ಬೆಂಗಳೂರು:ಈ ಕಾಲೇಜಿನಲ್ಲಿ ಯುವತಿಯೊಬ್ಬಳಿಗೆ ಹಾಡಹಗಲೇ ಯುವಕನೊಬ್ಬ ಚಾಕುವಿನಿಂದ ಇರಿದಿದ್ದು ವಿದ್ಯಾರ್ಥಿನಿ ಸಾವಿಗೀಡಾಗಿದ್ದಳು. ತಕ್ಷಣ ಯುವತಿಯನ್ನು ರಾಜಾನುಕುಂಟೆ ಆಸ್ವತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಯುವತಿ ಮೃತಳಾದ ಘಟನೆ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದಿತ್ತು. ಈಗ ಆ ಘಟನೆ ಇನ್ನೊಂದು ಟ್ವಿಸ್ಟ್​ ಸಿಕ್ಕಿದ್ದು, ಕಾಲೇಜಿನ ಸೆಕ್ಯುರಿಟಿ ವೈಫಲ್ಯದಿಂದ ಈ ಹುಡುಗ ಕಾಲೇಜಿನ ಒಳೆ ನುಗ್ಗಿದ್ದ ಎನ್ನುವ ವಿಷಯ ಬೆಳಕಿಗೆ ಬಂದಿದೆ.ಇದನ್ನೂ ಓದಿ:ಹಾಡಹಗಲೇ ಕಾಲೇಜಿನಲ್ಲಿ ಯುವತಿಗೆ ಚಾಕು ಇರಿತ; ಕುರುಡು ಪ್ರೀತಿ ಪ್ರಾಣವನ್ನೂ ತೆಗೆಯುತ್ತೆ..!ಕೊಲೆ ಘಟನೆ ನಂತರ, ಈ ಪವನ್​ ಕಲ್ಯಾಣ್​ ಕಾಲೇಜು ಪ್ರವೇಶಿಸಿದ್ದು ಹೇಗೆ ಎನ್ನುವ ಪ್ರಶ್ನೆ ಎದ್ದಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆದಾಗ ಬೇರೆ ಯಾರೋ ಒಬ್ಬ ವಿದ್ಯಾರ್ಥಿಯ ಫೇಕ್ ಐಡಿ ಕಾರ್ಡ್ ಬಳಸಿ ಆರೋಪಿ ಪವನ್ ಕಲ್ಯಾಣ್ ಒಳಗೆ ನುಗ್ಗಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ.
ರಾಜನುಕುಂಟೆ ಪೊಲೀಸರು ಇದೀಗ ಕೊಲೆ ಪ್ರಕರಣದ ಬಗ್ಗೆ ತನಿಖೆ ಪ್ರಾರಂಭ ಮಾಡಿದ್ದು, ಕಾಲೇಜು ಒಳಗೆ ನುಗ್ಗಿ ಕ್ಲಾಸ್ ರೂಂವರೆಗೂ ಪವನ್ ಹೋಗಿದ್ದೇಗೆ ಅನ್ನೋ ಪ್ರಶ್ನೆ ಕಾಡತೊಡಗಿದೆ. ಕ್ಲಾಸ್ ರೂಂ ಬಳಿ ಬೇರೆ ಕಾಲೇಜಿನ ಹುಡುಗ ಪವನ್​ ಕಲ್ಯಾಣ್​ ಹೋಗುವಾಗ ಸೆಕ್ಯೂರಿಟಿ ಗಮನ ಹರಿಸಲಿಲ್ಲವೇ ಅನ್ನೋ ಆ್ಯಂಗಲ್​ನಲ್ಲಿ ಪೊಲೀಸರು ವಿಚಾರಣೆ ಪ್ರಾರಂಭಿಸಿದ್ದಾರೆ.
ಇದಲ್ಲದೇ ಬೇರೆ ರೀತಿಯಲ್ಲೂ ಪೊಲೀಸರು ಕೊಲೆ ತನಿಖೆ ಶುರು ಮಾಡಿದ್ದು, ಕೊಲೆ ಸಂಧರ್ಭದಲ್ಲಿ ಲಯಸ್ಮಿತಾ ಜತೆಗೆ ಯಾರಿದ್ದರು ಎನ್ನುವುದನ್ನು ಹುಡುಕಾಡುತ್ತಿದ್ದಾರೆ. ಅಷ್ಟೇ ಅಲ್ಲದೇ, ಕಾಲೇಜಿನ ಒಳಗೆ ಈ ಪವನ್​ ಚಾಕು ಹೇಗೆ ತೆಗೆದುಕೊಂಡು ಬಂದದ್ದು ಎನ್ನುವ ಬಗ್ಗೆಯೂ ತನಿಖೆ ನಡೆಯುತ್ತೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + nineteen =
Remember me
