ಬೆಳಗಾವಿ:ಹೊರರಾಜ್ಯದ ಯುವತಿಯರನ್ನು ಕರೆಯಿಸಿ ನಗರದಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ತಡರಾತ್ರಿ ದಾಳಿ ನಡೆಸಿರುವ ಪೊಲೀಸರು ಯುವತಿಯರನ್ನು ರಕ್ಷಿಸಿ, ಇಬ್ಬರು ಆರೋಪಗಳನ್ನು ಬಂಧಿಸಿದ್ದಾರೆ.
ಬೈಲಹೊಂಗಲ ತಾಲೂಕಿನ ವನ್ನೂರಿನ ಮಾರುತಿ ಬಾಳಪ್ಪ ಕಳಗೇರಿ(೩೦) ಹಾಗೂ ಹುಕ್ಕೇರಿ ತಾಲೂಕಿ ಹುಲ್ಲೋಳಿ ಗ್ರಾಮದ ಸಿದ್ದಪ್ಪ ಪುಂಡಲೀಲ ಜೌಗಲಾ(೩೩) ಬಂಧಿತ ಆರೋಪಿಗಳಾಗಿದ್ದು, ಸ್ಥಳೀಯ ಸದಾಶಿವ ನಗರದ ಲಾಸ್ಟ್ ಬಸ್ ಸ್ಟಾಪ್ ಹತ್ತಿರ ಒಂಟಿ ಮಹಿಳೆ ಹೆಸರಲ್ಲಿ ಮನೆ ಮಾಡಿದ್ದ ಆರೋಪಗಳು ಗಿರಾಕಿಗಳನ್ನು ಅಲ್ಲಿಯೇ ಕರೆಯಿಸಿ, ದಂಧೆ ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಎಪಿಎಂಸಿ ಠಾಣೆ ಸಿಪಿಐ ಜಾವೇದ್ ಮುಶಾಪುರಿ ಅವರು ತಮ್ಮ ತಂಡದೊಂದಿಗೆ ತಡ ರಾತ್ರಿ ದಾಳಿ ನಡೆಸಿ, ಯುವತಿಯರನ್ನು ರಕ್ಷಿಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತರನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
ಬಂಧಿತರಿಂದ ದಂಧೆಗೆ ಬಳಸುತ್ತಿದ್ದ ಎರಡು ಮೊಬೈಲ್, ಕಾರು (ಕೆಎ-೨೨, ಎನ್-೫೫೬೮), ೧೦ ಸಾವಿರ ನಗದು ಸೇರಿದಂತೆ ಅನೈತಿಕ‌ ಚಟುವಟಿಕಗೆ ಬಳಸುತ್ತಿದ್ದ ವಸ್ತುಗಳನ್ನು ಜಪ್ತಿಪಡಿಸಿಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − fifteen =
Remember me
