ಚಾಮರಾಜನಗರ:ಪೆಟ್ರೋಲ್ ಟ್ಯಾಂಕ್ ಮೇಲೆ ಪ್ರೇಯಸಿಯನ್ನು ಕೂರಿಸಿಕೊಂಡು ಬೈಕ್ ಚಲಾಯಿಸುತ್ತ ರೊಮ್ಯಾನ್ಸ್ ಮಾಡಿದ್ದ ಪ್ರೇಮಿಯ ಮೇಲೆ ಮೂರು ಕೇಸ್​ಗಳು ಬಿದ್ದಿವೆ. ಚಾಮರಾಜನಗರ ಸಂಚಾರ ಠಾಣೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಯುವಕನೊಬ್ಬ ಬೈಕ್​ ಟ್ಯಾಂಕ್​ ಮೇಲೆ ಯುವತಿಯನ್ನು ಕೂರಿಸಿಕೊಂಡು ಬೈಕ್ ಚಲಾಯಿಸುತ್ತಲೇ ರೊಮ್ಯಾನ್ಸ್ ಮಾಡಿದ್ದ ವಿಡಿಯೋ ಇಂದು ವೈರಲ್​ ಆಗಿತ್ತು. ಹಾಡಹಗಲೇ ವಾಹನಗಳು ಸಂಚರಿಸುತ್ತಿದ್ದ ರಸ್ತೆಯಲ್ಲಿ ಅಪಾಯಕಾರಿಯಾಗಿ ಹಾಗೂ ಅಸಭ್ಯವಾಗಿ ನಡೆದುಕೊಂಡಿದ್ದಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಚಾಮರಾಜನಗರ ಸಂಚಾರ ಠಾಣೆ ಪೊಲೀಸರು ಮೋಟಾರು ನಿಯಮ ಕಾಯ್ದೆಯಡಿ ಹೆಚ್.ಡಿ.ಕೋಟೆಯ ಶಿವಪುರ ಗ್ರಾಮದ ಸ್ವಾಮಿ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈತ ಯುವತಿ ಜೊತೆಗೆ ಜಾಲಿ ರೈಡ್ ಬಂದಿದ್ದಾಗಿ ಒಪ್ಪಿಕೊಂಡಿದ್ದು, ಅಜಾಗರೂಕತೆಯ ಚಾಲನೆ, ಹೆಲ್ಮೆಟ್​ ರಹಿತ ಚಾಲನೆ ಹಾಗೂ ಅಪಾಯಕಾರಿ ಚಾಲನೆ ಎಂಬುದಾಗಿ ಮೂರು ಕೇಸ್​ಗಳನ್ನು ದಾಖಲಿಸಿದ್ದಾರೆ.
ಸ್ನೇಹಿತನ ಶವ ಊರಿಗೆ ಕೊಂಡೊಯ್ಯುತ್ತಿದ್ದ ಮೂವರು ಮಾರ್ಗ ಮಧ್ಯೆ ಸ್ಥಳದಲ್ಲೇ ಸಾವು!
Sign in to your account
Please enter an answer in digits:four × 3 =
Remember me
