ಬಳ್ಳಾರಿ:ಭಾನುವಾರಕ್ಕೊಮ್ಮೆ ಸರ್ಕಾರದಿಂದ ಘೋಷಿಸಿರುವ ಲಾಕ್ ಡೌನ್ ನಿಯಮ ಉಲ್ಲಂಘಿಸಿ ಹೊರ ಬಂದ ಜನರಿಗೆ ಪೊಲೀಸರು ನಗರದಲ್ಲಿ ಬೆಳಂಬೆಳಗ್ಗೆ ಬೆತ್ತದ ರುಚಿ ತೋರಿಸಿ ಮನೆಗೆ ಕಳುಹಿಸಿದರು.
ಹಲವು ಆಟೋ, ಬೈಕ್, ಟ್ಯಾಕ್ಸಿ ಸೇರಿ ಇನ್ನೀತರೆ ವಾಹನಗಳನ್ನು ಸೀಜ್ ಮಾಡಿ ಠಾಣೆಗೆ ಕರೆದೋಯ್ದರು.
ಕರೊನಾ ನಿಯಂತ್ರಣಕ್ಕೆ ಬಾರದ ಕಾರಣ, ಭಾನುವಾರಕ್ಕೊಮ್ಮೆ ಲಾಕ್ ಡೌನ್ ಘೋಷಿಸಲಾಗಿದೆ.ಇದರ ನಡುವೆಯೂ ಅನಗತ್ಯವಾಗಿ ಹೊರ ಬಂದ ಜನರಿಗೆ ಪೊಲೀಸರು ಚಳ್ಳೆಹಣ್ಣು ತಿನಿಸುತ್ತಿದ್ದಾರೆ.
ಇದನ್ನೂ ಓದಿ:ರೋಗಿಗಳ ಅಲೆದಾಡಿಸಿದರೆ ಕ್ರಿಮಿನಲ್ ಕೇಸ್
ತಾವು ಬರೋದಲ್ದೇ ಸಣ್ಣ ಮಕ್ಕಳನ್ನು ಕರೆತರುತ್ತಿದ್ದಾರೆ.ಮಾಸ್ಕ್ ಕೂಡಾ ಹಾಕದೇ ಮಗುವನ್ನು ಕರೆತಂದ ವ್ಯಕ್ತಿಗೆ ಪೊಲೀಸರು ಅವಾಜ್ ಹಾಕಿದರು.ಮಗುವಿನ ಮುಖ ನೋಡಿ ಎಚ್ಚರಿಕೆ ಕೊಟ್ಟು ಕೊನೆಗೆ ಮನೆಗೆ ಕಳುಹಿಸಿದರು.
ನಗರದ ಪ್ರಮುಖ ವೃತ್ತಗಳಾದ ರಾಯಲ್, ಮೋತಿ, ಎಸ್ಪಿ, ಸುಧಾ ಸರ್ಕಲ್ ಗಳಲ್ಲಿ ಬೆಳಗ್ಗೆ 6ಗಂಟೆಯಿಂದಲೇ ಪೊಲೀಸರು ನಿಯೋಜನೆಗೊಂಡಿದ್ದಾರೆ.ಇದರ ನಡುವೆ ಶುಗರ್ ಟೆಸ್ಟ, ಕಾಯಿ ಪಲ್ಲೆ ಮಾರುವವರು, ಕೆಲ ರೈತರು ಅನಿವಾರ್ಯ ಕಾರಣಕ್ಕೆ ಹೊರ ಬಂದವರಿಗೆ ಸಮಸ್ಯೆಯಾಗುತ್ತಿದೆ.ಇವರು ಕೂಡ ಅನಗತ್ಯವಾಗಿ ಹೊರಗಡೆ ಬಂದಿದ್ದಾರೆ ಎಂದು ತಿಳಿದುಕೊಂಡು ಪೊಲೀಸರು ಲಘು ಲಾಠಿ ಬಿಸಿ ಮನೆಗೆ ಕಳುಹಿಸುತ್ತಿದ್ದಾರೆ.
ಸೋಮವಾರದಿಂದ ಶ್ರಾವಣ ಮಾಸವಿರುವುದರಿಂದ ಬೆಳಂ ಬೆಳಗ್ಗೆ ಅನೇಕರು ಮಟನ್, ಚಿಕನ್ ಖರೀದಿಗೆ ಮುಗಿಬಿದ್ದರು.ಇವರೆಲ್ಲರಿಗೂ ಪೊಲೀಸರು ತಿಳಿಹೇಳಿ ಮನೆಗೆ ಕಳುಹಿಸಿದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one + 18 =
Remember me
