ಬೆಂಗಳೂರು:ನಗರ ಪೊಲೀಸ್ ವಿಭಾಗದಲ್ಲಿ ಮತ್ತೊಬ್ಬ ಡಿಸಿಪಿ ವಿರುದ್ಧ ಕೆಳಹಂತದ ಅಧಿಕಾರಿ, ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ವಿಧಾನಸೌಧ ಭದ್ರತಾ ವಿಭಾಗದ ಸಿಬ್ಬಂದಿಗೇ ಭದ್ರತೆ ಇಲ್ಲದಂತಾಗಿದ್ದು, ದಯಾ ಮರಣ ಕೋರಿ ಡಿಸಿಪಿ ವಿರುದ್ದ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.
ವಿಧಾನಸೌಧ ಭದ್ರತಾ ವಿಭಾಗ ಡಿಸಿಪಿ ಅಶೋಕ ರಾಮಪ್ಪ ಜುಂಜರವಾಡ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಈ ಹಿಂದೆಯೂ ಡಿಸಿಪಿ ವಿರುದ್ಧ ಜೂನ್‌ನಲ್ಲಿ ಅವರ ಕಾರು ಚಾಲಕನೇ ಅಸಮಾಧಾನ ವ್ಯಕ್ತಪಡಿಸಿ ಬಹಿರಂಗ ಪತ್ರ ಬರೆದಿದ್ದರು. ಇದೀಗ ಮತ್ತೆ ದಯಾ ಮರಣ ಕೋರಿ ರಾಷ್ಟ್ರಪತಿಗೆ ಬರೆದಿರುವ ಸಹಿ ಇಲ್ಲದ ಅರ್ಜಿ ಎಲ್ಲೆಡೆ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.
ಸಿವಿಲ್ ಐಪಿಎಸ್ ದರ್ಜೆ ಡಿಸಿಪಿ ಹುದ್ದೆಗೆ ಸಶಸ್ತ್ರ ಮೀಸಲು ಪಡೆ ವಿಭಾಗದಿಂದ ಬಂದಿರುವ ಅಶೋಕ ರಾಮಪ್ಪ, 3 ವರ್ಷದಿಂದ ಒಂದೇ ಕಡೆ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿನ ಸಿವಿಲ್ ಪೊಲೀಸರ ಮೇಲೆ ಪ್ರತಿ ಹಂತದಲ್ಲಿ ಕಿರಿಕಿರಿ ಉಂಟು ಮಾಡಿ ಸಣ್ಣ ವಿಚಾರಕ್ಕೂ ರೂಲ್ ನಂ.7 (ನೋಟಿಸ್) ಕೊಟ್ಟು ಅನಗತ್ಯವಾಗಿ ತೊಂದರೆ ಕೊಡುತ್ತಿದ್ದಾರೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ರೂಲ್ ನಂ.7 ಕೊಟ್ಟಿರುವ ಡಿಸಿಪಿ ಎಂಬ ಕುಖ್ಯಾತಿ ಇವರ ಮೇಲಿದೆ ಎಂದು ಪತ್ರದಲ್ಲಿ ವಿಧಾನಸೌಧ ಭದ್ರತಾ ವಿಭಾಗದ ಪೊಲೀಸರು ನೋವು ಹಂಚಿಕೊಂಡಿದ್ದಾರೆ.
ವಾರದ ರಜೆ ಕೊಡಲು ನಿರಾಕರಿಸುತ್ತಾರೆ. ಕೆಲ ತಿಂಗಳ ಹಿಂದೆ ಪೊಲೀಸ್ ಒಬ್ಬರ ಪತ್ನಿಗೆ ಹೆರಿಗೆ ಸಮಯದಲ್ಲಿ ಮಗು ಅಸುನೀಗಿದ್ದರೂ ರಜೆ ಕೊಡದೆ ಡ್ಯೂಟಿಗೆ ಬರುವಂತೆ ಕಟ್ಟಾಜ್ಞೆ ಮಾಡಿದ್ದರು. ಇತ್ತೀಚೆಗೆ ಕ್ಯಾನ್ಸರ್‌ನಿಂದ ಮೃತಪಟ್ಟ ಇನ್‌ಸ್ಪೆಕ್ಟರ್ ಧನಂಜಯ ಅವರಿಗೂ ಚಿಕಿತ್ಸೆ ಪಡೆಯಲು ಸೂಕ್ತ ಸಮಯದಲ್ಲಿ ಸ್ಪಂದಿಸದೆ ಮಾನಸಿಕ ಹಿಂಸೆಗೆ ಒಳಗಾಗುವಂತೆ ಮಾಡಿದರು.
ಭಾರತೀಯ ಸೇವೆಯಿಂದ ನಿವೃತ್ತಿಯಾಗಿ ಪೊಲೀಸ್ ಸೇವೆಗೆ ಸೇರಿರುವ ಮಾಜಿ ಸೈನಿಕನಿಗೆ ಗೌರವ ಕೊಡದೆ ಕೇವಲ ತಮ್ಮ ಮನೆಯ ಕೆಲಸಕ್ಕೆ ಇಟ್ಟುಕೊಂಡಿದ್ದಾರೆ. ವಿಧಾನಸೌಧದ ಮೇಲೆ ಕೇರಳ ಮೂಲದ ಯುವಕರು ಡ್ರೋಣ್ ಕ್ಯಾಮರಾ ಹಾರಾಟ ಮಾಡಿದಾಗ ಕೇಸ್ ಮುಚ್ಚಿ ಹಾಕಿದರು. ಎಲ್ಲಿ ಠಾಣೆಗೆ ದೂರು ಕೊಟ್ಟರೇ ತನ್ನ ಕೆಲಸಕ್ಕೆ ಕುತ್ತು ಬರುತ್ತದೆ ಎಂದು ಮುಚ್ಚಿದ್ದಾರೆ. ವಿಷಯ ಬಹಿರಂಗ ಮಾಡದಂತೆ ಸಿಬ್ಬಂದಿಗೆ ಎಚ್ಚರಿಕೆ ಕೊಟ್ಟಿದ್ದಾರೆ ಎಂದು 4 ಪುಟಗಳಲ್ಲಿ ಆರೋಪಗಳನ್ನು ಮಾಡಿದ್ದಾರೆ.
ಸೌಲಭ್ಯಗಳಿಗೆ ಕೊಕ್ಕೆ:ಕೋವಿಡ್ ಸಮಯದಲ್ಲಿ ಮಂಜೂರಾಗಿದ್ದ ಕೋವಿಡ್ ಕಿಟ್ ವಿತರಿಸಲಿಲ್ಲ. ಊಟ, ಪ್ರವಾಸ, ರಜೆ ಭತ್ಯೆಗೆ ಸಿಬ್ಬಂದಿ ಅರ್ಜಿ ಸಲ್ಲಿಸಿದರೆ ಸಹಿ ಮಾಡದೆ ನಿರ್ಲಕ್ಷ್ಯ ವಹಿಸುತ್ತಾರೆ. ಸಿವಿಲ್ ಪೊಲೀಸರು ಎಂಬ ತಾರತಮ್ಯ ನೀತಿ ಅನುಸರಿಸುತ್ತಾರೆ ಎಂಬ ಆರೋಪ ಹೊರಿಸಲಾಗಿದೆ.
ಸಾರ್ವಜನಿಕರಿಗೆ ಸ್ಪಂದಿಸದ ಪೊಲೀಸರಿಂದ ತೊಂದರೆ; ಅಧಿಕಾರಿಗಳ ವಿರುದ್ಧ ಗರಂ ಆದ ಸಚಿವರು

ರಸ್ತೆ ಸಂಪರ್ಕ ಇಲ್ಲದ್ದರಿಂದ ರೋಗಿಯನ್ನು 5 ಕಿ.ಮೀ. ದೂರ ಹೊತ್ತುಕೊಂಡು ಆಸ್ಪತ್ರೆಗೆ ಹೋದ ಕುಟುಂಬಸ್ಥರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
