​ ಆಯ್ತು ಅನ್ನೋ ಹಾಗಿಲ್ಲ: ಸುಪ್ರೀಂ ಕೋರ್ಟ್​
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 11 =
Remember me
