ಬೆಂಗಳೂರು:ಬೆಂಗಳೂರಿಗೆ ಅಂತಾರಾಷ್ಟ್ರೀಯ ಡ್ರಗ್ಸ್ ಜಾಲದ ನಂಟಿರುವುದು ಬಹಿರಂಗವಾಗುತ್ತಿದ್ದಂತೆ ಎಚ್ಚೆತ್ತು ಕೊಂಡಿರುವ ಸರ್ಕಾರ ಹಾಗೂ ಪೊಲೀಸ್ ಇಲಾಖೆ, ಡ್ರಗ್ಸ್ ಮಾಫಿಯಾ ನಿಯಂತ್ರಣಕ್ಕೆ ಹೊಸ ಸೂತ್ರ ಅನುಸರಿಸಲು ಮುಂದಾಗಿದೆ. ಕೇಂದ್ರದ ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್​ಸಿಬಿ) ಜತೆಗೆ ವಿವರ ವಿನಿಮಯ ಮಾಡಿಕೊಂಡು ಕಾರ್ಯಾಚರಣೆ ನಡೆಸುವುದರ ಜತೆಗೆ ಹಳೇ ಡ್ರಗ್ಸ್ ಪೆಡ್ಲರ್​ಗಳನ್ನು ವಶಕ್ಕೆ ಪಡೆದು ಬೆಂಡೆತ್ತುವಂತೆ ಮಾರ್ಗಸೂಚಿ ಹೊರಡಿಸಲಾಗಿದೆ.
ರಾಜ್ಯದಲ್ಲಿ ಡ್ರಗ್ಸ್ ದಂಧೆಯನ್ನು ಸಂಪೂರ್ಣ ಮಟ್ಟ ಹಾಕಲು (ಜೀರೋ ಟಾಲರೆನ್ಸ್) ಕೆಲ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಎಲ್ಲ ನಗರ ಪೊಲೀಸ್ ಆಯುಕ್ತರಿಗೆ, ಎಲ್ಲ ವಲಯ ಐಜಿಪಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ (ಎಸ್​ಪಿ) ಆದೇಶ ಹೊರಡಿಸಲಾಗಿದೆ. ಗುಪ್ತದಳದಿಂದ ಡ್ರಗ್ ಪೆಡ್ಲರ್ಸ್​ಗಳ ಮಾಹಿತಿ ಪಡೆದು ಎನ್​ಡಿಪಿಎಸ್ ಕಾಯ್ದೆಯಡಿ ಗರಿಷ್ಟ ಕೇಸ್​ಗಳನ್ನು ದಾಖಲಿಸಲು ಸೂಚಿಸಲಾಗಿದೆ.
ಕೊಕೇನ್ ವ್ಯಸನಿಗಳು ದುಪ್ಪಟ್ಟು!:ಗಾಂಜಾ, ಬ್ರೌನ್ ಶುಗರ್, ಅಫೀಮು ಸೇರಿ ಇತರ ಡ್ರಗ್ಸ್ ಗಳಿಗಿಂತ ಸದ್ಯ ಕೊಕೇನ್​ಗೆ ಎಲ್ಲಿಲ್ಲದ ಬೇಡಿಕೆ ಇದೆ. ಕಳೆದ 5 ವರ್ಷಗಳಲ್ಲಿ ಕೊಕೇನ್ ವ್ಯಸನಿಗಳ ಸಂಖ್ಯೆ ದುಪ್ಪಟ್ಟಾಗಿದ್ದು, ರಾಜ್ಯ ರಾಜಧಾನಿಯಲ್ಲೇ ಹೆಚ್ಚಿನ ವಹಿವಾಟು ನಡೆಯುತ್ತಿದೆ ಎಂಬ ಸ್ಪೋಟಕ ಸಂಗತಿ ಬಹಿರಂಗಗೊಂಡಿದೆ. ಸ್ಯಾಂಡಲ್​ವುಡ್ ನಟ-ನಟಿಯರು ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿರುವುದು ಭಾರಿ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಇದೀಗ ಕೊಕೇನ್ ಸಾಗಾಣೆಯಲ್ಲಿ ಬೆಂಗಳೂರು ದಕ್ಷಿಣ ಏಷ್ಯಾದಲ್ಲೇ ಮುಂಚೂಣಿಯಲ್ಲಿರುವ ಸಂಗತಿ ಹೊರ ಬಿದ್ದಿದೆ. ಬೆಂಗಳೂರಿನಲ್ಲಿ ಕೊಕೇನ್ ದಾಸರು ಹೆಚ್ಚಿರುವುದರಿಂದ ಇದಕ್ಕೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಅಲ್ಲದೆ, ದೇಶದ ವಿವಿಧ ಭಾಗಗಳಿಂದ ಬೆಂಗಳೂರಿಗೆ ಕೊಕೇನ್ ಸರಬರಾಜು ಸುಲಭವಾದ್ದರಿಂದ ಪ್ರತಿ ವರ್ಷ ವಿದೇಶಗಳಿಂದ ಕೋಟ್ಯಂತರ ರೂ. ಮೌಲ್ಯದ ಕೊಕೇನ್ ರಾಜಧಾನಿಗೆ ಪೂರೈಕೆ ಆಗುತ್ತಿದೆ. ಒಂದು ನ್​ಗೆ ಗ್ರಾಂಗೆ 6 ಸಾವಿರ ರೂ. ನಿಂದ 12 ಸಾವಿರ ರೂ.ಯಿದ್ದು, ಗುಣಮಟ್ಟದ ಕೊಕ್ಕೇನ್​ಗೆ ಇನ್ನೂ ಹೆಚ್ಚಿನ ಬೆಲೆ ತೆತ್ತು ಖರೀದಿಸುವ ವ್ಯಸನಿಗಳೂ ಬೆಂಗಳೂರಿನಲ್ಲಿದ್ದಾರೆ ಎಂಬುದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಸುಶಾಂತ್ ಕೇಸಲ್ಲೂ ಬೆಂಗ್ಳೂರು ನಂಟು:ರಾಷ್ಟ್ರಮಟ್ಟದಲ್ಲಿ ಮಾನ ಹರಾಜಾಕಿರುವ ಸ್ಯಾಂಡಲ್​ವುಡ್ ಡ್ರಗ್ಸ್ ಮಾಫಿಯಾದ ನಂಟು ಬಾಲಿವುಡ್​ವರೆಗೂ ವಿಸ್ತರಿಸಿರುವುದು ಎನ್​ಸಿಬಿ ತನಿಖೆಯಲ್ಲಿ ಬಯಲಾಗಿದೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಡ್ರಗ್ ಪೆಡ್ಲರ್​ಗಳ ಜತೆಗೆ ಬೆಂಗಳೂರಿನ ಮಹಾಲಕ್ಷ್ಮಿಪುರ ವಾರ್ಡ್ ಕಾಪೋರೇಟರ್ ಕೇಶವಮೂರ್ತಿ ಪುತ್ರ ಯಶಸ್ ಹೆಸರು ಕೇಳಿಬಂದಿದ್ದು, ವಿಚಾರಣೆಗೆ ಬರುವಂತೆ ನೋಟಿಸ್ ಕೊಟ್ಟಿದೆ. ಮತ್ತಿನ ಮಾಫಿಯಾ ಬಗೆದಷ್ಟೂ ಆಳಕ್ಕೆ ಹೋಗುತ್ತಿದೆ.
ಇದೇ ವಾರ ಸಾರ್ವತ್ರಿಕ ಬಳಕೆಗೆ ಸಿಗಲಿದೆ ರಷ್ಯಾ ಲಸಿಕೆ; ಸ್ಪುಟ್ನಿಕ್​-ವಿಗೆ ಸಿಕ್ತು ಆರೋಗ್ಯ ಇಲಾಖೆ ಸಮ್ಮತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
