ಬೆಂಗಳೂರು:ರಾಜ್ಯ ಪೊಲೀಸ್​ ನೇಮಕಾತಿ ಪರೀಕ್ಷೆ ಹಿನ್ನೆಲೆ ರಾಜ್ಯದೊಳಗೆ ಸಂಚರಿಸುವ 22 ಪ್ರಮುಖ ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಜನರಲ್​ ಬೋಗಿ ಸೇರ್ಪಡೆಗೊಳಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.
ಇತ್ತೀಚೆಗೆ ಪೊಲೀಸ್​ ಪರೀಕ್ಷೆ ಸಂದರ್ಭದಲ್ಲಿ ರೈಲುಗಳಲ್ಲಿ ಉಂಟಾಗುತ್ತಿರುವ ಪ್ರಯಾಣಿಕ ದಟ್ಟಣೆ ನಿಯಂತ್ರಿಸಲು, ಫೆ.23 ರಿಂದ ಫೆ.26ರ ವರೆಗೂ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.
ಕೆಲ ರೈಲುಗಳ ನಿಯಂತ್ರಣ
ಮೈಸೂರು ವಿಭಾಗದ ದೇವರಗುಡ್ಡ ಮತ್ತು ಬ್ಯಾಡಗಿ ನಿಲ್ದಾಣಗಳ ನಡುವೆ ಅಗತ್ಯ ಸುರಕ್ಷತಾ ಸಂಬಂಧಿತ ನಿರ್ವಹಣಾ ಕಾಮಗಾರಿಯ ಸಲುವಾಗಿ, 2 ರೈಲುಗಳನ್ನು ಮಾರ್ಗ ಮಧ್ಯದಲ್ಲಿ ನಿಯಂತ್ರಿಸಲಾಗುತ್ತಿದೆ. ಫೆ.22ರಂದು 16541 ಯಶವಂತಪುರ&ಪಂಢರಪುರ(16541) ರೈಲು 60 ನಿಮಿಷ, ಫೆ.20 ರಿಂದ ಫೆ.28 ವರೆಗೆ ಮೈಸೂರು&ಪಂಢರಪುರ (16535) ಎಕ್ಸ್​ಪ್ರೆಸ್​ ರೈಲನ್ನು ಮಾರ್ಗ ಮಧ್ಯೆ 20 ನಿಮಿಷ ನಿಯಂತ್ರಿಸಲಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + fourteen =
Remember me
