ತುಮಕೂರು:ಯಾವುದೇ ಒಂದು ಸಾರ್ವಜನಿಕೆ ಸಭೆ, ಸಮಾವೇಶಗಳು ಯಶಸ್ವಿಯಾಗಿ ಮುಕ್ತಾಯವಾಗಬೇಕು ಎಂದಾದರೆ ಅಲ್ಲಿ ಪೊಲೀಸ್ ಸಿಬ್ಬಂದಿ ಕೊಡುಗೆ ಪ್ರಮುಖವಾದುದು. ಪೊಲೀಸರು ಸಮಯದ ಹಂಗಿಲ್ಲದೆ ಭದ್ರತೆ ಒದಗಿಸಿದಾಗ ಮಾತ್ರ ಸಾರ್ವಜನಿಕ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ. ಅದರಲ್ಲೂ ರಾಜಕೀಯ ಸಮಾವೇಶಗಳು ಆಯೋಜನೆಗೊಂಡಿವೆ ಎಂದಾದರೆ ತಯಾರಿಯ ಹಂತದಿಂದಲೇ ಪೊಲೀಸರ ಅಗತ್ಯತೆ ಹೆಚ್ಚಾಗಿ ಇರುತ್ತದೆ. ಈ ಕಾರಣಕ್ಕಾಗಿ ಪಕ್ಕದ ಜಿಲ್ಲೆಗಳಿಂದ ಪೊಲೀಸರು ಕರ್ತವ್ಯಕ್ಕೆ ನಿಯೋಜನೆಗೊಳ್ಳುತ್ತಾರೆ.
ಅಗತ್ಯ ಸಂದರ್ಭದಲ್ಲಿ ಕಾರ್ಯಕ್ರಮದ ಭದ್ರತೆಗೆಂದು ನಿಯೋಜನೆಗೊಂಡು ಬಂದ ಪೊಲೀಸರಿಗೆ ಸರಿಯಾದ ಊಟ, ವಸತಿ ವ್ಯವಸ್ಥೆ ಮಾಡಬೇಕಾದ್ದು ಆಯೋಜಕರ ಕರ್ತವ್ಯ. ಆದರೆ ನಾಳೆ(ಫೆ.6) ತುಮಕೂರಿನಲ್ಲಿ ಎಚ್ಎಎಲ್ ಉದ್ಘಾಟನೆಗೆ ಮೋದಿ ಆಗಮಿಸಲಿರುವ ಕಾರ್ಯಕ್ರಮದ ಭದ್ರತೆಗೆ ನಿಯೋಜನೆಗೊಂಡಿರುವ ಪೊಲೀಸರಿಗೆ ಸರಿಯಾಗಿ ಊಟ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಸುಡು ಬಿಸಿಲಿನಲ್ಲಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಎರಡು ದಿನದಿಂದಲೇ ಭದ್ರತೆಗಾಗಿ ಎಚ್​ಎಎಲ್ ಆವರಣದಲ್ಲಿ ನಿಯೋಜನೆಗೊಂಡಿರುವ ಪೊಲೀಸರು ನಿನ್ನೆ ರಾತ್ರಿಯಿಂದ ಸರಿಯಾದ ಊಟ ಸಿಗದೆ ಪರದಾಡಿದ್ದಾರೆ. ಎಚ್​ಎಎಲ್ ಉದ್ಘಾಟನಾ ಕಾರ್ಯಕ್ರಮದ ಭದ್ರತೆಗಾಗಿ 3 ಸಾವಿರ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. ಇದಕ್ಕಾಗಿ ವಿವಿಧ ಜಿಲ್ಲೆಗಳಿಂದ ಪೊಲೀಸರನ್ನು ಕರೆಸಲಾಗಿದೆ. ಬಿರು ಬಿಸಿಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಕನಿಷ್ಟ ನೀರಿನ ವ್ಯವಸ್ಥೆ ಮಾಡದೆ ಆಯೋಜಕರು ನಿರ್ಲಕ್ಷ್ಯ ತೋರಿದ್ದಾರೆ. ಇದೀಗ ಊಟದ ಪೊಟ್ಟಣ ಪಡೆದುಕೊಳ್ಳಲು ಪೊಲೀಸರು ಮುಗಿಬಿದ್ದಂತಹ ಘಟನೆಯೂ ನಡೆದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + fifteen =
Remember me
