ವಿಜಯಪುರ:ದೆಹಲಿಯಲ್ಲಿ ನಡೆದಿದ್ದ ತಬ್ಲಿಘಿ ಜಮಾತ್​ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದವರಿಂದ ದೇಶದಲ್ಲಿ ಅದೆಷ್ಟರ ಮಟ್ಟಿಗೆ ಕರೊನಾ ಪ್ರಮಾಣ ಹೆಚ್ಚಾಯಿತು ಎಂದು ಎಲ್ಲರಿಗೂ ಗೊತ್ತಿರುವ ವಿಚಾರ.
ಇನ್ನೂ ಸಹ ತಬ್ಲಿಘಿ ಸಂಪರ್ಕದ ಅನೇಕ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ. ಹೀಗಿರುವಾಗ ಮುಂಬೈನಲ್ಲಿ ಮುಸ್ಲಿಂ ಧಾರ್ಮಿಕ ಸಭೆಯೊಂದರಲ್ಲಿ ಪಾಲ್ಗೊಂಡು ವಾಪಸ್ ಆದ ಗುಂಪೊಂದು ಕರ್ನಾಟಕ-ಮಹಾರಾಷ್ಟ್ರ ಗಡಿಯಾದ ವಿಜಯಪುರ ಜಿಲ್ಲೆಯ ಧೂಳಖೇಡ ಮೂಲಕ ರಾಜ್ಯಕ್ಕೆ ಪ್ರವೇಶ ಮಾಡಲು ಮುಂದಾಗಿತ್ತು.
ಇದನ್ನು ಓದಿ:ಮತ್ತೊಂದು ದುರಂತ: ವಲಸೆ ಕಾರ್ಮಿಕರು ಪ್ರಯಾಣಿಸುತ್ತಿದ್ದ ಲಾರಿ ಪಲ್ಟಿ, 5 ಮಂದಿ ಸಾವು
ಒಟ್ಟು 13 ಜನರಿದ್ದ ಖಾಸಗಿ ಬಸ್​​ನ್ನು ತಡೆದು ನಿಲ್ಲಿಸಿದ ಪೊಲೀಸರು, ಅವರಿಗೆ ಪ್ರವೇಶ ನಿರಾಕರಿಸಿದ್ದಾರೆ. ಇವರೆಲ್ಲರೂ ವಿಜಯಪುರದವರೇ ಆಗಿದ್ದು, 2 ತಿಂಗಳ ಹಿಂದೆ ಮುಂಬೈನ ಮಲಾಡ್​ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು, ವಾಪಸ್​ ಬಂದಿದ್ದೀವಿ ಎಂದು ಮಾಹಿತಿ ನೀಡಿದ್ದಾರೆ. ಇವರು ಮಹಾರಾಷ್ಟ್ರದಿಂದ ಪಾಸ್​ ಪಡೆದೇ ಬಂದಿದ್ದಾರೆ.
13 ಮಂದಿಗೆ ಸ್ಕ್ರೀನಿಂಗ್​ ಟೆಸ್ಟ್ ಮಾಡಿರುವ ಪೊಲೀಸ್ ಅಧಿಕಾರಿಗಳು ಅವರನ್ನು ಒಳಗೆ ಬಿಡುತ್ತಿಲ್ಲ. ಗಡಿಯಲ್ಲೇ ತಡೆದು ನಿಲ್ಲಿಸಿದ್ದು, ಹಿರಿಯ ಅಧಿಕಾರಿಗಳ ಸೂಚನೆಗೆ ಕಾಯುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)
ಇದನ್ನು ಓದಿ:ಮಾಜಿ ಶಾಸಕ ವೈ.ಎಸ್​.ವಿ.ದತ್ತ ಅವರು ರೈತರ ಜಮೀನಿಗೆ ತೆರಳಿ ಮಾಡಿದ ಕೆಲಸ ಮೆಚ್ಚುವಂಥದ್ದು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
