ಬೆಂಗಳೂರು:ಡ್ರೋನ್ ಪ್ರತಾಪ್‌ನನ್ನು ಪೊಲೀಸರು ಇವತ್ತು ಬೆಳಗ್ಗೆಯಿಂದಲೂ ಹುಡುಕುತ್ತಿದ್ದಾರೆ. ಆದರೆ ಅದಕ್ಕೆ ಆತ ಡ್ರೋನ್ ತಯಾರಿಕೆ ವಿಷಯದಲ್ಲಿ ಸುಳ್ಳು ಹೇಳಿದ್ದು ಕಾರಣವಲ್ಲ. ಡ್ರೋನ್ ಕುರಿತು ಸಮಜಾಯಿಷಿ ನೀಡುವುದಕ್ಕಾಗಿ ಕ್ವಾರಂಟೈನ್ ಉಲ್ಲಂಘಿಸಿ ಟಿವಿ ಚಾನೆಲ್‌ಗೆ ಹೋಗಿದ್ದು ಕಾರಣ.
ಪ್ರತಾಪ್ ಫೋನ್ ಸದ್ಯ ಸ್ವಿಚ್ ಆಫ್ ಆಗಿದೆ. ಕಡೆಯದಾಗಿ ಜ್ಞಾನಭಾರತಿ ವಿವಿ ಕ್ಯಾಂಪಸ್‌ನಲ್ಲಿದ್ದ ಬಗ್ಗೆ ಆತನ ಫೋನ್ ಲೊಕೇಷನ್ ತಿಳಿಸುತ್ತಿದೆ. ಆತನ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆತನ ಕರೆಗಳ ಮಾಹಿತಿ ಇದ್ದು, ಅದರಲ್ಲಿರುವ ಪ್ರತಿಯೊಬ್ಬರನ್ನೂ ಸಂಪರ್ಕಿಸಿ ಮಾಹಿತಿ ಪಡೆಯಲಾಗುತ್ತಿದೆ. ಆತ ಪತ್ತೆಯಾದರೆ ಮೊದಲು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗುವುದು. ನಂತರ ಕೋರ್ಟ್ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ:ಡ್ರೋನ್​ ಪ್ರತಾಪ್​ ನಮ್ಮನ್ನೆಲ್ಲ ನಂಬಿಸಿ ಮೋಸ ಮಾಡಿದ್ದಾನೆ; ಮಂಡ್ಯ-ಬೆಂಗಳೂರಿನಲ್ಲಿ ದೂರು ದಾಖಲು
ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಖಾಸಗಿ ವಾಹಿನಿ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಡ್ರೋನ್ ಪ್ರತಾಪ್ ವಿರುದ್ಧ ತಲಘಟ್ಟಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಎಫ್‌ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ಪ್ರತಾಪ್‌ಗೆ ಬಂಧನ ಭೀತಿ ಎದುರಾಗಿದ್ದು, ಸಂಪರ್ಕಕ್ಕೆ ಸಿಗದೇ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಇದನ್ನೂ ಓದಿ:ಜರ್ಮನಿ, ಜಪಾನ್‌ನಿಂದಲೇ ಬಂದಿದೆ ನೋಡಿ ಡ್ರೋನ್‌ ಪ್ರತಾಪ್‌ ಮಾಹಿತಿ…
ಆಗಿದ್ದೇನು?:ಪ್ರತಾಪ್ ಜು. 15ರಂದು ಹೈದ್ರಾಬಾದ್‌ನಿಂದ ರಾಜ್ಯಕ್ಕೆ ಹಿಂತಿರುಗಿದ್ದರು. ಹೊರರಾಜ್ಯದಿಂದ ರಾಜ್ಯಕ್ಕೆ ಪ್ರಯಾಣ ಬೆಳೆಸಿದ್ದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಮಾರ್ಗಸೂಚಿ ಅನ್ವಯ ಕೈಗೆ ಮೊಹರು ಹಾಕಿ ಹೋಂ ಕ್ವಾರಂಟೈನ್‌ಗೆ ಸೂಚಿಸಲಾಗಿತ್ತು. ಆದರೆ, ನಿಯಮವನ್ನು ಉಲ್ಲಂಘಿಸಿ ಮರುದಿನವೇ (ಜು.16) ಖಾಸಗಿ ಸುದ್ದಿ ವಾಹಿನಿಗಳ ಚರ್ಚೆಯಲ್ಲಿ ಭಾಗವಹಿಸಿದ್ದರು. ಸುದ್ದಿ ವಾಹಿನಿಯ ಚರ್ಚೆಯಲ್ಲಿದ್ದ ವೇಳೆಯೇ ತಾನು ವಾಹಿನಿಗೆ ಬರಲು ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿರುವುದಾಗಿ ಹೇಳಿಕೊಂಡಿದ್ದರು. ಶನಿವಾರ ಬೆಳಗ್ಗೆ 10 ಗಂಟೆಯಲ್ಲಿ ಅಂಜನಾಪುರದಲ್ಲಿ ಪ್ರತಾಪ್ ನೆಲೆಸಿರುವ ಅಪಾರ್ಟ್‌ಮೆಂಟ್‌ಗೆ ಬಿಬಿಎಂಪಿ ಹೋಂ ಕ್ವಾರಂಟೈನ್ ಸಿಟಿ ಸ್ಕ್ವಾಡ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದರು. ಈ ವೇಳೆಯೂ ಪ್ರತಾಪ್ ಮನೆಯಲ್ಲಿರಲಿಲ್ಲ ಎಂದು ವೈದ್ಯ ಪ್ರಯಾಗ್ ಅವರು ತಿಳಿಸಿದ್ದಾರೆ. ಪ್ರತಾಪ್ ಅವರನ್ನು ಪೊಲೀಸರು ತೀವ್ರವಾಗಿ ಶೋಧಿಸುತ್ತಿದ್ದು, ಸದ್ಯದಲ್ಲೇ ವಶಕ್ಕೆ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೊವಿಡ್​-19 ರೋಗಿಯ ಮನೆಗೆ ನುಗ್ಗಿ ಮಟನ್​ ತಯಾರಿಸಿ ಊಟ ಮಾಡಿ…ಹಣ ಕದ್ದ ವಿಚಿತ್ರ ಕಳ್ಳರು…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 2 =
Remember me
