ಬೆಂಗಳೂರು:ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ಶೈಲಿಯ ವಿಡಿಯೋ ಮಾಡುತ್ತಾ ತಮ್ಮದೇ ಸ್ಟೈಲಿನಲ್ಲಿ ಮೆಸ್ಸೇಜ್​ ನೀಡುತ್ತಾ ಬಂದಿರುವ ವಿಕಾಸ್​ ಅಲಿಯಾಸ್​ ವಿಕ್ಕಿಪೀಡಿಯಾರಿಗೆ ಬೆಂಗಳೂರು ಪೊಲೀಸರು ಶಾಕ್​ ನೀಡಿದ್ದಾರೆ.  ಈ ಹಿಂದೆ ನಾನು ನಂದಿನಿ ಬೆಂಗಳೂರಿಗ್​ ಬಂದೀನಿ ರೀಲ್ಸ್​​ ಮೂಲಕ ವೈರಲ್​ ಆಗಿದ್ದ ವಿಕ್ಕಿಪೀಡಿಯಾ ಕೆಲವು ದಿನಗಳ ಹಿಂದೆ ವಿಡಿಯೋ ಒಂದನ್ನು ಮಾಡಿ ಅಪ್ಲೋಡ್​ ಮಾಡಿದ್ದರು. ಈ ವಿಡಿಯೋ ವಿಚಾರವಾಗಿ ಪೊಲೀಸರು ಅವರಿಗೆ ಕರೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಭಿನ್ನ ವಿಭಿನ್ನ ರೀಲ್ಸ್​ಗಳನ್ನು​ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಸಖತ್​ ಸುದ್ದಿಯಲ್ಲಿ ಇರುವ ವಿಕಾಸ್​ ಅಲಿಯಾಸ್​ ವಿಕ್ಕಿಪೀಡಿಯಾ ಮಾದಕ ವಸ್ತು ವ್ಯಸನದ ಬಗ್ಗೆ ವಿಡಿಯೋ ಒಂದನ್ನು ಮಾಡಿದ್ದರು. ಈ ವಿಡಿಯೋ ವಿಚಾರವಾಗಿ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ವಿಕಾಸ್​ರನ್ನು ಅವರನ್ನು ಕರೆಸಿ ಹೇಳಿಕೆ ಪಡೆದಿದ್ದು, ಬಳಿಕ ವಿಡಿಯೋವನ್ನು ಡಿಲೀಟ್​ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಪ್ರೀತಿಸಿದವಳ ಜತೆ ಮದುವೆಗೆ ನಿರಾಕರಣೆ; ತಂದೆ-ತಾಯಿ-ಸಹೋದರನನ್ನು ಕತ್ತು ಸೀಳಿ ಕೊಂದ 15ರ ಬಾಲಕ
ಇಂದಿನ ಯುವಕರು ಎಂಜಾಯ್‌ಮೆಂಟ್‌ಗೆ ಅಂತ ಮದ್ಯಪಾನ ಮಾಡುವುದು, ಸಿಗರೇಟ್‌ ಸೇದೋದು, ಹುಡುಗೀರ್‌ ಹಿಂದೆ ಹೋಗ್ತಾರೆ. ಆದರೆ, ನಾನು ಎಂಜಾಯ್‌ಮೆಂಟ್‌ ಮಾಡಲು ಡ್ರಗ್ಸ್‌ ತಗೋತೀನಿ ಎಂಬ ವಿಡಿಯೋವನ್ನು ವಿಕ್ಕಿಪೀಡಿಯಾ ಕೆಲವು ದಿನಗಳ ಹಿಂದೆ ಹಂಚಿಕೊಂಡಿದ್ದರು. ಇದನ್ನು ಗಮನಿಸಿದ ಪೊಲೀಸರು ಕೂಡಲೇ ವಿಕಾಸ್​ಗೆ ಕರೆ ಮಾಡಿ ಆ ವಿಡಿಯೋವನ್ನುಡಿಲೀಟ್​ ಮಾಡಿಸಿದ್ದಾರೆ. ಅಲ್ಲದೇ ಮತ್ತೆ ಎಂದು ಈ ರೀತಿಯ ವಿಡಿಯೋ ಮಾಡದಂತೆ ಸೂಚನೆ ಕೊಟ್ಟಿದ್ದಾರೆ ಎಂದು ವರದಿಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಆದ ಖ್ಯಾತಿ ಪಡೆದಿರುವ ವಿಕಾಸ್‌, ವಿಕ್ಕಿಪೀಡಿಯಾ ಅಂತಾಲೇ ಫುಲ್ ಫೇಮಸ್‌ ಆಗಿದ್ದಾರೆ. ಕಾಮಿಡಿ ವಿಡಿಯೋಗಳು, ಹಾಡುಗಳು ಹಾಗೂ ಸಾಮಾಜಿಕ ಕಳಕಳಿ ಇರುವಂತಹ ವಿಡಿಯೋಗಳನ್ನು ಮಾಡುವ ಇವರು ನಾನು ನಂದಿನಿ ಬೆಂಗಳೂರಿಗೆ ಬಂದೀನಿ ಎನ್ನುವ ಹಾಡಿನ ಮೂಲಕ ಸಖತ್‌ ವೈರಲ್‌ ಆಗಿದ್ದರು. ಜೊತೆಗೆ ಕರಿಮಣಿ ಮಾಲೀಕ ರಾವುಲ್ಲಾ ಎನ್ನುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನಿರೀಕ್ಷೆಗೂ ಮೀರಿ ಹಿಟ್‌ ಆಗಿತ್ತು. ಸಿನಿಮಾ ಹಾಗೂ ಕೆಲವು ಪ್ರಾಡಕ್ಟ್‌ಗಳ ಪ್ರಮೋಷನ್‌ ಅನ್ನು ಬಹಳ ಡಿಫರೆಂಟ್‌ ಆಗಿ ಮಾಡುವ ವಿಕ್ಕಿಪೀಡಿಯಾ ಹಾಗೂ ಅವರ ತಂಡದ ಕಾಮಿಡಿ ಕಟೆಂಟ್‌ಗಳನ್ನು ನೋಡದವರಿಲ್ಲ, ನೋಡಿ ನಗದವರಿಲ್ಲ ಎನ್ನುವಷ್ಟರ ಮಟ್ಟಿಗೆ ಇವರ ವಿಡಿಯೋಗಳು ವೈರಲ್‌ ಆಗಿ ಟ್ರೆಂಡಿಂಗ್ ಆಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 11 =
Remember me
