ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಮಾಗಡಿ ರಸ್ತೆಯ ನೈಸ್ ರಸ್ತೆ ಜಂಕ್ಷನ್​ನಿಂದ ಸುಮನಹಳ್ಳಿಯವರೆಗೆ ನಾಲ್ಕು ಮುಕ್ಕಾಲು ಕಿ.ಮೀ ದೂರದವರೆಗೆ ರೋಡ್ ಶೋ ನಡೆಸುವ ಕಾರಣ ಸಾಕಷ್ಟು ಭದ್ರತೆ ಒದಗಿಸಲಾಗಿದೆ. ಮೋದಿ ರೋಡ್​ ಶೋ ವೀಕ್ಷಿಸಲು ಸಾವಿರಾರು ಜನರು ಆಗಮಿಸಿದ್ದಾರೆ.
ಮೋದಿ ರೋಡ್ ಶೋ ಹಿನ್ನೆಲೆ ಒದಗಿಸಲಾಗಿರುವ ಭದ್ರತೆ ಮದುಮಗಳಿಗೆ ಸಮಸ್ಯೆ ತಂದೊಡ್ಡಿದೆ. ಸುಂಕದ ಕಟ್ಟೆ ಬಳಿಯ ಕಲ್ಯಾಣ ಮಂಟಪಕ್ಕೆ ತೆರಳಲು ಮದುಮಗಳು ಬಂದಿದ್ದಾಳೆ. ಈ ವೇಳೆ ಭದ್ರತಾ ನಿರತ ಪೊಲೀಸರು ಮದುಮಗಳಿಗೆ ತೆರಳಲು ಅಡ್ಡಿಪಡಿಸಿದ್ದಾರೆ. ವಧುವನ್ನು ತಡೆದು ನಿಲ್ಲಿಸಿದ್ದಾರೆ.
ಇದನ್ನೂ ಓದಿ:ರಾಹುಲ್ ಗಾಂಧಿಗೆ ಬುದ್ದಿ ಭ್ರಮಣೆಯಾಗಿದ್ದು ಮೆಡಿಕಲ್ ಚೆಕಪ್ ಮಾಡಿಸಿಕೊಳ್ಳಲಿ: ಬಿಎಸ್​ವೈ
ಕಲಶ ಹಿಡಿದು ಸ್ಕೂಟರ್​ನಲ್ಲಿ ಬಂದ ಮದುಮಗಳಿಗೆ ಭದ್ರತೆಯ ಕಾರಣದಿಂದ ಮದುವೆ ಮಂಟಪಕ್ಕೆ ತೆರಳಲು ಪೊಲೀಸರು ಅಡ್ಡಿ ಪಡಿಸಿದ ಘಟನೆ ನಡೆದಿದೆ. ವಿಚಾರಣೆ ನಡೆಸಿ, ಮಾಧ್ಯಮಗಳ ಕ್ಯಾಮರಾ ಕಂಡು ಕೊನಗೆ ಮದುಮಗಳಿಗೆ ತೆರಳಲು ಪೊಲೀಸರು ಅವಕಾಶ ಮಾಡಿಕೊಟ್ಟಿದ್ದಾರೆ.
ಪ್ರಧಾನಿ ಮೋದಿ ರೋಡ್​ ಶೋ ವೀಕ್ಷಿಸಲು ಸಾಕಷ್ಟು ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ. ಈ ವೇಳೆ ಯಲಹಂಕದ 5ನೇ ತರಗತಿ ವಿದ್ಯಾರ್ಥಿ ಶಶಾಂಕ್ ಮೋದಿಯಂತೆ ವೇಷ ತೊಟ್ಟು ಗಮನ ಸೆಳೆದಿದ್ದಾರೆ.
ಇದನ್ನೂ ಓದಿ:ಕುಡಚಿಯಲ್ಲಿ ಕಾಂಗ್ರೆಸ್​ ಮೇಲೆ ವಾಗ್ದಾಳಿ ಮಾಡಿದ ಪ್ರಧಾನಿ ಮೋದಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
