ಬೆಂಗಳೂರು:ಕಸಾಯಿಖಾನೆಗೆ ಕೊಂಡೊಯ್ಯುತ್ತಿದ್ದ ಕರುವನ್ನು ರಕ್ಷಿಸಿರುವ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಅದಕ್ಕೆ ‘ಭೀಮ’ ಎಂದು ನಾಮಕರಣ ಮಾಡಿದ್ದಲ್ಲದೆ ಸಾಕುವ ಹೊಣೆಯನ್ನೂ ತಾವೇ ನಿಭಾಯಿಸುತ್ತಿದ್ದಾರೆ.
ಮಾ. 30ರಂದು ಸಬ್ ಇನ್‌ಸ್ಪೆಕ್ಟರ್ ನಾಗರಾಜ್ ಮತ್ತು ಸಿಬ್ಬಂದಿ ಠಾಣೆ ಮುಂಭಾಗ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅದೇ ಮಾರ್ಗವಾಗಿ ಬಂದ ಕಾರೊಂದನ್ನು ತಡೆದಿದ್ದರು. ಪರಿಶೀಲಿಸಿದಾಗ ಪ್ಲಾಸ್ಟಿಕ್ ಚೀಲದಲ್ಲಿ ಕರುವನ್ನು ಕಟ್ಟಿ ಅದರಲ್ಲಿ ಸಾಗಿಸುತ್ತಿದ್ದುದು ಕಂಡುಬಂತು. ಕೆಳಗಿಳಿಸಿ ನೋಡುತ್ತಿದ್ದಾಗ ಚಾಲಕ ಪರಾರಿಯಾಗಿದ್ದ. ಬಿಳಿ ಮತ್ತು ಕಂದು ಬಣ್ಣದ ಎರಡು ದಿನದ ಗಂಡು ಕರುವಿಗೆ ಠಾಣಾಧಿಕಾರಿ ಮಹಮದ್ ರಫಿ ಅವರು ‘ಭೀಮ’ ಎಂದು ನಾಮಕರಣ ಮಾಡಿದ್ದಾರೆ.
ಸದ್ಯ ಕರುವನ್ನು ಠಾಣೆಯ ಆವರಣದಲ್ಲಿ ಪಾಲನೆ ಮಾಡಲಾಗುತ್ತಿದೆ. ಪ್ರತಿನಿತ್ಯ ಹಾಲು, ಬೆಲ್ಲ, ಬೇಳೆ ಕಾಳುಗಳನ್ನು ನೆನಸಿ ಮೇವಿನ ಜತೆಗೆ ನೀಡಲಾಗುತ್ತಿದೆ. ಪ್ರತಿನಿತ್ಯ ಪಶು ವೈದ್ಯರು ಠಾಣೆಗೆ ಬಂದು ಕರುವಿನ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ.
ಲ್ಯಾಬ್‌ನಲ್ಲಿ ರೂಪುಗೊಂಡಿದ್ದಲ್ಲ ಕರೊನಾ, ಪ್ರಾಣಿಗಳಿಂದ ಹಬ್ಬಿರಬಹುದು: ಚೀನಾಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಕ್ಲೀನ್‌ಚಿಟ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
