ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಟ ದರ್ಶನ್ ಮತ್ತು ಗ್ಯಾಂಗ್ ಚಿತ್ರದುರ್ಗದ ರೇಣುಕಸ್ವಾಮಿಯನ್ನು ಹತ್ಯೆ ಮಾಡಿ ಎಸೆದಿದ್ದ ಶವ ಕಂಡು ‘ಅಸಹಜ ಸಾವು’ ಎಂದು ಪೊಲೀಸರು ಮೊದಲಿಗೆ ಭಾವಿಸಿದ್ದರು. ಶವದ ಮೇಲಿನ ಗಾಯದ ಗುರುತು ನೋಡಿ ‘ಇದೊಂದು ರೌಡಿ ಗ್ಯಾಂಗ್’ ಕೃತ್ಯ ಎಂಬ ನಿರ್ಧಾರಕ್ಕೆ ಬಂದಿದ್ದರು. ಆದರೆ, ತನಿಖೆ ನಡೆಯುತ್ತಿದ್ದಂತೆ ಹೊಸ ಹೊಸ ತಿರುವು ಪಡೆದು ದರ್ಶನ್, ಪವಿತ್ರಾ ಗೌಡ ಸೇರಿ 17 ಆರೋಪಿಗಳ ಬಂಧನದವರೆಗೆ ನಡೆದ ಕಾರ್ಯಾಚರಣೆಯೇ ರೋಚಕವಾಗಿದೆ.
ಜೂನ್ 8ರಂದು ಚಿತ್ರದುರ್ಗದಿಂದ ರೇಣುಕಸ್ವಾಮಿಯನ್ನು ಅಪಹರಣ ಮಾಡಿ ಪಟ್ಟಣಗೆರೆ ಶೆಡ್​ನಲ್ಲಿ ಕ್ರೂರವಾಗಿ ಹಲ್ಲೆ ನಡೆಸಿ ದರ್ಶನ್ ಗ್ಯಾಂಗ್ ಹತ್ಯೆ ಮಾಡಿತ್ತು. ಇದಾದ ಮೇಲೆ ದರ್ಶನ್ ಸ್ನೇಹಿತ ಪ್ರದೂಷ್, ಶವ ಸಾಗಿಸಲು ಹುಡುಗರ ನೇಮಕ ಮತ್ತು ಪೊಲೀಸ್ ಠಾಣೆಗೆ ಶರಣಾಗಲು ನಾಲ್ವರ ತಂಡ ರಚಿಸಿದ್ದ. ಸ್ಕಾರ್ಪಿಯೋ ಕಾರಿನಲ್ಲಿ ರೇಣುಕಸ್ವಾಮಿ ಶವವನ್ನು ತಂದು ಸುಮನಹಳ್ಳಿ ಸಮೀಪದ ಸತ್ವ ಅಪಾರ್ಟ್​ವೆುಂಟ್ ಮುಂಭಾಗದ ರಾಜಕಾಲುವೆ ಮೇಲೆ ಎಸೆದು ಹೋಗಿದ್ದರು. ಜೂನ್ 9 ಶವ ನೋಡಿದ ಅಪಾರ್ಟ್​ವೆುಂಟ್ ಸೆಕ್ಯೂರಿಟಿ ಗಾರ್ಡ್, ಕಾಮಾಕ್ಷಿಪಾಳ್ಯ ಠಾಣೆಗೆ ಮಾಹಿತಿ ನೀಡಿದ್ದ. ಅಂದಿನ ಇನ್​ಸ್ಪೆಕ್ಟರ್ ಗಿರೀಶ್ ನಾಯ್್ಕ ನೇತೃತ್ವದಲ್ಲಿ ಶವ ಕಂಡು ಅಸಹಜ ಸಾವು ಇರಬೇಕೆಂದು ಭಾವಿಸಿದರೂ ಅದರ ಮೇಲಿನ ಗಾಯದ ಗುರುತು ನೋಡಿದಾಗ ಕೃತ್ಯ ಎಸಗಿದವರ ಕ್ರೂರತೆ ಗೊತ್ತಾಗಿತ್ತು. ಈ ಬಗ್ಗೆ ಪಶ್ಚಿಮ ವಿಭಾಗ ಡಿಸಿಪಿ ಎಸ್. ಗಿರೀಶ್​ಗೆ ಫೋಟೋ ಸಮೇತ ಮಾಹಿತಿ ವಿವರಿಸಿದ್ದರು. ಇದೊಂದು ರೌಡಿ ಗ್ಯಾಂಗ್ ಕೃತ್ಯ ಆಗಿರಬೇಕು ಎಂದು ತನಿಖೆ ಶುರು ಮಾಡುವಂತೆ ಸೂಚಿಸಿದ್ದರು. ಅಪಾರ್ಟ್​ವೆುಂಟ್​ನ ಸೆಕ್ಯೂರಿಟಿ ಗಾರ್ಡ್ ಮ್ಯಾನೇಜರ್ ಕಡೆಯಿಂದ ದೂರು ಪಡೆದು ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆಗಿಳಿದ ಇನ್​ಸ್ಪೆಕ್ಟರ್ ಗಿರೀಶ್ ನಾಯ್್ಕ ನೇತೃತ್ವದ ತಂಡ ಎಫ್​ಎಸ್​ಎಲ್, ಶ್ವಾನ ದಳ, ಕ್ರೖೆಂ ಸೀನ್ ಆಫೀಸರ್​ಗಳನ್ನು ಕರೆಸಿದ್ದರು. ಗಿರೀಶ್ ಮತ್ತು ಎಸಿಪಿ ಚಂದನ್ ಕುಮಾರ್ ಸಹ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದರು.
ಮತ್ತೊಂದು ತಂಡ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಸ್ಕಾರ್ಪಿಯೋ ಕಾರಿನಲ್ಲಿ ಶವ ತಂದು ಎಸೆದಿರುವುದು ಬೆಳಕಿಗೆ ಬಂದಿರುತ್ತದೆ. ಸ್ಕಾರ್ಪಿಯೋ ಬೆನ್ನತ್ತಿದ್ದಾಗ ರಾಜರಾಜೇಶ್ವರಿನಗರದ ವಿನಯ್ ಮನೆವರೆಗೂ ದೃಶ್ಯಾವಳಿ ಲಭ್ಯವಾಗಿದ್ದವು. ಭಾನುವಾರ ಮಧ್ಯಾಹ್ನ ಪೊಲೀಸರಿಗೆ ಶರಣಾಗಬೇಕಿದ್ದ ನಿಖಿತ್​ನಾಯಕ್, ಕೇಶವಮೂರ್ತಿ, ಕಾರ್ತಿಕ್ ಸಿದ್ಧವಿದ್ದರು. ಆದರೆ, ರಾಘವೇಂದ್ರ ಭಯಕ್ಕೆ ಊರಿಗೆ ಹೋಗಿದ್ದ ಕಾರಣಕ್ಕೆ ಪ್ಲಾ್ಯನ್ ಉಲ್ಟಾ ಆಗಿತ್ತು. ಇತ್ತ ಪೊಲೀಸರು ಸ್ಕಾರ್ಪಿಯೋ ಬೆನ್ನತ್ತಿ ವಿನಯ್ ಮನೆ ಬಳಿಗೆ ಹೋಗಿದ್ದರು. ಆದರಿಂದ ರಾಘವೇಂದ್ರನಿಗೆ ಒಪ್ಪಿಸಿ ವಾಪಸ್ ಕರೆಸಿ ಜೂನ್ 10ರ ಮಧ್ಯಾಹ್ನ 4 ಗಂಟೆಗೆ ನಾಲ್ವರನ್ನು ಕಾಮಾಕ್ಷಿಪಾಳ್ಯ ಠಾಣೆಗೆ ಶರಣಾಗತಿ ಮಾಡಿಸಿದ್ದರು. ಹಣಕಾಸಿನ ವಿಚಾರಕ್ಕೆ ಕೊಲೆ ಮಾಡಿದ್ದಾಗಿ ಹೇಳಿಕೆ ನೀಡಿದ್ದರು. ಇದೇ ಸಮಯಕ್ಕೆ ಪಶ್ಚಿಮ ವಿಭಾಗ ಡಿಸಿಪಿ ಕಚೇರಿಗೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಭೇಟಿ ನೀಡಿದ್ದರು. ಯುವಕರ ಶರಣಾಗತಿ ಕುರಿತು ಡಿಸಿಪಿ ಗಿರೀಶ್​ಗೆ ಇನ್​ಸ್ಪೆಕ್ಟರ್ ಗಿರೀಶ್ ನಾಯ್್ಕ ಮಾಹಿತಿ ರವಾನಿಸಿ, ತನಿಖೆ ಚುರುಕುಗೊಳಿಸಿದ್ದರು.
ಪ್ರತ್ಯೇಕ ವಿಚಾರಣೆ ವೇಳೆ ಬಾಯ್ಬಿಟ್ಟರು:ಕೇಶವಮೂರ್ತಿ, ಕಾರ್ತಿಕ್, ನಿಖಿತ್ ಮತ್ತು ರಾಘವೇಂದ್ರನನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿದ್ದರು. ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷನಾಗಿದ್ದ ರಾಘವೇಂದ್ರ, ದರ್ಶನ್ ಪತ್ನಿ ವಿಜಯಲಕ್ಷ್ಮಿ ಕುರಿತು ಕೆಟ್ಟದಾಗಿ ಚಾಟಿಂಗ್ ಮಾಡಿದ್ದಕ್ಕೆ ಕೃತ್ಯ ಎಂದು ಹೇಳಿದ್ದ. ಇತ್ತ ಕೇಶವಮೂರ್ತಿ ಪವಿತ್ರಾ ಗೌಡ ವಿಚಾರ ಬಾಯ್ಬಿಟ್ಟಿದ್ದ. ಕೊಲೆ ನಡೆದಾಗ ವಿನಯ್, ಪ್ರದೂಷ್, ಪವನ್ ಇನ್ನಿತರರು ಇದ್ದರು ಎಂದಷ್ಟೇ ಹೇಳಿದ್ದ. ಆದರೆ, ದರ್ಶನ್ ಮತ್ತು ಪವಿತ್ರಾ ಹೆಸರು ಬಾಯ್ಬಿಟ್ಟಿರಲಿಲ್ಲ. ಮತ್ತಷ್ಟು ಶಂಕೆ ಹುಟ್ಟಿಕೊಂಡಿದ್ದು, ಅಷ್ಟೊತ್ತಿಗೆ ರಾತ್ರಿ ಆಗಿರುತ್ತದೆ. ವಿನಯ್, ಪವನ್ ಮೊಬೈಲ್ ನೆಟ್​ವರ್ಕ್ ನೋಡಿದಾಗ ಮೈಸೂರಿನಲ್ಲಿ ಸಿಗ್ನಲ್ ತೋರಿಸಿದ್ದವು. ತಕ್ಷಣ ಡಿಸಿಪಿ ಗಿರೀಶ್, ಬಂಧಿಸುವಂತೆ ಸೂಚಿಸುತ್ತಿದಂತೆ ಪೊಲೀಸರು ಮೈಸೂರಿನ ಕಡೆಗೆ ಪ್ರಯಾಣ ಬೆಳೆಸಿದ್ದರು. ಅದೇ ವೇಳೆ ವಿನಯ್, ಪವನ್ ಮತ್ತು ಗ್ಯಾಂಗ್ ದರ್ಶನ್​ನ್ನು ರ್ಯಾಡಿಸನ್ ಬ್ಲೂ ಹೋಟೆಲ್​ಗೆ ಬಿಟ್ಟು ವಾಪಸ್ ಬರುತ್ತಿತ್ತು. ಮೊಬೈಲ್ ನೆಟ್​ವರ್ಕ್​ನಿಂದ ತಿಳಿದ ಪೊಲೀಸರು ಕುಂಬಳಗೋಡು ಬಳಿಯ ಕಣಿಮಿಣಿಕೆ ಟೋಲ್​ನಲ್ಲಿ ಎಂಟು ಮಂದಿಯನ್ನು ಲಾಕ್ ಮಾಡಿ ಠಾಣೆಗೆ ಕರೆತಂದು ತೀವ್ರ ವಿಚಾರಣೆ ನಡೆಸಿದಾಗ ದರ್ಶನ್ ಹೆಸರು ಬಾಯ್ಬಿಟ್ಟಿದ್ದರು.
ತಕ್ಷಣದ ನಿರ್ಧಾರ ಗಟ್ಟಿಯಾದ ತನಿಖೆ:ರೇಣುಕಸ್ವಾಮಿ ಶವ ಕಂಡು ಅನಾಥ ಅಥವಾ ನಿರ್ಗತಿಕ ಇರಬೇಕೆಂದು ಲಘುವಾಗಿ ಪೊಲೀಸರು ಪರಿಗಣಿಸಿದ್ದರೆ ಇಡೀ ತನಿಖೆ ಆಯಾಮವೇ ಬದಲಾಗುತ್ತಿತ್ತು. ಸಿಕ್ಕ ಸಮಯವನ್ನು ಸದುಪಯೋಗ ಪಡಿಸಿಕೊಂಡು ಕೇವಲ ಮೂರೇ ದಿನದಲ್ಲಿ ಆರೋಪಿಗಳನ್ನು ಬಂಧಿಸಿದ ಪರಿಣಾಮ ಸಾಕ್ಷ್ಯಾಧಾರಗಳ ಸಂಗ್ರಹಕ್ಕೆ ಅನುಕೂಲವಾಗಿದೆ. ಸ್ವಲ್ಪ ತಡ ಆಗಿದ್ದರೂ ಸಾಕ್ಷ್ಯಾಧಾರ ನಾಶ ಮತ್ತು ದರ್ಶನ್ ಬಂಧನ ಪೊಲೀಸರಿಗೆ ಸವಾಲಾಗಿಯೇ ಉಳಿಯುತ್ತಿತ್ತು ಎನ್ನಲಾಗಿದೆ.
ದರ್ಶನ್​ಗೆ ತಿಳಿಯುವಷ್ಟರಲ್ಲಿ ಲಾಕ್ :ದರ್ಶನ್ ಕೈವಾಡ ಇರುವ ವಿಚಾರ ತಿಳಿಯುವಷ್ಟರಲ್ಲಿ ಜೂನ್ 10ರ ತಡರಾತ್ರಿ 2 ಗಂಟೆ ಆಗಿರುತ್ತದೆ. ತಡರಾತ್ರಿಯೇ ಎಸಿಪಿ ಚಂದನ್​ಕುಮಾರ್, ಡಿಸಿಪಿ ಗಿರೀಶ್​ಗೆ ಕರೆ ಮಾಡಿ ವಿಷಯ ಮುಟ್ಟಿಸುತ್ತಾರೆ. ಸೂಕ್ತ ಸಾಕ್ಷ್ಯಾಧಾರಗಳು ಇದ್ದರೆ ಈ ತಕ್ಷಣವೇ ಮೈಸೂರಿಗೆ ಹೋಗಿ ದರ್ಶನ್ ಬಂಧಿಸಿ. ಆತನ ಸ್ನೇಹಿತರು ಬಂಧನಕ್ಕೆ ಒಳಗಾಗಿರುವ ವಿಚಾರ ತಿಳಿದರೆ ಮತ್ತು ಬೆಳಗಾದರೆ ದರ್ಶನ್ ಎಸ್ಕೇಪ್ ಆಗುವ ಅಥವಾ ಅಭಿಮಾನಿಗಳು ಜಮಾಯಿಸುತ್ತಾರೆ. ಈ ಬಗ್ಗೆ ಬೆಳಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುತ್ತೇನೆ ಎಂದು ಸೂಚನೆ ನೀಡಿದ್ದರು. ಎಸಿಪಿ ಚಂದನ್​ಗೆ ಮೈಸೂರಿನಲ್ಲಿ ದರ್ಶನ್​ರನ್ನು ಬಂಧಿಸುವುದು ಸವಾಲಿನ ಕೆಲಸವೇ ಆಗಿತ್ತು. ತಕ್ಷಣ ಬೆಂಗಳೂರಿನಿಂದ ಹೊರಟ ಚಂದನ್ ನೇತೃತ್ವದ ತಂಡ ರ್ಯಾಡಿಸನ್ ಬ್ಲೂ ಹೋಟೆಲ್​ಗೆ ಜೂನ್ 11ರ ಬೆಳಗ್ಗೆ 7.56ಕ್ಕೆ ಮುಟ್ಟಿತ್ತು. ಅಷ್ಟೊತ್ತಿಗೆ ದರ್ಶನ್, ಜಿಮ್ ಮುಗಿಸಿ ರೂಮ್ಲ್ಲಿ ವಿಶ್ರಾಂತಿಗೆ ತೆರಳಿದ್ದರು. ಅಲ್ಲಿಗೆ ನೇರ ಹೋದ ಎಸಿಪಿ ಚಂದನ್, ವಿಷಯ ತಿಳಿಸಿದಾಗ ನೇರ ದರ್ಶನ್ ಬಂದು ಜೀಪ್​ನಲ್ಲಿ ಕುಳಿತು ಪೊಲೀಸರೊಂದಿಗೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು.
ಹುಬ್ಬಳ್ಳಿ:ವಾಲ್ಮೀಕಿ, ಮುಡಾ ಹಗರಣಗಳ ಬಗ್ಗೆ ರಾಜ್ಯದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ವಿಷಯಾಂತರ ಮಾಡುವ ಸಲುವಾಗಿ ರಾಜ್ಯ ಸರ್ಕಾರ ದರ್ಶನ್ ಕೇಸ್​ಗೆ ಸಂಬಂಧಪಟ್ಟ ಕೆಲವು ಫೋಟೋಗಳನ್ನು ವೈರಲ್ ಮಾಡುವ ಸಂಕುಚಿತ ಷಡ್ಯಂತ್ರ ನಡೆಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು. ರೇಣುಕಸ್ವಾಮಿ ಹತ್ಯೆ ರಾಜ್ಯ ಕಂಡ ಅತ್ಯಂತ ಕ್ರೂರ ಕೃತ್ಯವಾಗಿದೆ. ಕೊಲೆಗಾರರಿಗೆ ನ್ಯಾಯಾಲಯದಲ್ಲಿ ಅತ್ಯಂತ ಕಠಿಣ ಶಿಕ್ಷೆ ಆಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ರಾಜ್ಯ ಸರ್ಕಾರ ತಾನು ಮಾಡಿದ ಪ್ರಮಾದಗಳನ್ನು ಮುಚ್ಚಿಕೊಳ್ಳಲು ಇದನ್ನು ಬಳಸುತ್ತಿರುವುದು ಅಕ್ಷಮ್ಯ ಅಪರಾಧ. ಈ ಹಿಂದೆ ಬೆಂಗಳೂರು ಜೈಲಿನಲ್ಲಿದ್ದ ದರ್ಶನ್ ಫೋಟೋಗಳನ್ನು ವೈರಲ್ ಮಾಡಲಾಗಿತ್ತು. ಇದೀಗ ಮೊಬೈಲ್​ನಲ್ಲಿ ರಿಟ್ರೀವ್ ಮಾಡಿದ ಫೋಟೋ ಹರಿಬಿಡಲಾಗಿದೆ. ನ್ಯಾಯಾಲಯವೂ ಇದನ್ನು ಪರಿಗಣನೆಗೆ ತೆಗೆದುಕೊಳ್ಳಲಿದೆ. ಇದಕ್ಕೆ ಕಾರಣೀಕರ್ತರ ಮೇಲೂ ಕ್ರಮ ಆಗಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ವಿವಿ ಆವರಣದಲ್ಲಿ ಚಿರತೆ ಪ್ರತ್ಯಕ್ಷ; ಸೆರೆ ಹಿಡಿಯುವಂತೆ ವಿದ್ಯಾರ್ಥಿಗಳು ಮನವಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two + fourteen =
Remember me
