ರಾಜ್ಯ ಉಗ್ರ ಚಟುವಟಿಕೆ ತಾಣವಾಗುತ್ತಿರುವುದು ಶಂಕಿತ ಉಗ್ರರ ಬಂಧನದಿಂದ ದೃಢಪಟ್ಟ ಬೆನ್ನಲ್ಲೇ ಗುಪ್ತದಳವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಯೋಜನೆ ರೂಪಿಸಿವೆ. ಮೊದಲ ಹಂತವಾಗಿ ವಿವಿಧ ವೃಂದದ ಹುದ್ದೆಗಳನ್ನು ಮರುವಿಂಗಡಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಇನ್​ಸ್ಪೆಕ್ಟರ್, ಡಿವೈಎಸ್ಪಿಗಿಂತ ಮೇಲಿನ ಶ್ರೇಣಿ ಅಧಿಕಾರಿಗಳು ಹೊರಗೆ ಹೋಗಿ ಕೆಲಸ ಮಾಡಲು ಸಾಧ್ಯವಿಲ್ಲ. ಸಾಮಾನ್ಯರಂತೆ ಓಡಾಡಿ ರಹಸ್ಯ ಮಾಹಿತಿ ಸಂಗ್ರಹಿಸುವುದು ಸಹಾಯಕ
ಸಬ್​ಇನ್​ಸ್ಪೆಕ್ಟರ್, ಸಬ್​ಇನ್​ಸ್ಪೆಕ್ಟರ್ ಹಾಗೂ ಕಾನ್​ಸ್ಟೇಬಲ್​ಗಳಿಂದ ಮಾತ್ರ ಸಾಧ್ಯ. ಹೀಗಾಗಿ ಈ ಹುದ್ದೆಗಳ ಉನ್ನತೀಕರಣ ಹಾಗೂ ಬುದ್ಧಿವಂತ ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜನೆಗೆ ಈಗ ಹೆಚ್ಚಿನ ಆದ್ಯತೆ ಕೊಡಲಾಗಿದೆ.
ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ ಹಾಗೂ ಕಲಬುರಗಿ ವಿಭಾಗದ ಕೇಂದ್ರ ಸ್ಥಾನ ಮತ್ತು ಜಿಲ್ಲಾ ಘಟಕಗಳಲ್ಲಿ ಈ ಹಿಂದೆ ಹೆಚ್ಚುವರಿಯಾಗಿ ಮಂಜೂರು ಮಾಡಿದ್ದ ಸಿವಿಲ್ ಪೊಲೀಸ್ ಕಾನ್​ಸ್ಟೇಬಲ್ ಹುದ್ದೆಗಳನ್ನು ರದ್ದುಪಡಿಸಲಾಗಿದೆ. ಈ ಹುದ್ದೆಗಳಿಗೆ ಬದಲಾಗಿ ಮುಖ್ಯಪೇದೆ ಮತ್ತು ಎಎಸ್​ಐ ಹುದ್ದೆಗಳನ್ನು ಉನ್ನತೀಕರಿಸುವುದರ ಜತೆಗೆ ಕರ್ತವ್ಯ ನಿರ್ವಹಣಾ ಜವಾಬ್ದಾರಿಯನ್ನೂ ಮರುಹಂಚಿಕೆ ಮಾಡಲಾಗಿದೆ.
ರದ್ದುಪಡಿಸಿದ ಹುದ್ದೆಗಳನ್ನು ಹೊರತುಪಡಿಸಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಪೈಕಿ ಚುರುಕಾದ ಸಿಬ್ಬಂದಿಗಳನ್ನು ಅದೇ ಹುದ್ದೆಗಳಲ್ಲಿ ಮುಂದುವರಿಸಿ, ಉಳಿದ ಸಿಬ್ಬಂದಿಯನ್ನು ಮಾತೃಘಟಕಕ್ಕೆ ಹಿಂದಿರುಗಿಸುವ ಕುರಿತು ಸೋಮವಾರ (ಜ.13) ಕೇಂದ್ರ ಕಚೇರಿಗೆ ಪ್ರಸ್ತಾವನೆ ಕಳುಹಿಸುವಂತೆ ಗುಪ್ತದಳ ಡಿಜಿಪಿ ಎಲ್ಲ ವಿಭಾಗಗಳಿಗೆ ಲಿಖಿತವಾಗಿ ಆದೇಶಿಸಿದ್ದಾರೆ. ಉನ್ನತೀಕರಿಸಿರುವ ಮುಖ್ಯಪೇದೆ ಮತ್ತು ಎಎಸ್​ಐ ಹುದ್ದೆಗಳಿಗೆ ಇಚ್ಛೆ ಇರುವ ಹಾಗೂ ಸಾಮರ್ಥ್ಯ ಹೊಂದಿದ ಸಿಬ್ಬಂದಿಯನ್ನು ನಿಯೋಜಿಸುವ ಶಿಫಾರಸ್ಸು ಪ್ರಸ್ತಾವನೆಯನ್ನೂ ಕಳುಹಿಸುವಂತೆ ಸೂಚಿಸಲಾಗಿದೆ.
ಕರ್ನಾಟಕದಲ್ಲೇ ಕಡಿಮೆ ಸಂಖ್ಯೆ: ಬೇರೆ ರಾಜ್ಯಗಳ ಗುಪ್ತದಳ ಅಧಿಕಾರಿ ಮತ್ತು ಸಿಬ್ಬಂದಿ ಸಂಖ್ಯಾಬಲಕ್ಕೆ ಹೊಲಿಸಿದರೆ ರಾಜ್ಯದ ಸಂಖ್ಯಾಬಲ ತೀರಾ ಕಡಿಮೆ ಇದೆ. ಪಂಜಾಬ್​ನಲ್ಲಿ ಬರೋಬ್ಬರಿ 4,453 ಹುದ್ದೆಗಳು ಮಂಜೂರಾಗಿವೆ. ಅದರಲ್ಲಿ 3,851 ಹುದ್ದೆಗಳು ಭರ್ತಿಯಾಗಿವೆ. ಆಂಧ್ರಪ್ರದೇಶದಲ್ಲೂ 2,247 ಹುದ್ದೆಗಳು ಮಂಜೂರಾಗಿದ್ದು, 1,586 ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕದಲ್ಲಿ ಇದರ ಅರ್ಧದಷ್ಟೂ ಸಿಬ್ಬಂದಿ ಇಲ್ಲ.
ಇನ್ನೂ ಹಲವು ಹುದ್ದೆ ಖಾಲಿ
ಪೊಲೀಸ್ ಸಂಶೋಧನೆ ಹಾಗೂ ಅಭಿವೃದ್ಧಿ ಬ್ಯೂರೋ (ಬಿಪಿಆರ್ ಆಂಡ್ ಡಿ) ಮಾಹಿತಿ ಪ್ರಕಾರ ರಾಜ್ಯ ಗುಪ್ತದಳಕ್ಕೆ 1286 ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ ಪ್ರಸ್ತುತ 659 ಹುದ್ದೆಗಳಷ್ಟೇ ಭರ್ತಿಯಾಗಿವೆ. ಉಳಿದ ಹುದ್ದೆಗಳು ಹಲವು ವರ್ಷಗಳಿಂದ ಖಾಲಿ ಉಳಿದಿವೆ. ಖಾಲಿ ಹುದ್ದೆಗಳ ಭರ್ತಿಗೂ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ.
| ಕೀರ್ತಿನಾರಾಯಣ ಸಿ. ಬೆಂಗಳೂರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 2 =
Remember me
