ಶಿವಮೊಗ್ಗ:ಆತ್ಮಹತ್ಯೆ ಮಾಡಿಕೊಳ್ಳಲು ವಿಶ್ವವಿಖ್ಯಾತ ಜೋಗಕ್ಕೆ ತೆರಳಿದ್ದ ವ್ಯಕ್ತಿ, ಇದೀಗ ವಾಪಸ್​ ಆಗಿದ್ದಾರೆ. ಅದಕ್ಕೆ ಕಾರಣ ಪೊಲೀಸರು..!
ಬೆಂಗಳೂರು ಇಂದಿರಾನಗರದ ಚೇತನ್​ ಕುಮಾರ್​(34) ರಾಣಿ ಫಾಲ್ಸ್​ನಿಂದ ಕೆಳಗೆ ಬೀಳಲು ಯತ್ನಿಸುತ್ತಿದ್ದ. ಪೊಲೀಸರ ಸಮಯ ಪ್ರಜ್ಞೆಯಿಂದ‌ ಇದೀಗ ಆತನ ಜೀವ ಉಳಿದಿದೆ.
ಎಂಬಿಎ ಪದವೀಧರನಾದ ಚೇತನ್​​ ಕುಮಾರ್ ಆತ್ಮಹತ್ಯೆ ಮಾಡಿಕೊಳ್ಳಲೆಂದು ಜೋಗಕ್ಕೆ ಹೋಗಿ, ರಾಣಿ ಫಾಲ್ಸ್​​ನ ಮೇಲ್ಭಾಗಕ್ಕೆ ತೆರಳಿ ಕುಳಿತಿದ್ದರು.ಇದನ್ನೂ ಓದಿ:ಡಿ.ಜೆ.ಹಳ್ಳಿ ಗಲಭೆ: ಆರೋಪಿ ನವೀನ್​​ ಜಾಮೀನು ಅರ್ಜಿ ವಜಾ
ಆತನನ್ನು ನೋಡಿದ ಜೋಗ ಪೊಲೀಸರು, ಸಾಗರದ ಹಿರಿಯ ಪೊಲೀಸ್​ ಅಧಿಕಾರಿಗಳಿಗೆ, ಅಗ್ನಿಶಾಮಕದಳದವರಿಗೆ ಫೋನ್​ ಮಾಡಿ ವಿಷಯ ತಿಳಿಸಿದ್ದರು. ಹಾಗೇ, ಅವರು ಬರುವವರೆಗೆ ಅಲ್ಲಿಯೇ ಇದ್ದು ಕಾಯುತ್ತಿದ್ದರು. ನಂತರ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಸೇರಿ ಚೇತನ್​ ಅವರ ಮನವೊಲಿಸಿ, ವಾಪಸ್​ ಕರೆತಂದಿದ್ದಾರೆ.ಚೇತನ್​ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಆತ್ಮಹತ್ಯೆಗೆ ಮುಂದಾಗಿದ್ದ ಎನ್ನಲಾಗಿದೆ. ಜೋಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)
ಈ ಮಹಿಳೆಗೆ ಇಲ್ಲ ಕರೊನಾ ಭಯ…ಕಾರಣ ಬಾಯ್​ಫ್ರೆಂಡ್​ ವೀರ್ಯ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
