ಬೆಂಗಳೂರು:ಯುವತಿಯೊಬ್ಬಳಿಗೆ ಹಾಡಹಗಲೇ ಯುವಕನೊಬ್ಬ ಚಾಕುವಿನಿಂದ ಇರಿದಿದ್ದು ವಿದ್ಯಾರ್ಥಿನಿ ಸಾವಿಗೀಡಾದ ಘಟನೆ ಯಲಹಂಕ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ನಡೆಸಿತ್ತು. ತಕ್ಷಣ ಯುವತಿಯನ್ನು ರಾಜಾನುಕುಂಟೆ ಆಸ್ವತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿ ಆಗದೇ ಯುವತಿ ಸಾವಿಗೀಡಾಗಿದ್ದಳು. ಇಂದು, ಕಾಲೇಜಿನ ಸೆಕ್ಯುರಿಟಿ ವೈಫಲ್ಯದಿಂದ ಈ ಹುಡುಗ ಕಾಲೇಜಿನ ಒಳಗೆ ನುಗ್ಗಿದ್ದ ಎನ್ನುವ ವಿಷಯ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಪ್ರೆಸಿಡೆನ್ಸಿ ಕಾಲೇಜಿನ ಹತ್ಯೆ ಪ್ರಕರಣ: ಆರೋಪಿ ಕ್ಲಾಸ್​ ರೂಂ ತನಕ ಚಾಕು ಹಿಡಿದು ಹೋಗಿದ್ದು ಹೇಗೆ?
ಈಗ ರಾಜಾನುಕುಂಟೆ ಪೊಲೀಸರಿಂದ ತನಿಖೆ ಚುರುಕಾಗಿ ನಡೆಯುತ್ತಿದ್ದು ಮತ್ತೊಂದು ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಆರೋಪಿ ಪವನ್​, ಕಾಲೇಜಿನ ಬಳಿ ಹೋಗಿ ಕ್ಯಾಂಪಸ್ ನಲ್ಲಿ 40 ನಿಮಿಷ ಕಾದಿದ್ದ. ಆ ಬಳಿಕ ಕ್ಲಾಸ್ ರೂಮ್ ಬಳಿಯೇ ಹೋಗಿ ಲಯಸ್ಮಿತಳಾನ್ನ ಹೊರಗೆ ಕರೆತಂದು 15 ನಿಮಿಷ ಮಾತುಕತೆ ಕೂಡ ನಡೆಸಿದ್ದ. ನಂತರ ಕ್ಲಾಸ್ ರೂಮ್ ಒಳಗೆ ಹೋಗಿದ್ದ ಯುವತಿ ಬ್ಯಾಗ್ ತೆಗೆದುಕೊಂಡು ಹೊರ ಬಂದಿದ್ಲು. ಅದಾದ ಮೇಲೆ ಆತನಿಗೆ ಅದೇನಾಯಿತೋ ಗೊತ್ತಿಲ್ಲ. ನಂತರ ಐದು ನಿಮಿಷದ ಅಂತರದಲ್ಲಿ ಯುವತಿಯನ್ನ ಬಿಡದೆ ನೇರವಾಗಿ ಹೃದಯಭಾಗಕ್ಕೆ ಬಲವಾಗಿ ಚಾಕುವಿನಿಂದ ಇರಿದಿದ್ದ. ಐದು ಬಾರಿ ಎದೆಯ ಭಾಗಕ್ಕೆ ಇರಿದಿದ್ದು,ತೀವ್ರ ರಕ್ತಸ್ರಾವ ಆಗಿದೆ.
ಇದನ್ನೂ ಓದಿ:ಹಾಡಹಗಲೇ ಕಾಲೇಜಿನಲ್ಲಿ ಯುವತಿಗೆ ಚಾಕು ಇರಿತ; ಕುರುಡು ಪ್ರೀತಿ ಪ್ರಾಣವನ್ನೂ ತೆಗೆಯುತ್ತೆ..!
ಈ ಹಿಂದೆ ಎದೆಯ ಮೇಲೆ ದೊಡ್ಡದಾಗಿ ಲಯಸ್ಮಿತಾ ಬರೆ ಎಂದು ಹಾರ್ಟ್ ಸಿಂಬಲ್ ಹಾಕಿಸಿ ಅದರೊಳಗೆ ಹೆಸರು ಹಚ್ಚೆ ಹಾಕಿಸಿದ್ದ. ಇಷಟೆಲ್ಲಾ ಪ್ರೀತಿ ತೋರಿಸಿದ್ದ ಯುವಕ, ಇದಾದ ಮೇಲೆ ತಾನೂ ಬದುಕುಳಿಯಬಾರದು ಎಂದು ನಿರ್ಧರಿಸಿದ್ದ. ಪ್ರೇಯಸಿಯೇ ಇಲ್ಲದ ಮೇಲೆ ತಾನೇನು ಬದುಕುವುದು ಎಂದುಕೊಂಡು ಈತ ನೇರವಾಗಿ ಚಾಕುವನ್ನು ಹಚ್ಚೆಯ ಭಾಗಕ್ಕೆ ತಿವಿದುಕೊಂಡಿದ್ದ. ಈ ಸಂದರ್ಭ ಬಲವಾಗಿ ತಿವಿದುಕೊಳ್ಳಲು ಸಾಧ್ಯವಾಗದ ಕಾರಣ, ಕೈ ಕುಯ್ದುಕೊಂಡಿದ್ದ.
ಇನ್ನು ತನಿಖೆ ವೇಳೆ ಕೊಲೆ ಮಾಡುವ ಹಿಂದಿನ ಎರಡು ದಿನ ಇಬ್ಬರ ನಡುವೆ ಪೋನ್ ಕರೆ ಹಾಗೂ ಮಾತು ಇರಲಿಲ್ಲ ಎನ್ನುವ ಮಾಹಿತಿಯೂ ಹೊರ ಬಿದ್ದಿದೆ. ಅದಕ್ಕೂ ಮೊದಲು ಇಬ್ಬರೂ ಹೆಚ್ಚು ಹೊತ್ತು ಪೋನ್ ಮೂಲಕ ಸಂಪರ್ಕದಲ್ಲಿ ಇದ್ದದ್ದು ಪತ್ತೆಯಾಗಿದೆ. ಇದೀಗ ಪೊಲೀಸರು, ಈ ಹರಿತವಾದ ಚಾಕು ಎಲ್ಲಿಂದ ತಂದಿದ್ದ ಎಂಬ ಬಗ್ಗೆ ತನಿಖೆ ಮಾಡುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 5 =
Remember me
