ಚಿಕ್ಕೋಡಿ:ಮದುವೆ ಮಾಡಿಕೊಂಡು ಹೊಸ ಜೀವನದ ಹೊಸ್ತಿಲು ದಾಟಿದ ಖುಷಿಯಲ್ಲಿದ್ದ ಈ ದಂಪತಿಗೆ ಮದುವೆಯಾಗಿದ್ದಕ್ಕೇ ಪೊಲೀಸ್ ಕೇಸ್ ಎದುರಿಸುವಂತಾಗಿದೆ. ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಪ್ರವೇಶಿಸಿದ ಬೆನ್ನಿಗೇ ಈ ಸತಿ-ಪತಿ ಇಬ್ಬರ ಮೇಲೂ ಮೊಕದ್ದಮೆ ದಾಖಲಾಗಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಭೀಮ ನಗರದಲ್ಲಿ ಇರುವ ಅಂಬೇಡ್ಕರ್​ ಭವನದಲ್ಲಿ ಈ ಮದುವೆ ನಡೆದಿದ್ದು, ಇವರ ಮೇಲೆ ಕೇಸ್ ದಾಖಲಾಗಿರುವುದಷ್ಟೇ ಅಲ್ಲ, ಇವರು ಮದುವೆ ಮಾಡಿಕೊಂಡಿರುವ ಅಂಬೇಡ್ಕರ್ ಭವನವನ್ನೂ ಸೀಲ್​ ಡೌನ್​ ಮಾಡಲಾಗಿದೆ. ನವದಂಪತಿ ಮಾತ್ರವಲ್ಲದೆ, ಎರಡೂ ಕುಟುಂಬಗಳ ಮುಖ್ಯಸ್ಥರ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಇಲ್ಲಿ ಸೋಂಕಿತರಿಗೆ ನೀಡುತ್ತಿದ್ದಾರೆ ಅವಧಿ ಮುಗಿದ ಔಷಧ!; ಶಾಸಕರಿಂದ ತೀವ್ರ ಆಕ್ಷೇಪ
ಕರೊನಾ ಹಾವಳಿ ಅಧಿಕವಾಗಿರುವ ಸಂದರ್ಭದಲ್ಲಿ ಇವರು ಕೋವಿಡ್ ಮಾರ್ಗಸೂಚಿಗಳನ್ನು ಮೀರಿ, ಅದ್ದೂರಿಯಾಗಿ ಮದುವೆಯಾಗಿದ್ದಾರೆ ಎಂಬ ಕಾರಣಕ್ಕೆ ಮೊಕದ್ದಮೆ ದಾಖಲಾಗಿದೆ. ಪುರಸಭೆ ಅಧಿಕಾರಿಗಳು ಹಾಗೂ ಪೊಲೀಸರು ಜತೆಯಾಗಿ ದಾಳಿ ನಡೆಸಿದ್ದು, ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈಕೆಯ ಬರ್ತ್​ಡೇಯನ್ನು ಪೊಲೀಸರೂ ಸೆಲೆಬ್ರೇಟ್​ ಮಾಡಿದರು!; ಅಷ್ಟಕ್ಕೂ ಈ ಯುವತಿ ಮಾಡಿದ್ದಾದರೂ ಏನು?

ಕರೊನಾ ಲಸಿಕೆ, ಆಮ್ಲಜನಕ ಉಪಕರಣ : ಆಮದು ಶುಲ್ಕ ವಿನಾಯಿತಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:12 − 4 =
Remember me
