ಬೆಂಗಳೂರು:ವಾರದ ರಜೆ, ಕರೊನಾ ಹಿನ್ನೆಲೆಯಲ್ಲಿ ನೀಡುತ್ತಿರುವ ದೀರ್ಘಕಾಲದ ರಜೆಯನ್ನು ನೀಡುತ್ತಿಲ್ಲ ಎಂದು ಬೊಮ್ಮನಹಳ್ಳಿ ಠಾಣೆ ಪೊಲೀಸ್ ಅಧಿಕಾರಿಗಳ ವಿರುದ್ಧ ಕೆಳಹಂತದ ಸಿಬ್ಬಂದಿ ಆರೋಪಿಸಿದ್ದಾರೆ.
ಇದನ್ನೂ ಓದಿ:ಅತ್ಯಾಚಾರ ಸಂತ್ರಸ್ತೆಗೆ ವೈರಸ್!
ಟ್ವಿಟರ್​ನಲ್ಲಿ ಬೊಮ್ಮನಹಳ್ಳಿ ಪೊಲೀಸ್ ಸ್ಟಾಫ್ ಎಂಬ ಖಾತೆ ತೆರೆದು ನೋವು ಹಂಚಿಕೊಂಡಿದ್ದಾರೆ. ಠಾಣೆಯನ್ನು ಇನ್​ಸ್ಪೆಕ್ಟರ್ ನಿಯಂತ್ರಣ ಮಾಡುತ್ತಿಲ್ಲ. ಬದಲಿಗೆ ಎಸ್​ಐ ಮತ್ತು ರೈಟರ್ ಕಂಟ್ರೋಲ್ ಮಾಡುತ್ತಿದ್ದಾರೆ. ಸರಿಯಾಗಿ ವಾರದ ರಜೆ ನೀಡುತ್ತಿಲ್ಲ. ಶೇ.33 ಸಿಬ್ಬಂದಿಗೆ ದೀರ್ಘಕಾಲದ ರಜೆ ನೀಡುವಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚನೆ ನೀಡಿದ್ದಾರೆ. ಆದರೆ, ಇಲ್ಲಿಯವರೆಗೂ ಯಾರಿಗೂ ರಜೆ ಮಂಜೂರು ಮಾಡಿಲ್ಲ ಎಂದು ದೂರಿದ್ದಾರೆ.
ಇದನ್ನೂ ಓದಿ:13 ವರ್ಷದ ಬಾಲಕನನ್ನು ಹೆಣ್ಣು ಮಗುವಿನ ತಂದೆಯಾಗಿ ಮಾಡಿದ ವಿವಾಹಿತೆಗೆ ಸಿಕ್ಕ ಶಿಕ್ಷೆ ಏನು ಗೊತ್ತಾ?
5 ವರ್ಷಗಳಿಂದ ಒಬ್ಬರೇ ರೈಟರ್ ಸೇವೆಯಲ್ಲಿದ್ದಾರೆ. 2 ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಹುದ್ದೆ ನಿಭಾಯಿಸಿದವರನ್ನು ಬದಲಾಯಿಸಬೇಕೆಂದು ಭಾಸ್ಕರ್ ರಾವ್ ನಿರ್ದೇಶನ ನೀಡಿದ್ದರು. ಈ ಆದೇಶವೂ ಪಾಲನೆ ಆಗಿಲ್ಲ ಎಂದು ಟ್ವಿಟರ್ ಮೂಲಕವೇ ಸಿಎಂ, ಗೃಹ ಸಚಿವ, ಡಿಜಿಪಿ, ಕಮಿಷನರ್ ಹಾಗೂ ಆಗ್ನೇಯ ಡಿಸಿಪಿಗೆ ದೂರು ನೀಡಿದ್ದಾರೆ. ಇದನ್ನು ಗಮನಿಸಿರುವ ಪೊಲೀಸ್ ಆಯುಕ್ತರು ತಕ್ಷಣ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ:ಪ್ರೀತೀಲಿ ಮೋಸ ಹೋದ ಯುವತಿಯಿಂದ ಮಾಜಿ ಲವರ್​ಗೆ 1 ಟನ್​ ಈರುಳ್ಳಿ ಗಿಫ್ಟ್​: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ?
ಮಕ್ಕಳಿಗೆ ಮೊಬೈಲ್ ಗಾಳ! ವಾಟ್ಸ್​ಆಪ್ ಗ್ರೂಪಲ್ಲಿ ಅಶ್ಲೀಲ ದೃಶ್ಯ ಕಳುಹಿಸಿ ಬೆದರಿಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 12 =
Remember me
