ಚಿಕ್ಕಬಳ್ಳಾಪುರ:ಹ್ಯಾಕರ್ ಶ್ರೀಕಿ ಬಂಧನ ಆಗುವವರೆಗೂ ಇಷ್ಟು ಬುದ್ಧಿವಂತರಿದ್ದಾರೆ ಎನ್ನುವುದೇ ಗೊತ್ತಿರಲಿಲ್ಲ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ. ಇಂದು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ್ದ ವೇಳೆ ಅವರು ಈ ಮಾತನ್ನು ಹೇಳಿದರು.
ಇದನ್ನೂ ಓದಿ:ಎರಡೂ ಡೋಸ್ ಲಸಿಕೆ ಪಡೆದಿದ್ರೂ ಇಲ್ಲಿದೆ ಒಂದು ಆತಂಕಕಾರಿ ವಿಷಯ!
ಇಲಾಖೆಯಲ್ಲಿ ಬುದ್ಧಿವಂತಿಕೆಯಿಂದ ಪ್ರಕರಣಗಳನ್ನು ಭೇದಿಸಿದ ಅಧಿಕಾರಿ-ಸಿಬ್ಬಂದಿಗೆ ಪ್ರಶಂಸಾಪತ್ರ ವಿತರಿಸುತ್ತ ಅವರು ಇಂಥದ್ದೊಂದು ಅನಿಸಿಕೆಯನ್ನು ಹಂಚಿಕೊಂಡರು. ಬಿಟ್ ಕಾಯಿನ್ ಧಂದೆಯ ಪ್ರಮುಖ ಆರೋಪಿ ಹ್ಯಾಕರ್ ಶ್ರೀಕಿಯ ಬಂಧನ ಆಗುವವರೆಗೂ ಇಷ್ಟು ಬುದ್ಧಿವಂತರಿದ್ದಾರೆ ಎನ್ನುವುದೇ ಗೊತ್ತಿರಲಿಲ್ಲ ಎಂದ ಗೃಹಸಚಿವರು, ನಮ್ಮ ಪೊಲೀಸರು ಅದಕ್ಕಿಂತಲೂ ಬುದ್ಧಿವಂತರಾಗಿರಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಇದನ್ನೂ ಓದಿ:ಹೆಣ್ಣೂರಲ್ಲೇ ಹೆಣ್ಣಿಗೆ ಅನ್ಯಾಯ!; ದೂರು ನೀಡಲು ಹೋದರೆ ಲಂಚ ಕೇಳಿದ, ಮಂಚಕ್ಕೂ ಕರೆದ ಪೊಲೀಸ್ ಇನ್​ಸ್ಪೆಕ್ಟರ್​…
ಪೊಲೀಸರು ಕೊಲೆ ಸುಲಿಗೆ ದರೋಡೆ ಕಳ್ಳತನ ಪ್ರಕರಣಗಳನ್ನು ಭೇದಿಸುವುದರಿಂದ ಹಿಡಿದು ವಿನೂತನ ತಂತ್ರಜ್ಞಾನ ಅಳವಡಿಸಿಕೊಳ್ಳುವುದರಲ್ಲಿ ಮುಂದೆ ಇದ್ದಾರೆ ಎಂದು ಗೃಹ ಸಚಿವರು ಚಿಕ್ಕಬಳ್ಳಾಪುರ ಜಿಲ್ಲೆಯ ಪೊಲೀಸರಿಗೆ ಪ್ರಶಂಶಾಪತ್ರಗಳನ್ನು ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಮಾತ್ರವಲ್ಲ ಹ್ಯಾಕರ್ ಶ್ರೀಕಿಗಿಂತಲೂ ಬುದ್ಧಿವಂತರಾದ ಪೊಲೀಸರು ನಮ್ಮ ಇಲಾಖೆಯಲ್ಲಿ ಇರಬೇಕು, ಪೊಲೀಸರು ಅಂಥವರಿಗಿಂತ ಬುದ್ಧಿವಂತರಾಗಿರಬೇಕು ಎಂದು ಬಯಸಿದರು.
‘ಇವತ್ತು ಹುಟ್ಟಿದ ದಿನ, ಬೇಡ..’ ಎಂದರೂ ಕೇಳದೆ ಮನೆಯಿಂದ ಹೋದಳು: ಜನ್ಮದಿನವೇ ಸಾವಿನ ದಿನವಾಯ್ತು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − eleven =
Remember me
