ಬೆಂಗಳೂರು :ಎರಡು ಪುಟ್ಟ ಮಕ್ಕಳನ್ನು ಕಟ್ಟಿಕೊಂಡು ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿರುವ ಅಂಧ ದಂಪತಿಗೆ ನಗರದ ಪೊಲೀಸ್​ ಅಧಿಕಾರಿಯೊಬ್ಬರು ಹಲವು ತಿಂಗಳಿಗೆ ಸಾಕಾಗುವಷ್ಟು ದಿನಸಿ ಪದಾರ್ಥಗಳನ್ನು ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. ಕಾಣದ ವೈರಿ ಕರೊನಾ ವೈರಸ್​ ಮನುಕುಲದ ಮೇಲೆ ಆಕ್ರಮಣ ನಡೆಸಿರುವಾಗ, ಈ ಕಾರ್ಯವು, ಸಮಾಜ ಒಟ್ಟಾಗಿ ಈ ಸಂಕಷ್ಟದಿಂದ ಹೊರಬರಲು ಪ್ರೇರಕವಾಗಿದೆ.
ಬಸವರಾಜು ಮತ್ತು ಚಿನ್ನಮ್ಮ ದಂಪತಿ ಇಬ್ಬರೂ ಅಂಧರು. ಇವರಿಗೆ ಸಾಗರ್(2 ವರ್ಷ) ಮತ್ತು ಸಮರ್ಥ್(6 ತಿಂಗಳು) ಎಂಬ ಇಬ್ಬರು ಗಂಡು ಮಕ್ಕಳು. ಇಂದು ಬೆಳಿಗ್ಗೆ ವಿಜಯನಗರ ಪೊಲೀಸ್​ ಸಬ್​ಇನ್ಸ್​ಪೆಕ್ಟರ್ ಮನು ಅವರು ಠಾಣೆಗೆ ಕರ್ತವ್ಯಕ್ಕೆ ಬಂದಾಗ, ಠಾಣೆಯ ಹೊರಗಡೆ ಅಸಹಾಯಕರಾಗಿ ನಿಂತಿದ್ದರು. ಅವರ ಸಮಸ್ಯೆ ಏನೆಂದು ವಿಚಾರಿಸಿದಾಗ, ಒಂದು ಹೊತ್ತಿನ ತುತ್ತಿಗೂ ಕಷ್ಟಪಡುತ್ತಿರುವ ಪರಿಪಾಟಲು ತಿಳಿದುಬಂದಿದೆ.
ಇದನ್ನೂ ಓದಿ:ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ; ಮಚ್ಚಿನೇಟು ತಿಂದು ರಸ್ತೆ ಬದಿ ರಕ್ತದ ಮಡುವಲ್ಲಿ ಬಿದ್ದಿದ್ದರು ಡಾಕ್ಟರ್!
ಇವರ ಪರಿಸ್ಥಿತಿಗೆ ಸ್ಪಂದಿಸಿರುವ ಪಿಎಸ್​ಐ ಮನು, ಕೆಲವು ತಿಂಗಳುಗಳಿಗೆ ಆಗುವಷ್ಟು ದಿನಸಿ ಪದಾರ್ಥಗಳಾದ 50 ಕೆಜಿ ಅಕ್ಕಿ, 10 ಕೆಜಿ ಬೇಳೆ, 5 ಕೆಜಿ ಗೋಧಿ ಹಿಟ್ಟು, 10 ಲೀಟರ್ ಎಣ್ಣೆ, 12 ಮೈಸೋಪು, 12 ಬಟ್ಟೆಸೋಪು, 10 ಕೆಜಿ ಸಕ್ಕರೆ, 2 ಕೆಜಿ ಟೀಪುಡಿ, 1 ಕೆಜಿ ಹಾಲಿನ ಪೌಡರ್, ಒಂದು ಬಂಡಲ್ ಬಿಸ್ಕೆಟ್, ಮಗುವಿಗೆ ಡೈಪರ್, ಗ್ರೈಪ್ ವಾಟರ್, ಮಕ್ಕಳಿಗೆ ಬೇಕಾದ ಔಷಧಿಗಳು ಎಲ್ಲವನ್ನೂ ಸ್ವಂತ ಹಣದಲ್ಲಿ ಕೊಡಿಸಿದ್ದಾರೆ.
VIDEO | ‘ಚಿಕ್ಕ ಮಕ್ಕಳಿಗೆ ಇಷ್ಟೊಂದು ಕೆಲಸವೇಕೆ, ಮೋದಿ ಸಾಬ್ ?’ ಮುದ್ದು ಹುಡುಗಿಯ ಪ್ರಶ್ನೆ !

ಕರೊನಾ ರೂಪದಲ್ಲಿ ಎರಗಿದ ದುರದೃಷ್ಟ… ಎರಡನೇ ಬಾರಿ ತಬ್ಬಲಿಯಾದ ಅಂಧ ಬಾಲಕ !

ಸೆಂಟ್ರಲ್ ವಿಸ್ತಾ ಅವೆನ್ಯೂ ​​ನಿರ್ಮಾಣ ಕಾರ್ಯಕ್ಕೆ ತಡೆ ಇಲ್ಲ : ದೆಹಲಿ ಹೈಕೋರ್ಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + seven =
Remember me
