ತುಮಕೂರು:ಮಾಜಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್​ ಮೇಲೆ ಕೊರಟಗೆರೆ ಕ್ಷೇತ್ರದಲ್ಲಿ ಕಲ್ಲು ತೂರಾಟ ನಡೆದ ಪ್ರಕರಣ ಇದೀಗ ಸಾಕಷ್ಟು ಅನುಮಾಗಳಿಗೆ ಎಡೆಮಾಡಿಕೊಟ್ಟಿದೆ. ಹೀಗಾಗಿ ಪೊಲೀಸರು ಎರಡು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ವಿರೋಧಿಗಳಿಗೆ ಮಾಜಿ ಡಿಸಿಎಂ ಟಾರ್ಗೆಟ್ ಆದ್ರಾ? ಅನ್ನೋ ಪ್ರಶ್ನೆ ಉದ್ಭವವಾಗಿದೆ. ಪರಂ ಅವರಿಗೆ ಒಂದಲ್ಲ ಎರಡು ಬಾರಿ ಕಲ್ಲು ಎಸೆತವಾಗಿದೆ. ಮೊದಲ ಬಾರಿ ನಡೆದ ದಾಳಿಯಲ್ಲಿ ಅದೃಷ್ಟವಶಾತ್ ಪರಂ ಪಾರಾಗಿದ್ದರು. ಎರಡನೇ ಬಾರಿ ನಡೆದ ದಾಳಿಯಲ್ಲಿ‌‌ ಪರಂಗೆ ಕಲ್ಲೇಟು ಬಿದ್ದಿದೆ. ಪರಂ ಅವರು ಗೆಲ್ಲುವುದು ಖಚಿತ, ಹೀಗಾಗಿ ಕಲ್ಲು ಎಸೆತದಲ್ಲಿ ವಿರೋಧಿಗಳ ಕೈವಾಡ ಇದೆ ಎಂದು ಪರಂ ಆಪ್ತರು ಆರೋಪ ಮಾಡಿದ್ದಾರೆ.
ಇದನ್ನೂ ಓದಿ:ವರಿಷ್ಠರಿಗೆ ವ್ಯಕ್ತಿಗಿಂತ ಹಣವೇ ಮುಖ್ಯ: ಜೆಡಿಎಸ್ ಬಂಡಾಯ ಅಭ್ಯರ್ಥಿ ಎಂ.ಜೆ.ಚಿಕ್ಕಣ್ಣ ವಾಗ್ದಾಳಿ
ಇಷ್ಟೇ ಅಲ್ಲದೆ, ಪರಂ ಆಪ್ತರು ಪೊಲೀಸ್ ಇಲಾಖೆ ಮೇಲೆ‌ ಗೂಬೆ ಕೂರಿಸಿದ್ದಾರೆ. ಒಬ್ಬ ಮಾಜಿ ಡಿಸಿಎಂಗೆ ಭದ್ರತೆಯಿಲ್ಲ ಅಂದರೆ, ನಮ್ಮಂತಗ ಸಾಮಾನ್ಯರ ಗತಿ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಆರೋಪಿಗಳನ್ನು ಕೂಡಲೇ ಬಂಧಿಸಿ, ಇಲ್ಲದಿದ್ದರೆ, ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪರಂಗೆ ತಗುಲಿದ ಕಲ್ಲಿನ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಹೂ ಚೆಲ್ಲಲು ತಂದಿದ್ದ ಜೆಸಿಬಿಯಲ್ಲೇ ಬಂತಾ ಕಲ್ಲು? ಇಲ್ಲ ವಿರೋಧಿಗಳು ಏನಾದ್ರು ಹೂ ಹಾಕುವುದನ್ನೇ ಕಾದು ಪರಂ ಕಡೆಗೆ ಕಲ್ಲು ಬಿಸಿದ್ರಾ? ಎಂಬ ಎರಡು ಆಯಾಮದಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ಬಾರಿ ಕೊರಟಗೆರೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ತೀವ್ರ ಪೈಪೋಟಿ ಇದೆ. ಬಿಜೆಪಿ ಹಾಗೂ ಜೆಡಿಎಸ್​ನವರೇ ಈ ಕೃತ್ಯ ಎಸಗಿದ್ದಾರೆಂದು ಪರಂ‌ ಬೆಂಬಲಿಗರು ಆರೋಪ ಮಾಡಿದ್ದಾರೆ. ಪರಂಗೆ ತಗುಲಿದ ಕಲ್ಲನ್ನೇ ಹುಡುಕಿ ತಂದು ಪೊಲೀಸರಿಗೆ ನೀಡಿದ್ದಾರೆ.
ಇದನ್ನೂ ಓದಿ:ದಳಕ್ಕೆ ಕಾಡುತ್ತಿದೆ ಒಳೇಟಿನ ಆತಂಕ: ನುಂಗಲಾರದ ತುತ್ತಾದ ವಿಜಯಾನಂದ ಸ್ಪರ್ಧೆ
ಇನ್ನು ಚುನಾವಣಾ ಹೊತ್ತಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ರಾಜಕೀಯದಾಟ ನಡೆಯುತ್ತಿದೆಯಾ ಎಂಬ ಅನುಮಾನವೂ ಇದೆ. ಮತದಾರರನ್ನ ತಮ್ಮತ್ತ ಸೆಳೆಯಲು ಈ ರೀತಿಯಾಗಿ ಕಾಂಗ್ರೆಸ್​ನವರೇ ಮಾಡಿದ್ದಾರೆ ಎಂಬ ಗುಮಾನಿ ಕ್ಷೇತ್ರದಲ್ಲಿ ಹರಿದಾಡುತ್ತಿದೆ. ಆದರೆ, ಪೊಲೀಸ್ ತನಿಖೆಯಿಂದಷ್ಟೇ ಸತ್ಯಾಸತ್ಯಾತೆ ಹೊರಬರಬೇಕಿದೆ.(ದಿಗ್ವಿಜಯ ನ್ಯೂಸ್​)
ದಾಸರಹಳ್ಳಿಯಲ್ಲಿ ಜೆಡಿಎಸ್​ ಕಾರ್ಯಕರ್ತರು ಕಾಂಗ್ರೆಸ್​ಗೆ

ಸುಡಾನ್​ನಿಂದ ಬಂದವರಲ್ಲಿ ಹಳದಿ ಜ್ವರ? ಲಸಿಕೆ ಪಡೆಯದೇ ಬಂದ 45 ಜನರ ಕ್ವಾರಂಟೈನ್

ಪ್ಲಾಸ್ಟಿಕ್​​ ಸರ್ಜರಿ ಬಳಿಕ ಹೃದಯಾಘಾತದಿಂದ ಪ್ರಾಣ ಬಿಟ್ಟ ನಟಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + four =
Remember me
