ಬೆಂಗಳೂರು:ಚುನಾವಣೆ, ಹಬ್ಬಹರಿದಿನ, ಪ್ರತಿಭಟನೆ ಸೇರಿದಂತೆ ವಿಶೇಷ ಬಂದೋಬಸ್ತ್ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ/ಸಿಬ್ಬಂದಿಗೆ ನೀಡಲಾಗುತ್ತಿದ್ದ ಆಹಾರ ಭತ್ಯೆಯನ್ನು 100 ರೂ.ಯಿಂದ 200 ರೂ.ಗೆ ಏರಿಕೆ ಮಾಡಿ ಸರ್ಕಾರ ಆದೇಶಿಸಿದೆ.
ಪ್ರತಿದಿನ ಆಹಾರ ಪದಾರ್ಥಗಳ ಬೆಲೆ ಏರಿಕೆ ಆಗುತ್ತಿದ್ದು, ಆಹಾರ ತಯಾರಕರು ಸಹ ಊಟ/ತಿಂಡಿ ಬೆಲೆ ಹೆಚ್ಚಿಸುತ್ತಿದ್ದಾರೆ. ಇದರಿಂದ ಬಂದೋಬಸ್ತ್ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ/ ಸಿಬ್ಬಂದಿಗೆ ದಿನಕ್ಕೆ 100 ರೂ. ಆಹಾರ ಭತ್ಯೆ ನೀಡಲಾಗುತ್ತಿದೆ. ಇದರಲ್ಲಿ ಒಬ್ಬರಿಗೆ ದಿನಕ್ಕೆ ಉಪಹಾರ, ಎರಡು ಊಟ ಮತ್ತು ಎರಡು ಬಾರಿ ಕಾಫಿ/ಟೀ ನೀಡಲು ಸಾಧ್ಯವಾಗುತ್ತಿಲ್ಲ. ಕನಿಷ್ಠ 250 ರೂ. ಬೇಕಾಗುತ್ತಿದೆ. ಅದಕ್ಕಾಗಿ ಆಹಾರ ಭತ್ಯೆಯನ್ನು 250 ರೂ.ಗೆ ಏರಿಕೆ ಮಾಡಬೇಕೆಂದು ಪೊಲೀಸ್ ಇಲಾಖೆ ಗೃಹ ಇಲಾಖೆಗೆ ಮನವಿ ಮಾಡಿದ್ದರು. ಇದಕ್ಕೆ ಒಪ್ಪಿರುವ ಗೃಹ ಇಲಾಖೆ ಬಂದೋಬಸ್ತ್ ಕರ್ತವ್ಯ ನಿರ್ವಹಿಸುವ ಅಧಿಕಾರಿ/ಸಿಬ್ಬಂದಿಗೆ ತಲಾ 100 ರೂ.ಯಿಂದ 200 ರೂ.ಗೆ ಹೆಚ್ಚಿಸಿ ಆದೇಶ ಹೊರಡಿಸಿದೆ. ಈ ಆದೇಶ ಹೊರಡಿಸಿದ ದಿನಾಂಕದಿಂದಲೇ ಜಾರಿಗೆ ಬರುವಂತೆ ಸೂಚಿಸಿದೆ.
ಎಂಟು ಮಹಿಳೆಯರನ್ನು ಮದುವೆಯಾಗಿ, ವೇಶ್ಯಾವಾಟಿಕೆ ಮಾಡಿ ಎಂದ ಗಂಡ!

ದಾಂಪತ್ಯ ಜೀವನಕ್ಕೆ ಎಂಟ್ರಿ ಕೊಟ್ಟ ಬಿಗ್​ಬಾಸ್​ ಸ್ಪರ್ಧಿ! ಹೇಗಿದೆ ನೋಡಿ ಈ ಜೋಡಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − nine =
Remember me
